ಗಿರಿಜನ ಮಹಿಳೆಯರಲ್ಲಿ ಮುಟ್ಟಿನ ನಿರ್ವಹಣೆಯಲ್ಲಾದಪರಿಸರಸ್ನೇಹಿ ಬದಲಾವಣೆ
ಋತುಚಕ್ರ ಅಥವಾಮುಟ್ಟುಮಹಿಳೆಯರಲ್ಲಿಉಂಟಾಗುವನೈಸರ್ಗಿಕ ಕ್ರಿಯೆ. ಆದರೆಇದರಸುತ್ತಹಲವಾರುಮೂಢನಂಬಿಕೆಗಳು, ನಾಚಿಕೆ ಹಾಗೂಸಂಕೋಚಗಳಿಂದಮುಟ್ಟಿನಸರಿಯಾದನಿರ್ವಹಣೆಆಗುತ್ತಿಲ್ಲ. ಸರಿಯಾದಮಾರ್ಗದರ್ಶನಮತ್ತುಅರಿವಿನಿಂದಮುಟ್ಟಿನಸಮಯದಲ್ಲಿಮಹಿಳೆಯರುಅನುಭವಿಸುವಹಲವಾರುತೊಂದರೆಗಳಿಂದಮುಕ್ತಿಸಾಧ್ಯ. ಮುಟ್ಟಿನತ್ಯಾಜ್ಯದವೈಜ್ಞಾನಿಕವಿಲೇವಾರಿಯಿಂದಪರಿಸರಪ್ರದೂಷಣೆತಪ್ಪುತ್ತದೆ. ಮುಟ್ಟಿನಸಮಯದಲ್ಲಿಕೈಗೊಳ್ಳಬೇಕಾದನೈರ್ಮಲ್ಯಾಭ್ಯಾಸಮತ್ತುಮುಟ್ಟಿನ ತ್ಯಾಜ್ಯದವೈಜ್ಞಾನಿಕವಿಲೇವಾರಿಯಿಂದಚಾಮರಾಜನಗರ ಜಿಲ್ಲೆಯಪುಣಜನೂರುಗ್ರಾಮ ಪಂಚಾಯಿತಿಯಲ್ಲಿಮಹತ್ತರಬದಲಾವಣೆ ಆಗಿದೆ.
ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲ್ಲೂಕಿನಪುಣಜನೂರು ಗ್ರಾಮ ಪಂಚಾಯಿತಿಯುಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ಗಳಅಂತರದಲ್ಲಿದ್ದು, 15 ಕಿ.ಮೀಗಳ ಕಾಡಿನದಾರಿಯಿಂದಕೂಡಿದೆ. ಈ ಗ್ರಾಮ ಪಂಚಾಯಿತಿಯಲ್ಲಿಒಟ್ಟು 8652ಜನಸಂಖ್ಯೆ ಇದ್ದು,ಇದರಲ್ಲಿ ಆದಿವಾಸಿಗಳ ಜನಸಂಖ್ಯೆ 4251.ಒಟ್ಟು967ಆದಿವಾಸಿಗಳ ಕುಟುಂಬಗಳು ಇದೆ.ಪುಣಜನೂರು ಗ್ರಾಮ ಪಂಚಾಯಿತಿಯಲ್ಲಿ 18 ಗ್ರಾಮಗಳು ಇದ್ದು ಎಲ್ಲಾ ಗ್ರಾಮಗಳು ಅರಣ್ಯದೊಳಗೆ ನೆಲೆಸಿವೆ.ಇಲ್ಲಿನ ಜನರು ಕಾಡಿನ ನಡುವೆಯೇ ತಮ್ಮ ಜೀವನ ಸಾಗಿಸುತ್ತಿದ್ದಾರೆ.ಇಲ್ಲಿನ ಅರಣ್ಯ ಪ್ರದೇಶವು ನೋಡುಗರ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.
ಆದಿವಾಸಿಗಳುದಿನ ನಿತ್ಯ ಬಳಸುವ ಪ್ಲಾಸ್ಟಿಕ್ ಮತ್ತು ಮಹಿಳೆಯರು ಮುಟ್ಟಿನಸಮಯದಲ್ಲಿಬಳಸಿದ ಸ್ಯಾನಿಟರಿ ಪ್ಯಾಡ್‌ಗಳು ಹಾಗೂಇತರೆ ತ್ಯಾಜ್ಯಗಳನ್ನು ಸ್ಥಳೀಯರುಅರಣ್ಯದ ಉದ್ದಗಲಕ್ಕೂ ಎಲ್ಲೆಂದರಲ್ಲಿ ಬಿಸಾಡಲು ಪ್ರಾರಂಭಿಸಿದ್ದರಿಂದ ಅರಣ್ಯಪ್ರದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯಗಳು ಆವರಿಸಲು ಪ್ರಾರಂಭಿಸಿತು. ಇದರಿಂದಪ್ರಾಣಿಮತ್ತುಸಸ್ಯ ಸಂಕುಲಕ್ಕೂ ಸಂಕಷ್ಟ ಬಂದೊದಗಿತು.
