Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ವಿಜಯನಗರ ಜಿಲ್ಲೆಯ ಹಂಪಿ ದೇವಾಲಯವನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ. ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯ ದ್ರಾವಿಡ ಶೈಲಿಯ ಕಲೆ ಮತ್ತು ವಾಸ್ತುಶಿಲ್ಪಗಳು, ಕುತೂಹಲಕಾರಿ ಅವಶೇಷಗಳು, ವಿರೂಪಾಕ್ಷ ದೇವಾಲಯ ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರ ನೆಚ್ಚಿನ ತಾಣವಾಗಿವೆ. ಪ್ರತಿದಿನ ಲಕ್ಷಾಂತರ ಮಂದಿ ಪ್ರವಾಸಿಗರು ಹಂಪಿಯನ್ನು ನೋಡಲೆಂದೇ ಇಲ್ಲಿಗೆ ಬರುತ್ತಿರುತ್ತಾರೆ. ಹೌದು ಇಂತಹ ಐತಿಹಾಸಿಕ ಕ್ಷೇತ್ರವಾದ ಹಂಪಿಯಲ್ಲಿ ಶುಚಿತ್ವ ಕಾಪಾಡುವುದು ಒಂದು ಬಹುದೊಡ್ಡ ಸವಾಲೇ ಸರಿ.

ವಿಜಯನಗರ ಜಿಲ್ಲೆಯ 137 ಗ್ರಾಮಪಂಚಾಯಿತಿಗಳ ಪೈಕಿ ಹಂಪಿ ಗ್ರಾಮಪಂಚಾಯಿತಿ ಒಂದು. ಇಲ್ಲಿಯ ಜಿಲ್ಲಾ ಕೇಂದ್ರವಾದ ಹೊಸಪೇಟೆಯಿಂದ ಸುಮಾರು 12.7 ಕಿ.ಮೀ ದೂರದಲ್ಲಿರುವ ಹಂಪಿ ಪಂಚಾಯಿತಿಯು 697 ಜನವಸತಿಗಳನ್ನು ಹೊಂದಿದೆ. ಇದರಲ್ಲಿ 232 ಅಂಗಡಿಗಳು ಹಾಗೂ 3709 ಜನರು ವಾಸವಾಗಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ವೈಭವ ಮೆರೆದ ಹಂಪಿಗೆ ಪ್ರವಾಸಿ ತಾಣಗಳನ್ನು ನೋಡಿ ಕಣ್ತುಂಬಿಕೊಳ್ಳಬೇಕೆಂದು ಬರುವ ಪ್ರವಾಸಿಗರು ತಾವು ಕಟ್ಟಿಕೊಂಡು ತಂದ ಆಹಾರದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಪ್ರವಾಸಿ ತಾಣದ ಮೆರುಗನ್ನು ಕಳೆಗುಂದುವಂತೆ ಮಾಡಿತ್ತು.

ತ್ಯಾಜ್ಯ ನಿರ್ವಹಣೆಯನ್ನು ಸವಾಲಾಗಿ ಸ್ವೀಕರಿಸಿದ ಹಂಪಿ ಗ್ರಾಮಪಂಚಾಯಿತಿಯು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿತು. ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛ ಸಂಕೀರ್ಣ ಘಟಕವನ್ನು ನಿರ್ಮಿಸಲಾಯಿತು. ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಎಲ್ಲಾ ಮನೆಗಳಿಗೂ 2 ಕಸದ ಬುಟ್ಟುಗಳನ್ನು ನೀಡಿ ಹಸಿ ತ್ಯಾಜ್ಯವನ್ನು ಹಸಿರು ಬುಟ್ಟಿಯಲ್ಲಿ ಹಾಕಿ, ಒಣ ತ್ಯಾಜ್ಯವನ್ನು ನೀಲಿ ಬುಟ್ಟಿಗೆ ಹಾಕಿ ಸ್ವಚ್ಛ ವಾಹಿನಿಗೆ ನೀಡುವಂತೆ ಎಲ್ಲರಲ್ಲು ವಿವಿಧ ಐಇಸಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಯಿತು.

