Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

https://swachhamevajayate.org/wp-content/uploads/2023/05/IMG-20191223-WA0030-1-600x500.jpg
https://swachhamevajayate.org/wp-content/uploads/2023/05/WhatsApp-Image-2022-07-30-at-11.08.20-PM-12-600x500.jpg

ಭೂಮಿಯ ಮೇಲಿನ ಜೀವಿಗಳು ಬದುಕಲು ನೀರು ಬಹುಮುಖ್ಯವಾಗಿದೆ. ನೀರು ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ನೀರನ್ನು ಜೀವಾಮೃತ ಎಂದು ಸಹ ಕರೆಯುತ್ತಾರೆ. ನಮ್ಮ ದಿನನಿತ್ಯದ ಕಾರ್ಯಚಟುವಟಿಕೆಗೆ ನೀರು ಅತ್ಯಗತ್ಯವಾಗಿದೆ. ನಮ್ಮ ಭೂಮಿಯ ಬಹುಪಾಲು ನೀರಿನಿಂದ ಆವೃತವಾಗಿದ್ದರೂ ಈ ಎಲ್ಲಾ ನೀರು ಬಳಕೆಗೆ ಸುರಕ್ಷಿತವಲ್ಲ. ನಮ್ಮ ದೇಶದಲ್ಲಿ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದ್ದು; ಇಂದಿನ ಅವಶ್ಯಕತೆಗೆ ಮತ್ತು ನಾಳೆಯ ಭವಿಷ್ಯತ್ತಿಗೆ ನೀರನ್ನು ಸಂರಕ್ಷಿಸುವುದು ಬಹುಮುಖ್ಯವಾಗಿದೆ.

ಮಾನವನ ದೈನಂದಿನ ಚಟುವಟಿಕೆ ನೀರಿಲ್ಲದೆ ನಡೆಯುವುದು ಅಸಾಧ್ಯ. ಹಾಗೆ ಭಾರತವು ಕೃಷಿ ಪ್ರಧಾನ ದೇಶವಾಗಿದ್ದು ಕೃಷಿಗೆ ನೀರು ಮುಖ್ಯವಾಗಿದೆ. ಇದಲ್ಲದೆ, ಕೈಗಾರಿಕೆಗಳು ವಿವಿಧ ಉದ್ದೇಶಗಳಿಗಾಗಿ ನೀರನ್ನು ಬಳಸಲಾಗುತ್ತದೆ. ಉದಾಹರಣೆಗೆ, ಥರ್ಮಲ್ ಪವರ್ ಪ್ಲಾಂಟ್‌ಗಳು ಚಾಲನೆಗೆ ಸಾಕಷ್ಟು ಪ್ರಮಾಣದ ನೀರನ್ನು ಬಳಕೆಯಾಗುತ್ತದೆ. ಇಡೀ ಜೀವಸಂಕುಲವೆ ನೀರಿನ ಮೇಲೆ ಅವಲಂಬಿತವಾಗಿದೆ..

ಜಲ ಜೀವನ್ ಮಿಷನ್ ಯೋಜನೆ:

ಗ್ರಾಮೀಣ ಜನರಿಗೆ ಶುದ್ಧ, ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿ ಮನೆಗೂ ಕಾರ್ಯಾತ್ಮಕ ಗೃಹ ನಳ ಸಂಪರ್ಕ ಕಲ್ಪಿಸುವ ಉದ್ದೇಶದೊಂದಿಗೆ ಸರ್ಕಾರವು ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಮೂಲಕ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದೆ.

ಜಲ ಜೀವನ ಮಿಷನ್ ಯೋಜನೆಯಲ್ಲಿ ಮನೆ-ಮನೆಗೆ ಕಾರ್ಯಾತ್ಮಕ ನಳದ ಮೂಲಕ ನೀರು ಕೊಡಲಾಗುತ್ತಿದೆ. ಇದರಿಂದ ನೀರಿಗೆ ಪರಿಪಾಡಲು ಪಡುತ್ತಿದ್ದ ಜನರ ಸಂಕಷ್ಟ ತಪ್ಪಿದೆ. ಗ್ರಾಮೀಣರ ಬದುಕಲ್ಲಿ ಸಂತಸ ಮೂಡಿದೆ.