ಆದಿವಾಸಿ ಮಹಿಳೆಯರೇ ಹೇಳುವ ಪ್ರಕಾರ ಅವರು ಮುಟ್ಟಿನ ದಿನಗಳಲ್ಲಿ ಒಂದು ವಾರಗಳ ಕಾಲ ಮನೆಯ ಒಳಗೆ ಪ್ರವೇಶಿಸುವುದಿಲ್ಲ. ಊಟವನ್ನುಸಹಹೊರಗೆ ಮಾಡುತ್ತಿದ್ದರು. ಮುಟ್ಟಿನಸಮಯದಲ್ಲಿಪಾಲಿಸುವಂತಹನೈರ್ಮಲ್ಯಕರಅಭ್ಯಾಸಗಳಾದಂತಹಸ್ನಾನ ಮಾಡುವುದು, ಶುದ್ಧವಾದ ಬಟ್ಟೆಯನ್ನು ಬಳಸುವುದು, ಬಟ್ಟೆ ಅಥವಾ ಪ್ಯಾಡನ್ನು ಬಳಸುವ ಮುನ್ನ ಹಾಗೂ ಬಳಸಿದ ನಂತರ ಕೈಗಳನ್ನು ತೊಳೆಯುವುದರಕುರಿತುಅರಿವಿರಲಿಲ್ಲ. ಈಪರಿಸ್ಥಿತಿಸುಧಾರಿಸಲುಪ್ರಥಮ ಆದ್ಯತೆಯೊಂದಿಗೆ ಈ ಪಂಚಾಯಿತಿಯನ್ನು ಆಯ್ಕೆ ಮಾಡಿ ಸತತ ಮೂರು ವರ್ಷಗಳಕಾಲ ಋತುಚಕ್ರ ನಿರ್ವಹಣೆ ಕುರಿತುಹಲವಾರು ಹಂತಗಳಲ್ಲಿ ವಿವಿಧ ಐ.ಇ.ಸಿ, ಬಿ.ಸಿ.ಸಿ, ಎಫ್.ಜಿ.ಡಿ, ಕಾರ್ಯಕ್ರಮಗಳ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು.ಜನ ಪ್ರತಿನಿಧಿಗಳು, ಪ್ರಮುಖ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಮೂಲಕವೇ ಮಾಹಿತಿ ಶಿಕ್ಷಣ ನೀಡಿ ಅರಿವುಮೂಡಿಸಲಾಯಿತು.ಆದಿವಾಸಿ ಜನಾಂಗದ ಮಹಿಳೆಯರು ನರೇಗಾ ಯೋಜನೆ ಹಾಗೂ ಇತರೆ ಯೋಜನೆಗಳಡಿಯಲ್ಲಿ ಕೆಲಸ ನಿರ್ವಹಿಸುವ ಸ್ಥಳಗಳಿಗೆ ಭೇಟಿ ನೀಡಿ ಋತುಚಕ್ರ ನಿರ್ವಹಣೆ ಮತ್ತು ಈ ಸಂಧರ್ಭದಲ್ಲಿ ಕೈಗೊಳ್ಳಬಹುದಾದ ವೈಯಕ್ತಿಕ ನೈರ್ಮಲ್ಯಾಭ್ಯಾಸಗಳಕುರಿತು ಮಾಹಿತಿ ನೀಡಿ ಮನವರಿಕೆಮಾಡಲಾಯಿತು
ಇದರ ಜೊತೆಗೆ ಆಶಾ/ಅಂಗನವಾಡಿ ಕಾರ್ಯಕರ್ತೆಯರು, NRLM , MBK, ಸ್ವ-ಸಹಾಯ ಗುಂಪುಗಳ ಮಹಿಳಾ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರಿಗೆ ಋತು ಚಕ್ರ ನಿರ್ವಹಣೆ ಕುರಿತು, ತಾಲ್ಲೂಕು,ಗ್ರಾಮ ಪಂಚಾಯಿತಿ ಹಂತಗಳಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ತಂಡ ಮತ್ತು ಇತರ ನುರಿತ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಯಿತು. ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿಅದರಮಾರ್ಗಸೂಚಿಗಳನ್ವಯ ಮಹಿಳೆಯರು ಮುಟ್ಟಿನ ಸಮಯದಲ್ಲಿ ಬಳಸುವ ಪ್ಯಾಡ್‌ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸಲುವಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದರಂತೆ “ಇನ್ಸಿನರೇಟರ್” ಯಂತ್ರವನ್ನು ಸಹ ಖರೀದಿಸಿ ಕೋಳಿಪಾಳ್ಯ ಎಂಬ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಳವಡಿಸಲಾಯಿತು.
