Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

https://swachhamevajayate.org/wp-content/uploads/2023/05/4-1-600x500.jpg
https://swachhamevajayate.org/wp-content/uploads/2023/05/3-1-600x500.jpg
https://swachhamevajayate.org/wp-content/uploads/2023/05/1-4-600x500.jpg

ಕರ್ನಾಟಕ ರಾಜ್ಯದಲ್ಲಿ ಮೈಸೂರು ಜಿಲ್ಲೆಗೆ ಬಹಳ ಮಹತ್ವದ ಸ್ಥಾನವಿದೆ. ಈ ಜಿಲ್ಲೆಯನ್ನು ಸಾಂಸ್ಕೃತಿಕ ರಾಜಧಾನಿ ಎಂದು ಸಹ ಕರೆಯಲಾಗುತ್ತದೆ, ಮೈಸೂರು ಜಿಲ್ಲೆಯಲ್ಲಿ ಒಟ್ಟು 9 ತಾಲ್ಲೂಕುಗಳಿವೆ. ಜಿಲ್ಲೆಯಲ್ಲಿ ಒಟ್ಟು 4,99,695 ಗ್ರಾಮೀಣ ಕುಟುಂಬಗಳಿವೆ ಮತ್ತು 21,99,769 ಜನಸಂಖ್ಯೆಯನ್ನು ಹೊಂದಿರುತ್ತದೆ.

ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಜೀಮರಳ್ಳಿ ಮತ್ತು ಬೆಳಗುಳಿ ಗ್ರಾಮಗಳು ಬರುತ್ತವೆ. ನಂಜನಗೂಡು ತಾಲ್ಲೂಕಿನಲ್ಲಿ ಒಟ್ಟು 45 ಗ್ರಾಮ ಪಂಚಾಯಿತಿಗಳು ಹಾಗೂ 80736 ಕುಟುಂಬಗಳು 336981 ಹಾಗೂ ಜನಸಂಖ್ಯೆಯನ್ನು ಹೊಂದಿರುತ್ತದೆ.

ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಶುದ್ಧ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು "ಮನೆ ಮನೆಗೆ ಗಂಗೆ" ಎಂಬ ಧ್ಯೇಯ ವಾಕ್ಯದೊಂದಿಗೆ ಜಲ ಜೀವನ್ ಮಿಷನ್ ಯೋಜನೆಯನ್ನು ಘೋಷಿಸಿದ್ದು ಇದರ ಸದುಪಯೋಗವನ್ನು ಈಗಾಗಲೇ ಜಿಲ್ಲಾದ್ಯಂತ ಅನೇಕ ಹಳ್ಳಿಗಳು ಪಡೆದುಕೊಳ್ಳುತ್ತಿವೆ. ಆದರೆ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮ ಪಂಚಾಯಿತಿಯ ಜೀಮರಳ್ಳಿ ಮತ್ತು ಬೆಳಗುಳಿ ಗ್ರಾಮದ ಗ್ರಾಮಸ್ಥರು ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರು ಸರಬರಾಜಿಗೆ ಮೀಟರ್ ಅಳವಡಿಕೆ ಆಗಲಿದ್ದು ಇದರಿಂದ ಪ್ರತಿ ತಿಂಗಳು ನಾವು ಬಿಲ್ ಪಾವತಿಸಬೇಕಾಗುತ್ತದೆ ಹಾಗೂ ಈ ಯೋಜನೆ ಅಡಿಯಲ್ಲಿ ನಮಗೆ ಹಾಗೂ ನಾವು ಸಾಕಿ ಸಲಹುತ್ತಿರುವ ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದ ನೀರು ದೊರೆಯುವುದಿಲ್ಲ ಎಂಬ ತಪ್ಪು ಕಲ್ಪನೆಯೊಂದಿಗೆ ನಮ್ಮ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಯಾವುದೇ ಕಾರಣಕ್ಕೂ ಬೇಡ ಎಂದು ಪಟ್ಟು ಹಿಡಿದು ಕುಳಿತಿದ್ದರು.

https://swachhamevajayate.org/wp-content/uploads/2023/05/8-2-600x500.jpg
https://swachhamevajayate.org/wp-content/uploads/2023/05/7-1-600x500.jpg

ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅನುಷ್ಠಾನ ಬೆಂಬಲ ಸಂಸ್ಥೆಯು ಸುತ್ತೂರು ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಸರ್ವ ಸದಸ್ಯರು, ಗ್ರಾಮದ ಪ್ರಮುಖರು, ಯುವ ಮುಖಂಡರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರ ಉಪಸ್ಥಿತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಮಹತ್ವ ತಿಳಿಸುವ ಸಲುವಾಗಿ ವಿಶೇಷ ಗ್ರಾಮ ಸಭೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ವಿಶೇಷವಾಗಿ ಸುತ್ತೂರು ಗ್ರಾಮ ಪಂಚಾಯಿತಿಯ ಸುತ್ತೂರು ಮತ್ತು ಜೀಮರಳ್ಳಿ ಗ್ರಾಮಸ್ಥರಿಗೆ ಜಲ ಜೀವನ್ ಮಿಷನ್ ಯೋಜನೆಯ ಕುರಿತು ಗೊಂದಲಗಳಿದ್ದವು. ಜೆ.ಜೆ.ಎA. ಅಡಿ ಕೇವಲ ಮನುಷ್ಯರಿಗೆ ಶುದ್ಧ, ಸುರಕ್ಷಿತ ನೀರನ್ನು ಒದಗಿಸಲಾಗಿದ್ದು, ಜಾನುವಾರುಗಳಿಗೆ ಒದಗಿಸಲಾಗುವುದಿಲ್ಲ. 55 ಲೀಟರ್ (ಒಬ್ಬ ವ್ಯಕ್ತಿಗೆ) ನೀರನ್ನು ಒದಗಿಸಿದ ನಂತರ ಹೆಚ್ಚು ಪ್ರಮಾಣದ ನೀರನ್ನು ಒದಗಿಸಲಾಗುವುದಿಲ್ಲ. ಮೀಟರ್ ಅಳವಡಿಕೆಯಿಂದ ಹೆಚ್ಚು ನೀರನ್ನು ಬಳಸಿದಂತೆ ಶುಲ್ಕ ಕಟ್ಟುವುದು ಹೆಚ್ಚಾಗುತ್ತದೆ. ಸಮುದಾಯ ವಂತಿಕೆ ಗ್ರಾಮಸ್ಥರಿಗೆ ಹೊರೆ ಎನಿಸುತ್ತದೆ. ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಪಂಚಾಯಿತಿಯಿAದ ಜಾಗವಿರುವುದಿಲ್ಲ.

ಅನುಷ್ಠಾನ ಬೆಂಬಲ ಸಂಸ್ಥೆಯ ಪ್ರತಿನಿಧಿಗಳು ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಂಡರೆ ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಅದರಲ್ಲಿಯೂ ಮಹಿಳೆಯರಿಗೆ ಆಗುವ ಅನುಕೂಲಗಳು, ಮೀಟರ್ ಅಳವಡಿಕೆಯಿಂದ ಆಗುವ ಅನುಕೂಲಗಳು, ಪಂಚಾಯತಿಯಲ್ಲಿನ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಪಾತ್ರ, ಜವಾಬ್ದಾರಿಗಳ ಬಗ್ಗೆ ಕೆಲವೊಂದು ಉದಾಹರಣೆಗಳನ್ನು ನೀಡಿ ವಿವರವಾಗಿ ತಿಳಿಸಿದರು. ಇದನ್ನೆಲ್ಲಾ ಆಲಿಸಿದ ಗ್ರಾಮಸ್ಥರು ತಮ್ಮಲ್ಲಿದ್ದ ಹಲವು ಗೊಂದಲಗಳನ್ನು ಬಗೆಹರಿಸಿಕೊಂಡರು.

https://swachhamevajayate.org/wp-content/uploads/2023/05/6-1-600x500.jpg
https://swachhamevajayate.org/wp-content/uploads/2023/05/5-2-600x500.jpg