ಇನ್ನು ನೀರಿನ ಮಿತ ಬಳಕೆ ಮತ್ತು ಪ್ರತಿ ಮನೆಗೆ ಪ್ರತಿ ಮಾಹೆಯಲ್ಲಿ ನಳಗಳ ಮೂಲಕ ಹರಿಯುವ ನೀರಿನ ಪ್ರಮಾಣ ಎಷ್ಟು ಎಂಬುದರ ಬಗ್ಗೆ ಮಾಪನ ಮಾಡುವ ಉದ್ದೇಶದೊಂದಿಗೆ ಕರ್ನಾಟಕ ಸರ್ಕಾರವು ಜೆ.ಜೆ.ಎಂ ಯೋಜನೆಯಡಿ ಮನೆಮನೆಗೆ ನಳ ಸಂಪರ್ಕಕ್ಕೆ ಮೀಟರ್ ಅಳವಡಿಸಲು ಮುಂದಾಗಿದೆ.

ನೀರಿನಮೀಟರ್ಗ್ರಾಮೀಣಭಾಗದಜನರುತಮ್ಮದಿನನಿತ್ಯದಜೀವನದಲ್ಲಿಉಪಯೋಗಿಸುವನೀರಿನಪ್ರಮಾಣವನ್ನುಅಳತೆಮಾಡುವಯಂತ್ರವಾಗಿದೆ. ನೀರಿನಮೀಟರ್ಅನ್ನುಕಾರ್ಯಾತ್ಮಕನಳ ಸಂಪರ್ಕಹೊಂದಿರುವವರ ಮನೆಯಲ್ಲಿಅಳವಡಿಸಲಾಗುತ್ತದೆ. ಸ್ಥಳೀಯಆಡಳಿತ(ಗ್ರಾಮಪಂಚಾಯತ್) ನೀರಿನಬಳಕೆಪ್ರಮಾಣಬಳಕೆಯನ್ನುಲೆಡ್ಜರ್ ನಲ್ಲಿದಾಖಲಿಸಿ, ಮಾಸಿಕಶುಲ್ಕವನ್ನುವಿಧಿಸುವುದರಮೂಲಕಅತ್ಯಂತಮಹತ್ವದಪಾತ್ರವನ್ನುವಹಿಸುತ್ತದೆ.

https://swachhamevajayate.org/wp-content/uploads/2023/05/WhatsApp-Image-2022-07-30-at-11.07.23-PM-600x450.jpg
https://swachhamevajayate.org/wp-content/uploads/2023/05/43-600x450.jpg

ಮೀಟರ್ ಅಳವಡಿಸುವ ಪ್ರಮುಖ ಉದ್ದೇಶ ಪ್ರತಿ ಮನೆಗೆ ಸರಬರಾಜು ಆಗುವ ನೀರಿನ ಮಾಪನ ಮಾಡುವುದು ಹಾಗೂ ಜನರಲ್ಲಿ ನೀರಿನ ಮಿತ ಬಳಕೆ ಅಂದರೆ ಅಗತ್ಯವಿರುವಷ್ಟು ಮಾತ್ರ ಬಳಸುವ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ನೀರಿನ ಸಂರಕ್ಷತೆ ಮಾಡುವುದಾಗಿದೆ.

ಕಾರ್ಯಾತ್ಮಕ ಗೃಹ ನಳ ಸಂಪರ್ಕಕ್ಕೆ ಮೀಟರ್ ಅಳವಡಿಕೆ ಆಗಿರುವುದರಿಂದ ನೀರನ್ನು ಮಿತಬಳಕೆ ಮಾಡಬೇಕು ಎನ್ನುವ ಭಾವನೆ ಜನರಲ್ಲಿ ಬಂದಿದೆ.ನೀರು ಪೋಲು ಮಾಡಬಾರದು ಎಂಬ ಕಾರಣಕ್ಕೆ ಮೀಟರ್ ಅಳವಡಿಕೆ ಮಾಡಲಾಗಿದೆ. ಅಲ್ಲದೇ ಜೆಜೆಎಂ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ ಕನಿಷ್ಠ ೫೫ ಲೀಟರ್ ನೀರು ಕೊಡಬೇಕಾಗಿದೆ ಅದರ ಅಳತೆ ಮಾಪನಕ್ಕೆ ಮೀಟರ್ ಸಹಕಾರಿಯಾಗಿದೆ.

