ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಗ್ರಾಮಪಂಚಾಯಿತಿಯಲ್ಲಿ ದೃಶ್ಯ ಸ್ವಚ್ಛತೆ ಕಾಪಾಡಲು ಇಂಗುಗುAಡಿಗಳ ನಿರ್ಮಾಣ ಮಾಡಲಾಗಿದೆ.
ಸ್ವಚ್ಛ ಭಾರತ್ ಮಿಷನ್(ಗ್ರಾ) ಎರಡನೇ ಹಂತದಲ್ಲಿ ಕುಟುಂಬಗಳಲ್ಲಿ ಉತ್ಪಾದನೆಯಾಗುವ ಘನ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಸಂಕೀರ್ಣಗಳು ಕಾರ್ಯನಿರ್ವಹಿಸುತ್ತಿವೆ. ಮನೆಗಳಲ್ಲಿ ದಿನನಿತ್ಯ ಬಳಸಿದ ನೀರನ್ನು ಚರಂಡಿಗಳ ಮೂಲಕ ವಿಲೇವಾರಿ ಮಾಡಲಾಗುತ್ತಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ ಮತ್ತು ಜಾಗದ ಅಭಾವದಿಂದ ದಿನ ನಿತ್ಯ ಬಳಸಿದ ಬೂದು ನೀರನ್ನು ವಿಲೇವಾರಿ ಮಾಡಿ ಸಾರ್ವಜನಿಕ ರಸ್ತೆಗಳ ಮೇಲೆ ತ್ಯಾಜ್ಯ ನೀರು ಹರಿಯುತ್ತಿರುವುದು ಕಂಡು ಬರುತಿತ್ತು ಹಾಗೂ ಗ್ರಾಮದ ರಸ್ತೆಗಳು ಸ್ವಚ್ಛತೆಯಿಂದ ಕೂಡಿಲ್ಲದೆ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದವು.
ಹಂಗರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇದನ್ನು ತಡೆಗಟ್ಟಲು ಜಾಗದ ಲಭ್ಯತೆಯಿರುವ ಕುಟುಂಬಗಳಲ್ಲಿ ಇಂಗುಗುAಡಿ ನಿರ್ಮಿಸಲಾಯಿತು. ಇಂಗು ಗುಂಡಿ ನಿರ್ಮಾಣ ಮಾಡಲು ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಿ ಸುತ್ತಲಿನ ಸ್ವಚ್ಛತೆಯನ್ನು ಕಾಪಾಡಿ, ರಸ್ತೆ ಮೇಲೆ ಹರಿಯುವ ತ್ಯಾಜ್ಯ ನೀರನ್ನು ತಡೆಗಟ್ಟಲು, ಸಾಂಕ್ರಾಮಿಕ ರೋಗಗಳು ಹರಡುವುದನ್ನು ನಿಯಂತ್ರಣಗೊಳಿಸಲು ಅಂತರ್ಜಲ ವೃದ್ಧಿಯಾಗಲು ಇಂಗು ಗುಂಡಿ ನಿರ್ಮಾಣದ ಮಹತ್ವದ ಅರಿವು ಮೂಡಿಸಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಯಿತು.
ಮೊದಲಿಗೆ
ಊರಿನಜನರುಅರಿವಿನಕೊರತೆಯಕಾರಣಯೋಜನೆಗೆವಿರೋಧವ್ಯಕ್ತಪಡಿಸಿಸಹಕಾರತೋರಲಿಲ್ಲ.ಗ್ರಾಮೀಣ ಜನರಿಗೆ ಬೂದು ನೀರಿನಿಂದ ನಿರ್ವಹಣೆಯಿಂದ ಆಗುವ ಅನುಕೂಲಗಳ ವಿವರಿಸಲಾಯಿತು. ಗ್ರಾಮ ಪಂಚಾಯಿತಿಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗೆ ಸಂಬAಧಿಸಿದAತೆ ತರಬೇತಿ, ಮನೆ ಮನೆ ಬೇಟಿ,ಕಿರುಚಿತ್ರ ಪ್ರದರ್ಶನ, ಗೋಡೆ ಬರಹ ಮುಂತಾದ ಚಟುವಟಿಕೆಗಳ ಮೂಲಕ ಅರ್ಥೈಸಿ, ಅವರಸಂದೇಹದೂರಮಾಡಿಈ ಸಮಸ್ಯೆ ಪರಿಸಹರಿಸಲಾಯಿತು.
ಜಿಲ್ಲಾ ಹಂತದಲ್ಲಿ ನೋಡಲ್ ಅಧಿಕಾರಿಗಳು,ತಾಲ್ಲೂಕು ಹಂತದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ನೇತೃತ್ವದಲ್ಲಿ ಜಿಲ್ಲಾ ಎಸ್.ಬಿ.ಎಂ.ಜಿ. ಸಮಾಲೋಚಕರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು ಒಟ್ಟಾಗಿ ಬೂದು ನೀರು ನಿರ್ವಹಣೆ ಕಾಮಗಾರಿ ಕೈಗೊಂಡರು.ಯೋಜನೆಯನ್ನುಅಂದಾಜು ರೂ.೧,೫೯,೦೦೦/-ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಯಿತು.ಯೋಜನೆಯ ಸುಸ್ಥಿರ ಕಾರ್ಯಾಚರಣೆಗಾಗಿನಿರಂತರವಾಗಿ ಫಿಲ್ಟರ್‌ಗಳನ್ನು ಸ್ವಚ್ಛ ಮಾಡುವುದು, ನಿರಂತರ ಸಮುದಾಯ, ಸಂಘ ಸಂಸ್ಥೆಗಳಿAದ ಅನುಸರಣೆ ಮತ್ತು ನಿರ್ವಹಣೆ ಮದಲಾಗುತ್ತಿದೆ.
ಗ್ರಾಮೀಣ ಕುಟುಂಬಗಳು ಬಳಸಿದ ನೀರು ಮನೆಯ ಸುತ್ತ ಮುತ್ತ ಹಾಗೂ ಗ್ರಾಮಗಳ ಬೀದಿಗಳಲ್ಲಿ ಕೊಳಚೆ ನಿರ್ಮಾಣವಾಗುವುದನ್ನು ತಪ್ಪಿಸಲು ಇಂಗು ಗುಂಡಿಗಳ ನಿರ್ಮಾಣಸಹಕಾರಿಯಾಗಿರುತ್ತದೆ. ಅಲ್ಲದೆ ಇಂಗು ಗುಂಡಿಗಳ ನಿರ್ಮಾಣದಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಗ್ರಾಮಗಳ ಬೀದಿಗಳಲ್ಲಿ, ಮನೆಗಳ ಸುತ್ತ ಮುತ್ತ ನಿಲ್ಲುವ ನೀರಿನಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವಲ್ಲಿ ಇಂಗುಗುಂಡಿಗಳು ಮುಖ್ಯ ಪಾತ್ರವಹಿಸುತ್ತದೆ.
2,075 total views, 1 views today