Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

https://swachhamevajayate.org/wp-content/uploads/2023/05/1-1-300x400.png
https://swachhamevajayate.org/wp-content/uploads/2023/05/2-300x400.png

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೆಗ್ಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹೆಗ್ಗೂರು ಗ್ರಾಮದಲ್ಲಿ ಯಶಸ್ವಿಯಾಗಿ ಜಲ ಜೀವನ ಮಿಷನ್ ಅನುಷ್ಠಾನ ಮಾಡಲಾಗಿದೆ.

ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಅಭಿವೃದ್ದಿ ಸಾಧಿಸಲಾಗಿದೆ. ಹೆಗ್ಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 835 ಕುಟುಂಬಗಳು 5880 ಜನರು ವಾಸಿಸುತ್ತಿದು 12 ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಿವೆ. ಈ ಕಟ್ಟಡಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 5 ಶುದ್ದ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು 5 ದೊಡ್ಡ ಪ್ರಮಾಣದ ಟ್ಯಾಂಕ್ ಗಳನ್ನು ಮತ್ತು ಸಣ್ಣ ಪ್ರಮಾಣ 17 ಟ್ಯಾಂಕ್ ಗಳನ್ನು ನಿರ್ಮಿಸುವ ಮೂಲಕ ಜಲ್ ಜೀವನ ಮಿಷನ್ (ಜೆಜೆಮ್) ಅಡಿಯಲ್ಲಿ 820 ಕಾರ್ಯತ್ಮಕ ಗೃಹ ನಳ ಸಂಪರ್ಕ ಒದಗಿಸಲಾಗಿದೆ.

ಗ್ರಾಮದ ಪ್ರತಿಯೊಂದು ಮನೆಗೂ ನೀರು ಸರಬರಾಜು ಮಾಡುವುದು ಒಂದು ಸವಾಲಿನ ಕೆಲಸವಾಗಿತ್ತು. ಇದಕ್ಕೆ ಕಾರಣ ಗ್ರಾಮವು ಸಮತಟ್ಟಾದ ಪ್ರದೇಶವಾಗಿರಲಿಲ್ಲ ಮತ್ತು ಅಂತರ್ಜಲ ಮಟ್ಟ ಕೂಡಾ ಏಕರೂಪವಾಗಿರಲಿಲ್ಲ. ಜೊತೆಗೆ ಗ್ರಾಮಸ್ಥರಲ್ಲಿ ಹಲವಾರು ತಪ್ಪು ತಿಳುವಳಿಕೆಗಳಿದ್ದವು. ಗ್ರಾಮ ಪಂಚಾಯತಿ ಮೊದಲು ಒದಗಿಸಿದ ನಳದ ಸಂಪರ್ಕ ಹಾಗೆ ಈಗ ನೀರು ಬರುವದಿಲ್ಲ, ಮೀಟರ್ ಅಳವಡಿಸುವುದರಿಂದ ನೀರು ಕಡಿಮೆ ಬರುತ್ತದೆ, ವಿದ್ಯುತ್ ಬಿಲ್ ನಂತೆ ನಳದ ಬಿಲ್ ತೆಗೆದುಕೊಳ್ಳುತ್ತಾರೆ ಎಂಬ ಗ್ರಹಿಕೆಗಳು ಸಮಸ್ಯೆಯಾಗಿ ಪರಿಣಮಿಸಿ ಯೋಜನೆ ಅನುಷ್ಠಾನ ಮಾಡುವಲ್ಲಿ ಸವಾಲುಗಳು ಏರ್ಪಟಿತ್ತು.

https://swachhamevajayate.org/wp-content/uploads/2023/05/6-500x400.png

ಸವಾಲುಗಳನ್ನು ಎದುರಿಸಲು ತೆಗೆದುಕೊಂಡ ಕ್ರಮಗಳ/ ವಿಧಾನ:-

ಗ್ರಾಮದ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ವೈಜ್ಞಾನಿಕ ರೂಪುರೇಷೆ ತಯಾರಿಸಿ ಗ್ರಾಮ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿತ್ತು. ಅಂತರ್ಜಲ ಮಟ್ಟ ಏಕರೂಪವಾಗಿಲ್ಲದ ಕಾರಣ ವಿವಿಧ ಯೋಜನೆಗಳ ಹಣಕಾಸು ವೆಚ್ಚಗಳನ್ನು ಬಳಸಿಕೊಂಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಯಿತು. ಗ್ರಾಮಸ್ಥರಲ್ಲಿ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಯಿತು. ಜಲ ಜೀವನ್ ಮಿಷನ್ ಅಡಿಯಲ್ಲಿ ಐ.ಇ.ಸಿ ಮತ್ತು ಎಚ್.ಆರ್.ಡಿ. ಚಟುವಟಿಕೆಗಳಾದ ಬೀದಿ ನಾಟಕ, ಶಾಲಾ ಕಾರ್ಯಕ್ರಮಗಳು, ಗೋಡೆ ಬರಹಗಳು, ವಸ್ತು ಪ್ರದರ್ಶನಗಳಂತಹ ಚಟುವಟಿಕೆಗಳನ್ನು ಹಮ್ಮಿಕೊಂಡು ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಪ್ರಯತ್ನಿಸಲಾಯಿತು.