ಪ್ರತಿಯೊಬ್ಬರಿಗೂ ಕನಿಷ್ಠ ೫೫ ಲೀಟರ್ ನೀರು ಸಿಗುತ್ತದೆ ಇಲ್ಲವೋ ಎಂದು ಖಾತ್ರಿಪಡಿಸಿಕೊಳ್ಳಲು ಇದು ಅನುಕೂಲಕಾರಿಯಾಗಿದೆ. ಈ ಮೀಟರ್ ಅಳವಡಿಕೆಯಿಂದ ನಾವು ಅಗತ್ಯಕ್ಕೆ ತಕ್ಕಷ್ಟು ಮಾತ್ರ ನೀರು ಬಳಸಬೇಕು ಎನ್ನುವ ಜವಾಬ್ದಾರಿ ಜನರಲ್ಲಿ ಮೂಡಿಸಲು ಅನುಕೂಲಕಾರಿಯಾಗಿದೆ.

ಜೆ.ಜೆ.ಎಂಅಡಿಯಲ್ಲಿಕಾರ್ಯಾತ್ಮಕನಳಸಂಪರ್ಕಕ್ಕೆನೀರಿನಮೀಟರ್ಅಳವಡಿಕೆಯ ಉಪಯೋಗಗಳು

  • ಕಾರ್ಯಾತ್ಮಕನಳಸಂಪರ್ಕದಮೂಲಕಹರಿಯುವನೀರಿನಪ್ರತಿಹನಿಯ ಲೆಕ್ಕಇಡುವಿಕೆ.
  • ಪ್ರತಿವ್ಯಕ್ತಿಯುನೀರಿನಬಳಕೆಗೆಜವಾಬ್ದಾರಿಹೊಂದಿರುತ್ತಾರೆ.
  • ಪ್ರತಿಮನೆಯಲ್ಲಿಬಳಕೆಮಾಡುವ ನೀರಿನಪ್ರಮಾಣವನ್ನುನೀರಿನಮೀಟರ್ಮೂಲಕಅಳೆಯಲಾಗುತ್ತದೆ.
  • ನೀರಿನ ಮೀಟರ್,ನೀರನ್ನುಪೋಲುಮಾಡದಂತೆವ್ಯಕ್ತಿಯವರ್ತನೆಯಲ್ಲಿಬದಲಾವಣೆತರುತ್ತದೆ.
  • ಅನವಶ್ಯಕವಾಗಿನೀರನ್ನುವ್ಯರ್ಥಮಾಡದಂತೆತಡೆಯಲುನೀರಿನಮೀಟರ್ಸಹಕಾರಿಯಾಗಿದೆ.
  • ಲೆಡ್ಜರ್ನಲ್ಲಿನೀರಿನಬಳಕೆಯನ್ನುನಮೂದಿಸಲುಗ್ರಾಮಪಂಚಾಯಿತಿಗೆನೀರಿನಮೀಟರ್ಸಹಾಯಮಾಡುತ್ತದೆ.
  • ಪ್ರತಿತಿಂಗಳುನೀರುಬಳಕೆಗೆಶುಲ್ಕವಿಧಿಸಲುನೀರಿನಮೀಟರ್ಅವಶ್ಯವಾಗಿದೆ.
  • ನೀರಿನಮೀಟರ್ಮಾಸಿಕಶುಲ್ಕವಿಧಿಸಲುಸಹಕಾರಿಯಾಗಿದೆಮತ್ತುಈಮೂಲಕಗ್ರಾಮಪಂಚಾಯಿತಿಯಕಾರ್ಯಾಚರಣೆಮತ್ತುನಿರ್ವಹಣೆಗೆಉಪಯೋಗಕರ.
  • ಮೀಟರ್ಬಳಕೆಯುಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆಸಹಕಾರಿಯಾಗಿದೆ.
  • ಬಳಕೆದಾರರ ಶುಲ್ಕವನ್ನು ಸಂಗ್ರಹಿಸುವ ಮೂಲಕ ಹಳ್ಳಿಯ ಮೂಲಸೌಕರ್ಯ ವ್ಯವಸ್ಥೆಯಲ್ಲಿ ಸುಸ್ಥಿರ ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸಲು ನೀರಿನ ಮೀಟರ್ ಉಪಯೋಗಕಾರಿ.
https://swachhamevajayate.org/wp-content/uploads/2023/05/WhatsApp-Image-2022-07-28-at-2.51.47-PM-1-600x450.jpg

ನೀರುಬರಿದಾಗುವಸಂಪನ್ಮೂಲ. ನೀರನ್ನುಎಚ್ಚರಿಕೆಯಿಂದಬಳಸಿನೀರನ್ನುಪೋಲಾಗದಂತೆತಡೆಯೋಣ. ಭವಿಷ್ಯಕ್ಕಾಗಿನೀರನ್ನುಉಳಿಸೋಣ.

 2,803 total views,  1 views today

WhatsApp chat