Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಜಗತ್ತಿನಲ್ಲಿ ನಿತ್ಯವೂ ನಿರಂತರ ಬದಲಾವಣೆ ನಡೆಯುತ್ತಲೇ ಇರುತ್ತದೆ. ಯಾವುದೋ ವಸ್ತುಗಳಿಗೆ ಇನ್ಯಾವುದೋ ವಸ್ತುಗಳು ಪರ್ಯಾಯವಾಗಿ ಬಂದಿವೆ. ಆದರೆ ನೀರಿಗೆ ಪರ್ಯಾಯ ವಸ್ತು ಸೃಷ್ಟಿಯಾಗಿಲ್ಲ. ನೀರಿಗೆ ನೀರೇ ಪರ್ಯಾಯ. ಜಗತ್ತಿನೆಲ್ಲೆಡೆ ನೀರಿಗಾಗಿ ಅಲೆದಾಟ, ಕಾದಾಟಗಳು ನಡೆಯುತ್ತಿದೆ. ಹತ್ತು ಹಲವಾರು ಕಾರಣಗಳಿಂದ ಹೇರಳವಾಗಿದ್ದ ಜಲಸಂಪನ್ಮೂಲ ಇಂದು ವಿರಳವಾಗಿದೆ.

ನೀರಿನ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಹಲವಾರು ಯೋಜನೆಗಳನ್ನು ತಂದಿದೆ. ಸರ್ಕಾರವು ಪ್ರತಿಯೊಬ್ಬರಿಗೂ ಕುಡಿಯಲು ಶುದ್ಧ ಮತ್ತು ಸುರಕ್ಷಿತ ನೀರು ಒದಗಿಸಬೇಕೆಂಬ ಸದುದ್ದೇಶದಿಂದ ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಿದೆ. ಆಯಾ ಪ್ರದೇಶದಲ್ಲಿ ಲಭ್ಯವಿರುವ ಜಲಮೂಲಗಳಿಂದ ಮತ್ತು ಅಂತರ್ಜಲದ ನೀರನ್ನು ಜನರಿಗೆ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ. ಪ್ರತಿಯೊಬ್ಬರಿಗೂ ಕಾರ್ಯಾತ್ಮಕ ನಡೆದ ಮೂಲಕ ಪ್ರತಿದಿನ 55 ಲೀಟರ್ ನಷ್ಟು ನೀರು ಕೊಡಬೇಕೆಂಬುದು ಯೋಜನೆಯ ಉದ್ದೇಶವಾಗಿದೆ.

ಬರಿದಾಗುತ್ತಿರುವ ಅಂತರ್ಜಲ ಮತ್ತು ಒಣಗುತ್ತಿರುವ ಜಲಮೂಲಗಳನ್ನು ಪುನಶ್ಚೇತನಗೊಳಿಸುವಂತಹ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕಿನ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಶಾಲೆ ಕೆರೆಯನ್ನು ಆಯ್ದುಕೊಂಡು ಇತ್ತೀಚಿಗೆ ಕೆರೆಗೆ ಕಾಯಕಲ್ಪ ನಡೆಸಲಾಯಿತು.

ಶಾಲೆ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ

ಶಾಲೆ ಕೆರೆಯನ್ನು ಆಯ್ಕೆ ಮಾಡಿ ಕಾರ್ಯಕಲ್ಪ ಒದಗಿಸಲು ಸಕಾರಣವಿದೆ. ಶಾಲೆ ಕೆರೆಯ ಸುತ್ತಮುತ್ತ ಇರುವ ಬಾವಿ, ಕೊಳವೆಬಾವಿಗಳಲ್ಲಿ ಇದುವರೆಗೂ ನೀರು ಕಡಿಮೆಯಾದ ಉದಾಹರಣೆ ಕಡಿಮೆ ಎನ್ನುತ್ತಾರೆ ಸ್ಥಳೀಯರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು. ಆದರೆ ಇತ್ತೀಚೆಗೆ ಕೆರೆಯಲ್ಲಿ ಹೂಳು ಮತ್ತು ಪ್ಲಾಸ್ಟಿಕ್ ನಂತಹ ತ್ಯಾಜ್ಯ ವಸ್ತುಗಳು ತುಂಬಿದ್ದವು. ನಗರೀಕರಣ ಪ್ರಭಾವದಿಂದ, ನಿರ್ಲಕ್ಷದಿಂದ ಕೆರೆಯು ವಿಷಮ ಸ್ಥಿತಿ ತಲುಪಿತ್ತು. ಕೆರೆಗೆ ಕಾಯಕಲ್ಪ ಒದಗಿಸದಿದ್ದರೆ, ನೀರು ಕಲುಷಿತಗೊಳ್ಳಬಹುದು ಎಂದು ಈ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಯಿತು

ದಶಕಗಳ ಹಿಂದೆ ಕೃಷಿಗೂ ಈ ಕೆರೆಯೇ ಆಧಾರ

ಈ ಭಾಗದಲ್ಲಿ ಈಗಲೂ ಭತ್ತದ ಗದ್ದೆಗಳಿವೆ. ದಶಕಗಳ ಹಿಂದೆ ಈ ಕೆರೆಯಿಂದಲೇ ಕೃಷಿಗೆ ನೀರನ್ನು ಬಳಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಗೃಹಬಳಕೆಗೂ ಈ ಭಾಗದ ಜನರು ಈ ನೀರನ್ನೇ ಆಶ್ರಯಿಸಿದ್ದರೂ ಎನ್ನುತ್ತಾರೆ ಸ್ಥಳೀಯರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಮಂಗಳೂರು ತಾಲ್ಲೂಕು ಪಂಚಾಯತ್ ಮತ್ತು ಪಡುಪಣಂಬೂರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಜಲಜೀವನ್ ಮಿಷನ್ ಅನುಷ್ಠಾನ ಬೆಂಬಲ ಸಂಸ್ಥೆ ಸಮುದಾಯವು ಈ ಕೆರೆಯ ಕಾಯಕಲ್ಪಕ್ಕೆ ಮುಂದಾಯಿತು. ಊರಿನ ಯುವಜನತೆ, ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕೆರೆಯ ಪುನಶ್ಚೇತನಕ್ಕೆ ಶ್ರಮದಾನ ಮಾಡಿದರು.

ಮೊದಲಿಗೆ ಕೆರೆಯ ಸುತ್ತಲೂ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ತೆರೆವುಗೊಳಿಸಿ, ನಂತರ ಕಸ-ಕಡ್ಡಿ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಹೊರ ತೆಗೆಯಲಾಯಿತು. ಕೆರೆಯಲ್ಲಿ ತುಂಬಿದ ಅಪಾರ ಪ್ರಮಾಣದ ಹೂಳು ತೆಗೆದಾದ ಮೇಲೆ ಕೆರೆಯ ದೃಶ್ಯವೇ ಬದಲಾಯಿತು. ಈಗ ಕೆರೆಯು ಹೊಸ ರೂಪ ಪಡೆದಿದೆ.

ಕೆರೆಯ ಪಕ್ಕವೇ ರಸ್ತೆಯಿದ್ದು, ರಸ್ತೆಯಲ್ಲಿ ಸಂಚರಿಸುವವರಿಗೆ ಮೊದಲಿಗೆ ಈ ಕೆರೆಯು ಕಾಣುತ್ತಲೇ ಇರಲಿಲ್ಲ. ಆದರೆ ಕಾಯಕಲ್ಪದ ನಂತರ ಸಾರ್ವಜನಿಕರಿಗೆ ಕೆರೆಯ ನೋಟ ಮುದ ನೀಡುತ್ತಿದೆ. ಈ ಕೆರೆಯಿಂದ ಸುತ್ತಲ ಜಲಮೂಲಗಳಿಗೂ ಸದಾ ನೀರುಣಿಸುವಂತಾಗಲಿ. ನೂರಾರು ಬಾವಿಗಳಿಗೆ ಒಂದು ಕೆರೆ ಮರು ಜೀವ ನಿಡಬಲ್ಲದು.

                                                            ಜಲಮೂಲಗಳನ್ನು ಸಂರಕ್ಷಿಸಿಕೊಳ್ಳೋಣ,ಮುಂದಿನ ಪೀಳಿಗೆಗೂ ನೀರನ್ನು ಉಳಿಸೋಣ.

 2,793 total views,  2 views today

WhatsApp chat