Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

https://swachhamevajayate.org/wp-content/uploads/2023/05/1-5-600x500.jpg
https://swachhamevajayate.org/wp-content/uploads/2023/05/2-600x500.jpg

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 7 ತಾಲೂಕುಗಳು ಇದ್ದು, 230 ಗ್ರಾಮ ಪಂಚಾಯತಿಗಳಿವೆ. ಜಿಲ್ಲೆಯಲ್ಲಿ334184 ಮನೆಗಳಿದ್ದು, ಒಟ್ಟು 1447760 ಜನಸಂಖ್ಯೆ ಇದೆ.ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿರುವ ಆಲಂಕಾರು ಗ್ರಾಮ ಪಂಚಾಯತ್ ಉಪ್ಪಿನಂಗಡಿಯಿಂದ ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಸಿಗುತ್ತದೆ. ಕಡಬ ತಾಲೂಕಿನಲ್ಲಿ ೧೮ ಗ್ರಾಮ ಪಂಚಾಯತ್‌ಗಳ ಪೈಕಿ ಮೊದಲ ಹಂತಕ್ಕೆ ಆಯ್ಕೆಯಾದ ೪ ಗ್ರಾಮ ಪಂಚಾಯತ್‌ಗಳಲ್ಲಿ ಆಲಂಕಾರು ಗ್ರಾಮ ಪಂಚಾಯತ್ ಕೂಡ ಒಂದು. ಇನ್ನು ಮುಂದುವರೆದು ಆಲಂಕಾರು ಗ್ರಾಮ ಪಂಚಾಯತ್ ಮೂರನೇ ಹಂತಕ್ಕೂ ಆಯ್ಕೆ ಮಾಡಲಾಗಿದ್ದು ಕಾಮಗಾರಿಗಳು ಅನುಷ್ಠಾನದ ಹಂತದಲ್ಲಿವೆ.

ಮೊದಲು ಈ ಭಾಗದಲ್ಲಿ ಯಥೇಚ್ಛವಾದ ಮಳೆ ಬೀಳುತ್ತಿದ್ದುದರಿಂದ ಮತ್ತು ಕುಮಾರಧಾರ ನದಿಯೂ ಹತ್ತಿರವಿರುವುದರಿಂದ ನೀರಿನ ಸಮಸ್ಯೆ ಅಷ್ಟೇನೂ ಇರಲಿಲ್ಲ. ಆಧುನಿಕತೆ ಬೆಳೆದಂತೆ ಅದರಲ್ಲೂ ಇತ್ತೀಚೆಗೆ ಮಳೆ ಕಮ್ಮಿಯಾದಂತೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುವ ಸಂದರ್ಭಗಳು ಕಾಣಸಿಗುತಿತ್ತು. ಹಾಗಾಗಿ ಜಲಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಆಲಂಕಾರು ಗ್ರಾಮ ಪಂಚಾಯತ್ ಮೂಲಕ ಮನೆಗಳಿಗೆ ನೀರು ಪೂರೈಕೆ ಮಾಡಲುನಿರ್ಧರಿಸಲಾಗುತ್ತದೆ.

https://swachhamevajayate.org/wp-content/uploads/2023/05/3-2-600x500.jpg

ಎದುರಾದಸವಾಲುಗಳು

ಕಡಬ ತಾಲ್ಲೂಕು ಬಹುತೇಕ ಬೆಟ್ಟಗುಡ್ಡ, ಅರಣ್ಯ ಪ್ರದೇಶಗಳಿಂದ ಕೂಡಿದೆ. ಬಹುತೇಕ ಮನೆಗಳು ಇರುವ ಪ್ರದೇಶ ಭೌಗೋಳಿಕವಾಗಿ ಏರಿಳಿತಗಳಿಂದ ಕೂಡಿದ್ದು ಸಮಪರ್ಕವಾಗಿ ಪೈಪ್‌ಲೈನ್ ಅಳವಡಿಕೆ ಮತ್ತು ಸಮರ್ಪಕ ರೀತಿಯಲ್ಲಿ ನೀರು ಒದಗಿಸುವುದೇ ಸವಾಲಾಗಿತ್ತು . ಹೀಗಾಗಿಜಲಜೀವನ್ ಮಿಷನ್ ಕಾಮಗಾರಿಗಳನ್ನು ಅನುಷ್ಠಾನ ಮಾಡಲುಕಷ್ಟಕರವಾಗಿತ್ತು.