ಆರಂಭದಲ್ಲಿ ತ್ಯಾಜ್ಯನಿರ್ವಹಣೆಗೆಂದು ನೀಡಲಾದ ಕಸದ ಬುಟ್ಟಿಗಳನ್ನು ಎಲ್ಲರು ಬೇರೆ ಕೆಲಸಕ್ಕೆ ಬಳಸಲಾರಂಭಿಸಿದ್ದನ್ನು ಗಮನಿಸಿ ಈ ಬುಟ್ಟಿಗಳು ಬೇರೆ ಕೆಲಸದ ಉಪಯೋಗಕ್ಕೆ ಬಾರದಂತೆ ಕಸದ ಬುಟ್ಟಿಗಳಿಗೆ ತೂತು ಮಾಡಿ ಇದನ್ನು ತ್ಯಾಜ್ಯ ನಿರ್ವಹಣೆಗೆ ಮಾತ್ರ ಬಳಸುವಂತೆ ಜಾಗೃತಿ ಮೂಡಿಸಲಾಯಿತು. ಬಳಿಕ ನಿರಂತರವಾಗಿ ವಿವಿಧ ಐಇಸಿ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಜನರಿಗೆ ತ್ಯಾಜ್ಯನಿರ್ವಹಣೆಯ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ಕೊನೆಗೂ ಪಂಚಾಯಿತಿ ಯಶಸ್ಚಿಯಾಯಿತು.

ಇದರಿಂದ ಎಚ್ಚೆತ್ತ ಗ್ರಾಮದ ಯುವಜನರು, ಶಾಲಾ ಮಕ್ಕಳು ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರೊಂದಿಗೆ ಜೊತೆಗೂಡಿ ಸ್ವಚ್ಛ ಹಂಪಿ ಅಭಿಯಾನ ಕೈಗೊಂಡರು. ಕಸ ಸಂಗ್ರಹಿಸುವ ವಾಹನಗಳನ್ನು ಅಭಿವೃದ್ಧಿಪಡಿಸಲಾಯಿತು. ಮನೆಮನೆಗೆ ತೆರಳಿ ಕಸವನ್ನು ಬೇರ್ಪಡಿಸಿ ಸ್ವಚ್ಛವಾಹಿನಿಗೆ ನೀಡಬೇಕೆಂದು ತಿಳಿಸಿದರು. ಪಂಚಾಯಿತಿ ವ್ಯಾಪ್ತಿಯ ಮಹಿಳೆಯರ ಸ್ವ-ಸಹಾಯ ಗುಂಪಿನ ಆಯ್ದ ಸದಸ್ಯೆಯರಿಗೆ ಕಸ ವಿಂಗಡನೆ ಮತ್ತು ಮರುಬಳಕೆ ಕುರಿತು ತರಬೇತಿ ನೀಡಲಾಯಿತು.

ಸ್ವಚ್ಛತೆಗೆ ಕೈ ಜೋಡಿಸಿದ ರೆಸ್ಟೋರೆಂಟ್ ಮಾಲೀಕ

ಮನೆಮನೆಯಿಂದಲೇ ಕಸ ಸಂಗ್ರಹಿಸುತ್ತಿದ್ದರೂ ಕೆಲ ನಿವಾಸಿಗಳು ಖಾಲಿ ಇರುವ ಪ್ರದೇಶಗಳಲ್ಲಿ ಕಸ ತಂದು ಎಸೆಯುತ್ತಿದ್ದರು. ಇದರಿಂದ ರಸ್ತೆಯೆಲ್ಲಾ ಕಸಮಯವಾಗಿತ್ತು. ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಿಂದ ಪ್ರೇರಣೆಗೊಂಡ ಇಲ್ಲಿಯ ರೆಸಾರ್ಟ್ ಮಾಲೀಕರೊಬ್ಬರು ತಮ್ಮ ಸ್ವಂತ ಹಣದಿಂದ ರಸ್ತೆ ಬದಿ ಬಿದ್ದಿರುವ ಕಸವನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸ್ವಚ್ಛಗೊಳಿಸಿ, ಕಸವನ್ನು ರಸ್ತೆಯಲ್ಲಿ ಎಸೆಯದೆ, ಕಸದ ತೊಟ್ಟಿಯಲ್ಲೇ ಹಾಕಿ. ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷ.

ಸಮರ್ಪಕ ತ್ಯಾಜ್ಯ ವಿಂಗಡಣೆ ಮೂಲಕ ವಿಲೇವಾರಿ ಆಗುವ ಹಸಿ ಕಸ ಮತ್ತು ಒಣ ತ್ಯಾಜ್ಯವನ್ನು ಆದಾಯದ ಮೂಲವಾಗಿಸಿಕೊಳ್ಳುವಲ್ಲಿ ಹಂಪಿ ಗ್ರಾಮ ಪಂಚಾಯಿತಿ ಇದೀಗ ಯಶಸ್ವಿಯಾಗಿದೆ. ತಮ್ಮಲ್ಲಿ ಸಂಗ್ರಹವಾಗುವ ತ್ಯಾಜ್ಯದ ಮರುಬಳಕೆ ಮಾಡಿಕೊಳ್ಳುತ್ತಿದ್ದು, ಹಸಿಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಿದರೆ, ಒಣಕಸವನ್ನು ವಿವಿಧ ವಿಭಾಗಗಳಲ್ಲಿ ಬೇರ್ಪಡಿಸಿ ಮಾರಾಟ ಮಾಡಿ ಆದಾಯ ಗಳಿಸುತ್ತಿದೆ.