ಗ್ರಾಮಸ್ಥರಲ್ಲಿ ಜಲ ಜೀವನ್ ಮಿಷನ್ ಯೋಜನೆ ಕುರಿತು ಮನವರಿಕೆ ಮಾಡಿದ ಪರಿಣಾಮವಾಗಿ ಆಯೋಜಿಸಲಾಗಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಹಾಜರಾಗಿದ್ದರು. ಗ್ರಾಮದ ಕ್ರಿಯಾ ಯೋಜನೆ ತಯಾರಿಸುವಲ್ಲಿ ಗ್ರಾಮಸ್ಥರೆಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಅನುಷ್ಠಾನ ಹಂತದಲ್ಲಿ ಸಲಹೆಗಳನ್ನು ನೀಡುತ್ತಿದ್ದರು ಮತ್ತು ಬೆಂಬಲವಾಗಿ FHTC Tag ಮಾಡಲು ಆಧಾರ್ ಕಾರ್ಡ್ ನೀಡಿದರು. ಗ್ರಾಮದಲ್ಲಿ ಸಮುದಾಯ ವಂತಿಗೆ ಕುರಿತು ಜಾಗೃತಿ ಮೂಡಿಸಿದ ಪರಿಣಾಮವಾಗಿ ಗ್ರಾಮಸ್ಥರು ಸಮುದಾಯ ವಂತಿಕೆ ಸಂಗ್ರಹಿಸುವಲ್ಲಿ ಸಹಕಾರ ನೀಡಿದರು.

https://swachhamevajayate.org/wp-content/uploads/2023/05/5-1-500x400.png

ಗ್ರಾಮದ ಎಲ್ಲಾ ಮನೆಗಳಿಗೂ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಿದ ನಂತರ ವಿಶೇಷ ಗ್ರಾಮ ಸಭೆ ಕರೆಯಲಾಯಿತು. ಸಭೆಯಲ್ಲಿ ಎಲ್ಲರೂ ಒಪ್ಪಿಗೆ ಸೂಚಿಸಿದ ನಂತರ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮ ಘೋಷಣೆ ಎಂದು ಘೋಷಿಸಲಾಯಿತು.

ಜಲ ಜೀವನ ಮಿಷನ್ ಅಡಿಯಲ್ಲಿ ಸುಮಾರು 94.6 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ 2021-22ರ ರಾಜ್ಯ ಸರ್ಕಾರದಿಂದ ನೀಡಲಾಗುವ “ಗಾಂಧಿ ಗ್ರಾಮ ಪುರಸ್ಕಾರ” ವನ್ನು ಗ್ರಾಮ ಪಡೆದಿರುತ್ತದೆ.

ಜಲ ಜೀವನ್ ಮಿಷನ್ ಒಂದು ಮಹತ್ವಪೂರ್ಣ ಯೋಜನೆಯಾಗಿದೆ. ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಕುಡಿಯುವ ನೀರನ್ನು ಮನೆಯ ಬಾಗಿಲಿಗೆ ತಲುಪಿಸಲು ಜಲ ಜೀವನ್ ಮಿಷನ್ ಯೋಜನೆ ಮೂಲಕ ಸಾಧ್ಯವಾಗಿದೆ. ಜಲ ಜೀವನ್ ಮಿಷನ್ ಪ್ರತಿ ಗ್ರಾಮದಲ್ಲೂ ಯಶಸ್ವಿಯಾಗಿ ಅನುಷ್ಠಾನಗೊಳಲ್ಲಿ, ದೇಶದಲ್ಲಿ ಜಲ ಸುಭಿಕ್ಷತೆಯಾಗಲಿ.

https://swachhamevajayate.org/wp-content/uploads/2023/05/3-400x300.png
https://swachhamevajayate.org/wp-content/uploads/2023/05/1-1-400x300.png
https://swachhamevajayate.org/wp-content/uploads/2023/05/7-400x300.png

 1,382 total views,  2 views today

WhatsApp chat