ಎಷ್ಟೇ ಸವಾಲಗಳಿದ್ದರೂ ಜೀವನಕ್ಕೆ ಮೂಲಭೂತ ಅವಶ್ಯಕತೆಯಾದ ನೀರನ್ನು ಪಡೆದುಕೊಳ್ಳಬೇಕು ಎಂಬ ಛಲ ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರಲ್ಲಿದ್ದ ಕಾರಣ ಸವಾಲುಗಳನ್ನು ಎದುರಿಸಿ ಜೊತೆಗೆ ಸಮುದಾಯ ವಂತಿಗೆಯನ್ನು ಸಕಾಲದಲ್ಲಿ ಪಾವತಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅನುಷ್ಠಾನಗೊಳಿಸಲಾಯಿತು.

ಕೇಂದ್ರ, ರಾಜ್ಯ ಸರಕಾರದ ಅನುದಾನ, ಪಂಚಾಯತ್‌ನ 15ನೇ ಹಣಕಾಸು ನಿಧಿ ಮತ್ತು ಫಲಾನುಭವಿಗಳಿಂದ ಸಂಗ್ರಹಿಸಿದ ಸಮುದಾಯ ವಂತಿಗೆ ಮೂಲಕಯೋಜನೆಯನ್ನುಅನುಷ್ಠಾನಗೊಳಿಸಲಾಗಿದೆ. ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಜೊತೆಗೆ ಗ್ರಾಮಸ್ಥರ ಬೆಂಬಲ ಯೋಜನೆಗೆ ದೊರಕಿದೆ.

https://swachhamevajayate.org/wp-content/uploads/2023/05/4-2-600x500.jpg

ಗ್ರಾಮದ ಮನೆಗಳಿಗೆಕಾರ್ಯಾತ್ಮಕನಳಸಂಪರ್ಕದಮೂಲಕಪ್ರತಿದಿನ ಪ್ರತಿಯೊಬ್ಬರಿಗೂ55ಲೀಕುಡಿಯುವನೀರಿನಸೌಕರ್ಯ ಒದಗಿಸಲಾಗಿದೆ. ಈಮೂಲಕಜನರ ಉತ್ತಮ ಆರೋಗ್ಯ ಮತ್ತು ಉತ್ತಮ ಆರ್ಥಿಕ ಪರಿಸ್ಥಿತಿಗೂ ಯೋಜನೆ ಕೊಡುಗೆ ನೀಡಿದೆ.ಜಲ ಜೀವನ್ ಮಿಷನ್ ಯೋಜನೆಯು ಗ್ರಾಮೀಣ ಜನರ ಕುಡಿಯುವ ನೀರಿನ ಅಲೆದಾಟಕ್ಕೆ ಮುಕ್ತಿ ಹಾಡಿದೆ. ಗ್ರಾಮಗಳಿಗೆ ಪರೀಕ್ಷಿತ ಶುದ್ಧ ನೀರು ನೀಡುವುದರ ಮೂಲಕ ಗ್ರಾಮದ ಜನರ ವಿಶೇಷವಾಗಿಮಹಿಳೆಯರ ಆರೋಗ್ಯ ಸುಧಾರಣೆಗೆ ಕಾರಣವಾಗಿದೆ