ಮುಂದುವರೆದು ಗ್ರಾಮದಲ್ಲಿ ಎಷ್ಟೋ ವರ್ಷದಿಂದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿಕೊಳ್ಳಬೇಕು ಎಂದು ಅಂದುಕೊAಡಿದ್ದರು ಸಹ ವಿವಿಧ ಕಾರಣಗಳಿಂದ ಆಗಿರಲಿಲ್ಲ. ಆದರೆ ಈ ಯೋಜನೆಯ ಗುರಿ ಉದ್ದೇಶಗಳನ್ನು ಕೇಳಿದ ನಂತರ ಈ ಯೋಜನೆ ಅಡಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿಕೊಳ್ಳುವ ಅವಕಾಶ ಇರುವುದು ತಿಳಿದ ನಂತರ ಗ್ರಾಮದ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಎಲ್ಲರೂ ಸೇರಿ ತಮ್ಮ ಹಲವು ವರ್ಷಗಳ ಕನಸಾಗಿದ್ದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಸ್ಥಳವನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಪಂಚಾಯಿತಿಗೆ ತಿಳಿಸಿದರು ಹಾಗೂ ಆದಷ್ಟು ಬೇಗ ನಮ್ಮ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನಗೊಳ್ಳಲಿ ನಾವೆಲ್ಲರೂ ಕಾರ್ಯಾತ್ಮಕ ನಳದ ಮುಖಾಂತರ ಶುದ್ಧ ಸುರಕ್ಷಿತ ಕುಡಿಯುವ ನೀರನ್ನು ಆದಷ್ಟು ಬೇಗ ಕುಡಿಯುವಂತಾಗಲಿ ಎಂದು ಅಭಿಲಾಷೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್, ಮೈಸೂರು, ಗ್ರಾ.ಕು.ನೀ.&ನೈ.ವಿ. ಮೈಸೂರು ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆಯ ಸಹಯೋಗದೊಂದಿಗೆ ಸುತ್ತೂರು ಗ್ರಾಮ ಪಂಚಾಯಿತಿಯಲ್ಲಿ ಜನರಲ್ಲಿ ಜೆ.ಜೆ.ಎಂ. ಕುರಿತು ಇದ್ದ ಗೊಂದಲಗಳನ್ನು ಬಗೆಹರಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಚಟುವಟಿಕೆಗಳಾದ ಗ್ರಾಮ ಕ್ರಿಯಾ ಯೋಜನೆ, ವಿಶೇಷ ಗ್ರಾಮ ಸಭೆ, ಕಿರುಚಿತ್ರ ಪ್ರದರ್ಶನ, ಗ್ರಾಮ ನೀರು ಮತ್ತು ನೈರ್ಮಲ್ಯ ಸದಸ್ಯರುಗಳಿಗೆ ತರಬೇತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಗ್ರಾಮ ಪಂಚಾಯಿತಿ ಸಿಬ್ಬಂದಿ, ಸುತ್ತೂರು, ಜೀಮರಳ್ಳಿ ಮತ್ತು ಬೆಳಗುಳಿ ಗ್ರಾಮದ ಚುನಾಯಿತ ಪ್ರತಿನಿಧಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಉಪವಿಭಾಗ, , ಜೀಮರಳ್ಳಿ ಮತ್ತು ಬೆಳಗುಳಿ ಗ್ರಾಮಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಯಿತು.

https://swachhamevajayate.org/wp-content/uploads/2023/05/9-600x500.jpg
https://swachhamevajayate.org/wp-content/uploads/2023/05/10-600x500.jpg

ಜೀಮರಳ್ಳಿ 293 ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಲು 67.88 ಲಕ್ಷ ರೂಪಾಯಿಗಳು ಮತ್ತು ಬೆಳಗುಲಿ 550 ಕುಟುಂಬಗಳು 118.48 ಲಕ್ಷ ರೂಪಾಯಿಗಳ ಅಂದಾಜು ಯೋಜನೆಯ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.

ಜಲ ಜೀವನ್ ಮಿಷನ್ ಯೋಜನೆಯು ಕೇವಲ ಪ್ರಸ್ತುತ ಜನಸಂಖ್ಯೆಗೆ ಮಾತ್ರ ನೀರನ್ನು ಒದಗಿಸುವ ಉದ್ದೇಶವನ್ನಿಟ್ಟುಕೊಳ್ಳದೇ ಮುಂದಿನ 30 ವರ್ಷದವರೆಗೂ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಹಾಗೂ ಸುರಕ್ಷಿತ ನೀರಿಗಾಗಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ.

ಜಲ ಜೀವನ್ ಮಿಷನ್ ಯೋಜನೆಯ ಸುಸ್ಥಿರ ಅಭಿವೃದ್ಧಿಗೆ ಸಮುದಾಯ ಭಾಗಿತ್ವ ಮತ್ತು ಮಾಲೀಕತ್ವ ಮುಖ್ಯವಾಗಿದೆ. ನೀರಿನ ಮೂಲಗಳ ಮತ್ತು ವ್ಯವಸ್ಥೆಗಳನ್ನು ಸಂರಕ್ಷಣೆ ಮಾಡಿ, ನಮ್ಮ ಭವಿಷ್ಯವನ್ನು ಸುಭದ್ರಗೊಳಿಸೋಣ.

 1,910 total views,  1 views today

WhatsApp chat