ಸತತ ಭೇಟಿ ಹಾಗೂಅರಿವಿನ ಕಾರ್ಯಕ್ರಮಗಳ ಫಲವಾಗಿ ಮನಪರಿವರ್ತನೆಗೊಂಡ ಮಹಿಳೆಯರು ಮುಟ್ಟಿನ ಸಮಯಗಳಲ್ಲಿ ಹೆಚ್ಚಾಗಿ ಹತ್ತಿಯಸ್ವಚ್ಛಬಟ್ಟೆಯನ್ನು ಬಳಸುತ್ತಿದ್ದಾರೆ. ಇದುಪರಿಸರ ಸ್ನೇಹಿಯಾಗಿರುವುದರಿಂದಹತ್ತಿಯ ಬಟ್ಟೆಗಳನ್ನೇಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಸಾಬೂನುಬಳಸಿ ಮುಟ್ಟಿನ ಸಮಯದಲ್ಲಿ ಉಪಯೋಗಿಸಿದ ಬಟ್ಟೆಯನ್ನು ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಮರುಬಳಕೆಮಾಡುತ್ತಿದ್ದೇವೆ.ಬಟ್ಟೆ ಬಳಕೆ ಮಾಡುವುದರಿಂದ ಹಣ ಉಳಿತಾಯವು ಕೂಡ ಆಗುತ್ತಿದೆಎನ್ನುತ್ತಾರೆ. ಒಟ್ಟಾರೆ ಮಹಿಳೆಯರು ಅಶುಚಿತ್ವದಿಂದ ನೈರ್ಮಲ್ಯದೆಡೆಗೆ ಸಾಗಿದ್ದಾರೆ.ಇದುಒಂದು ಕ್ರಾಂತಿಯೇ ಸರಿ.
ಈಕುರಿತುಐ.ಇ.ಸಿ ತಂಡದವರುತಿಳುವಳಿಕೆಗಾಗಿತೋರಿದ “ಮುಟಿನ ಜಗತ್ತು” ಮುಂತಾದಕಿರುಚಿತ್ರ/ಸಾಕ್ಸ್ಯಚಿತ್ರಗಳಿಂದ ಹಲವಾರುಮಾಹಿತಿದೊರೆಯಿತು ಎನ್ನುತ್ತಾರೆ ಸ್ಥಳೀಯರು.ಜೊತೆಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಇನ್ಸಿನರೇಟರ್ ಅಳವಡಿಸಿರುವುದರಿಂದ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಶಾಲೆಯ ವಿದ್ಯಾರ್ಥಿನಿಯರು ಹಾಗು ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಎಂಬುದಾಗಿ ಇಲ್ಲಿನ ಮಹಿಳೆಯ ಅನಿಸಿಕೆಯಾಗಿದೆ.
ಇಲ್ಲಿನ ಆದಿವಾಸಿ ಜನಾಂಗದವರು ಕಾಡನ್ನು ದೇವರು ಎಂದು ನಂಬಿ, ಕಾಡಿನೊಂದಿಗೆ ಜೀವನ ಸಾಗಿಸುವ ನಾವುನಮ್ಮ ಪರಿಸರವನ್ನೇಕೆ ಹಾಳು ಮಾಡಬೇಕು, ನಮ್ಮ ನೀರನ್ನು ಏಕೆಕಲಿಷಿತಗೊಳಿಸಬೇಕು? ನಮ್ಮ ಕುಟುಂಬ ನಮ್ಮ ಗ್ರಾಮ(ಪೋಡು) ಇವುಗಳಿಗೆ ತೊಂದರೆ ಆಗದ ಹಾಗೆ ನಾವು ನಮ್ಮ ಕಾಡನ್ನು ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸದಾ ಸಿದ್ದರಿರುತ್ತೇವೆ ಎಂಬುದಾಗಿ ಇಲ್ಲಿನ ಮಹಿಳೆಯರು ಪಣ ತೊಟ್ಟಿದ್ದಾರೆ. ಒಟ್ಟಾರೆ ಆದಿವಾಸಿ ಮಹಿಳೆಯರು ಋತು ಚಕ್ರದ ಸಮಯದಲ್ಲಿ ಸ್ವಚ್ಛತೆ ಬಗ್ಗೆ ಅನುಸರಿಸುವ ವಿಧಾನಗಳು ಮಿತವ್ಯಯ ಮತ್ತುಪರಿಸರ ಸ್ನೇಹಿಯಾಗಿದ್ದು, ಇತರೆ ಭಾಗದ ಮಹಿಳೆಯರು ಇದನ್ನು ಅಳವಡಿಸಿಕೊಂಡು ವೈಯಕ್ತಿಕ ಸ್ವಚ್ಚತೆ ಹಾಗೂ ಪರಿಸರದ ಸ್ವಚ್ಛತೆ ಬಗ್ಗೆ ಗಮನಹರಿಸಿದ್ದಾರೆ.
ಪರಿಸರಸ್ನೇಹಿಯಾಗಿಬದುಕೋಣ ನಮ್ಮನಾಳೆಗಳಸುಭದ್ರಗೊಳಿಸೋಣ
2,140 total views, 1 views today