ಅಂಗನವಾಡಿಗಳಲ್ಲೂ ಕುಡಿಯುವ ನೀರಿಗೆ ಪರದಾಡುತ್ತಿದ್ದರು. ಅಂಗನವಾಡಿಗೆ ಕುಡಿಯುವ ನೀರಿಗೆ ಆಧಾರವಾಗಿದ್ದ ಕೈ ಪಂಪು ಬತ್ತಿ ಹೋದ ಪರಿಣಾಮ ಮತ್ತಷ್ಟು ನೀರಿನ ಸಮಸ್ಯೆ ಎದುರಾಗಿತ್ತು.ಇದನ್ನು ಗಮನಿಸಿ ಪಂಚಾಯತ್ ವತಿಯಿಂದ ಅಂಗನವಾಡಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಜೊತೆಗೆ ಹತ್ತಿರವೇ 20ಸಾವಿರ ಲೀಟರ್ ಸಾಮರ್ಥ್ಯದ ನೆಲಮಟ್ಟದ ಟ್ಯಾಂಕ್ ನಿರ್ಮಿಸಲಾಗಿದೆ. ಇದರಿಂದಗ್ರಾಮದಜನರು ನಿರಾಳರಾಗಿದ್ದಾರೆ.

https://swachhamevajayate.org/wp-content/uploads/2023/05/5-3-600x500.jpg

ಒಂದು ಬಾರಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಂಡರೆ ಮುಂದಿನ 30ವರ್ಷಗಳಿಗೆ ತೊಂದರೆ ಇಲ್ಲವೆಂದು ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರು ಮನಗಂಡಿದ್ದಾರೆ. ಜೊತೆಗೆ ಸುಸ್ಥಿರತೆ ಕಾಪಾಡಲು ಗ್ರಾಮದಲ್ಲಿ ಜಲಮರುಪೂರಣ ಮತ್ತು ಜಲಮೂಲಗಳ ಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಿಸಲು ಕಾರ್ಯೋನ್ಮುಖರಾಗಿದ್ದಾರೆ. ಅದರಂತೆ ಕೆರೆ ಕಟ್ಟೆಗಳ, ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಇಂಗು ಗುಡಿಗಳ ನಿರ್ಮಾಣವನ್ನು ಪ್ರತಿ ಮನೆಗಳಲ್ಲಿ ನಿರ್ಮಿಸಲು ಪ್ರೇರೆಪಿಸಲಾಗುತ್ತಿದೆ. ಮೊದಲ ಹಂತದ ಕಾಮಗಾರಿಗಳು ಈಗಾಗಲೇ ಅನುಷ್ಠಾನಗೊಂಡು ೨ ವರ್ಷ ಕಳೆದಿದೆ. ಸಮರ್ಪಕ ರೀತಿಯಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗುತ್ತಿದೆ. ಈ ಮೂಲಕ ಸಮರ್ಪಕ ನೀರು ಪೂರೈಕೆ ಮತ್ತುಸುಸ್ಥಿರಅಭಿವೃದ್ಧಿಗೆಒತ್ತುನೀಡಲಾಗುತ್ತಿದೆ.

ಗ್ರಾಮ ಪಂಚಾಯತ್‌ನ ಸಮಗ್ರ ಅಭಿವೃದ್ಧಿಗಾಗಿ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ. ಈ ಬಾರಿ ಕಡಬ ತಾಲೂಕಿನಲ್ಲಿ ಈ ಪ್ರಶಸ್ತಿಯನ್ನು ಪಡೆದಿರುವ 2ನೇ ಗ್ರಾಮ ಪಂಚಾಯತ್ ಇದಾಗಿದೆ.

ಜಲ ಜೀವನ್ ಮಿಷನ್ ಮಹತ್ವದ ಯೋಜನೆಯಾಗಿದ್ದು ದೇಶದ ಜನರ ಮೂಲಭೂತ ಅವಶ್ಯಕತೆಯಾದ ಕುಡಿಯುವ ನೀರನ್ನು ಅವರ ಮನೆಯ ಬಾಗಿಲಿಗೆ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಒದಗಿಸಿದೆ. ಯೋಜನೆಯು ದೇಶದ ಸುಸ್ಥಿರ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ.

 2,084 total views,  1 views today

WhatsApp chat