ಪ್ರತಿ ತಿಂಗಳು ಸರಾಸರಿ 800 ಕೆ.ಜಿ ಒಣ ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತನೆಗೊಳ್ಳುತ್ತಿದ್ದು, ಈವರೆಗೂ ಒಟ್ಟು 1064 ಕೆ.ಜಿ ಒಣತ್ಯಾಜ್ಯವನ್ನು ಮಾರಾಟ ಮಾಡಲಾಗಿದೆ. ಇದರಿಂದ ಬಂದ ಹಣದಲ್ಲಿ ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಿಸುವ ಸ್ವ-ಸಹಾಯ ಸಂಘದ ವೇತನ ಸೇರಿದಂತೆ ಇತರೆ ನಿರ್ವಹಣೆ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರವಾಸಿ ತಾಣಗಳಲ್ಲಿ ಈ ಕೆಳಗಿನ ಗೋಡೆಬರಹಗಳನ್ನು ಬಳಸಲಾಗಿದ್ದು, ಈ ಮೂಲಕ ಪಂಚಾಯಿತಿ ಹಂಪಿಯನ್ನು ಸುಂದರವಾಗಿಟ್ಟುಕೊಳ್ಳಲು ಶ್ರಮಿಸುತ್ತಿದೆ.

ಇನ್ನು ಈ ಬಗ್ಗೆ ಕಡ್ಡಿರಾಂಪುರ ಬೇಕರಿ ಅಂಗಡಿ ಮಾಲೀಕ ಬಾಲು ಅವರು ಗ್ರಾಮಪಂಚಾಯಿತಿಯ ಕಾರ್ಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾವು ಮೊದಲು ಕಸವನ್ನು ಚೀಲದಲ್ಲಿ ತುಂಬಿ ಇಟ್ಟು ನಂತರ ಸುಟ್ಟು ಹಾಕುತ್ತಿದ್ದೆವು. ಈಗ ಪಂಚಾಯಿತಿ ವತಿಯಿಂದ ಅರಿವು ಮೂಡಿಸಿದ ನಂತರ ನವೆಂಬರ್ ತಿಂಗಳಿನಿಂದ ಕಸವನ್ನು ಎರಡು ದಿನಕ್ಕೆ ಒಮ್ಮೆ ಕಸದ ಗಾಡಿಗೆ ಕೊಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ. 

ಮತೊವೊಭೆ “6ನೇ ತರಗತಿ ವಿದ್ಯಾರ್ಥಿನಿ ಗೀತಾ ಅವರು ಗ್ರಾಮಪಂಚಾಯಿತಿಯ ಕಾರ್ಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮೊದಲು ನಾವು ಕಸವನ್ನು ವಿಂಗಡಿಸದೆ ಗಾಡಿಗೆ ಹಾಕುತ್ತಿದ್ದೇವು, ಪಿಡಿಓ ಮೇಡಂ ಮತ್ತು ಸಾಹಸ ಸಂಸ್ಥೆಯವರು ಶಾಲೆಗೆ ಬಂದು ಜಾಗೃತಿ ಮೂಡಿಸಿದ ನಂತರ ಹಸಿ ಕಸ, ಒಣ ಕಸವನ್ನು ವಿಂಗಡನೆ ಮಾಡಿ ಸ್ವಚ್ಛವಾಹಿನಿಗೆ ಹಾಕುತ್ತೇವೆ ಎಂದರು”

ಸ್ವಚ್ಛತೆ ಎನ್ನುವುದೊಂದು ನಮ್ಮ ಮನಸ್ಥಿತಿ. ನಮ್ಮ ಮನೆಯಂತೆಯೇ ನಮ್ಮ ಪರಿಸರ, ಊರು, ಕೇರಿಗಳನ್ನು ಸ್ವಚ್ಛವಾಗಿರಿಸಬೇಕೆಂಬ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು. ಪ್ರವಾಸ ಮತ್ತು ಪರವೂರ ಭೇಟಿಯ ಸಂದರ್ಭದಲ್ಲಿ ಪರಿಸರವನ್ನು ಕೆಡಿಸಬಾರದೆಂಬ ಎಚ್ಚರವಿದ್ದರೆ ಕಸ ಮುಕ್ತ ರಾಜ್ಯವನ್ನಾಗಿಸಬಹುದು.

 2,775 total views,  1 views today

WhatsApp chat