Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

https://swachhamevajayate.org/wp-content/uploads/2023/05/1-3-600x500.jpg
https://swachhamevajayate.org/wp-content/uploads/2023/05/3-600x500.jpg

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ನನಸು ಮಾಡುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ನಿತ್ಯ ಸಂಗ್ರಹವಾಗುವ ಒಣ ಮತ್ತು ಹಸಿ ತ್ಯಾಜ್ಯವನ್ನು ಸ್ವಯಂಚಾಲಿತವಾಗಿ ಪ್ರತ್ಯೇಕಿಸಿ, ಮರುಬಳಕೆ ಮಾಡಲು ಸಹಕಾರಿಯಾಗುವಂತಹ ಆಧುನಿಕ ತಂತ್ರಜ್ಞಾನ ಆಧಾರಿತ ‘ಟ್ರ್ಯಾಷ್ಕಾನ್’ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಹೊಸೂರು ಗ್ರಾಮದಲ್ಲಿ ಕಾರ್ಯಾರಂಭ ಮಾಡಲಾಗಿದೆ.

ಗೌರಿಬಿದನೂರು ತಾಲ್ಲೂಕಿನ ಹೊಸೂರು, ಮುದುಗೆರೆ ಮತ್ತು ಸೋನಗಾನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 24 ಹಳ್ಳಿಗಳಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ಪಂಚಾಯಿತಿ ಸಿಬ್ಬಂದಿ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಮಹಿಳೆಯರು ಪ್ರತಿ ಮನೆ ಮನೆಗೂ ತೆರಳಿ ಸಂಗ್ರಹಿಸಿರುತ್ತಾರೆ. ಅದನ್ನು ಸ್ವಚ್ಛ ವಾಹಿನಿ ಮೂಲಕ ಸ್ವಚ್ಛ ಸಂಕೀರ್ಣ ಘಟಕಕ್ಕೆ ಸಾಗಿಸಿ, ಅಲ್ಲಿ ನಿರ್ಮಾಣ ಮಾಡಲಾಗಿರುವ ತೊಟ್ಟಿಯಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತದೆ. ತದನಂತರ ಘಟಕದಲ್ಲಿ ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಟ್ರ್ಯಾಷ್ ಕ್ಯಾನ್ ಯಂತ್ರಗಳ ಮೂಲಕ ಹಸಿ ಕಸ ಮತ್ತು ಒಣ ತ್ಯಾಜ್ಯವನ್ನಾಗಿ ಪ್ರತ್ಯೇಕಿಸಲಾಗುತ್ತದೆ.

ಅಲ್ಲದೆ ಹಸಿ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿಸಿ ರೈತರ ಜಮೀನಿಗೆ ಬಳಕೆ ಮಾಡಲಾಗುತ್ತಿದೆ. ಈ ಸಾವಯವ ಗೊಬ್ಬರದಿಂದ ರೈತರು ಸಮೃದ್ಧ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿದೆ. ಒಳ್ಳೆಯ ಫಸಲಿನಿಂದ ರೈತರ ಆದಾಯವು ದ್ವಿಗುಣಗೊಳ್ಳುತ್ತದೆ. ಒಣ ತ್ಯಾಜ್ಯದಲ್ಲಿನ ಪ್ಲಾಸ್ಟಿಕ್, ಗಾಜು, ರಬ್ಬರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಪ್ರತ್ಯೇಕಿಸಿ ಸಣ್ಣ ಸಣ್ಣ ಚೂರುಗಳಾಗಿ ಮಾಡಿ ಮರುಬಳಕೆ ಮಾಡಲು ಬಳಸಲಾಗುತ್ತದೆ. ಈ ಅತ್ಯುತ್ತಮ ತಂತ್ರಜ್ಞಾನದಿಂದ ಯಾವುದೇ ವಸ್ತುವು ಉಪಯೋಗವಿಲ್ಲವೆಂದು ಬಿಸಾಡದೆ ತ್ಯಾಜ್ಯವನ್ನು ಸಂಪನ್ಮೂಲವಾಗಿ ಮಾರ್ಪಾಡು ಮಾಡಲಾಗುತ್ತಿದೆ.

ಸ್ವಚ್ಛ ಸಂಕೀರ್ಣ ಘಟಕದಲ್ಲಿನ ಅತ್ಯಾಧುನಿಕ 'ಟ್ರ್ಯಾಷ್ಕಾನ್’ಯಂತ್ರೋಪಕರಣಗಳನ್ನು ಕ್ಲಸ್ಟರ್ ವ್ಯಾಪ್ತಿಯ ಮೂರು ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಒಟ್ಟು ರೂ.22,40,000 ಅನುದಾನದಿಂದ ಖರೀದಿಸಲಾಗಿದೆ. ಇನ್ನು ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣಕ್ಕೆ ರೂ.20,00,000 ತ್ಯಾಜ್ಯ ವಿಲೇವಾರಿ ಮಾಡಲು ವಾಹನ (ಸ್ವಚ್ಛವಾಹಿನಿ)ಗಳ ಖರೀದಿಗೆ ತಲಾ 5 ಲಕ್ಷ ರುಪಾಯಿ ಅನುದಾನ ಸೇರಿದಂತೆ ಒಟ್ಟು 60-70 ಲಕ್ಷ ರೂ. ಘಟಕಾಂಶ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಲಾಗಿದೆ.

https://swachhamevajayate.org/wp-content/uploads/2023/05/5-1-600x450.jpg

50 ಟನ್ ತ್ಯಾಜ್ಯ ಸಂಗ್ರಹ

ಸ್ವಚ್ಛ ಸಂಕೀರ್ಣ ಘಟಕವು 3 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ, ಸುಮಾರು 24 ಹಳ್ಳಿಯಲ್ಲಿ ಪ್ರತಿದಿನ ಮುಂಜಾನೆ ಸ್ವಸಹಾಯ ಗುಂಪಿನ ಸದಸ್ಯರು ತೆರಳಿ ಕಸ ಸಂಗ್ರಹಣೆ ಮಾಡುತ್ತಿದ್ದು, ಇದು ದಿನಕ್ಕೆ ಅಂದಾಜು 1.5 ಟನ್ ನಷ್ಟು ಹಸಿ ಕಸ, ಒಣ ಕಸವನ್ನು ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ಬೇರ್ಪಡಿಸಲಾಗುತ್ತಿದೆ. ಇದು ಒಂದು ತಿಂಗಳಿಗೆ ಸರಿಸುಮಾರು 45 ರಿಂದ 50 ಟನ್ ನಷ್ಟು ಕಸವನ್ನು ಸಂಗ್ರಹಿಸಿ ಅದನ್ನು ಮರುಬಳಕೆಗಾಗಿ ಬಳಸಲಾಗುತ್ತಿದೆ.

ಘನ ತ್ಯಾಜ್ಯ ವಿಲೇವಾರಿ ಘಟಕದ ದೈನಂದಿನ ಕಾರ್ಯಚರಣೆಯನ್ನು ಅಚ್ಚುಕಟ್ಟಾಗಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ವಹಿಸಲಾಗಿದೆ. ಅಲ್ಲದೆ ಈ ಸಂಘದ ಮಹಿಳೆಯರಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಯಾವುದೇ ಸಮಸ್ಯೆಗಳು ಎದುರಾದರೂ ಪರಿಷ್ಕರಿಸಲು ಸೂಚಿಸಲಾಗಿದೆ.

https://swachhamevajayate.org/wp-content/uploads/2023/05/4-600x450.jpg

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಂತಹ ತಂತ್ರಜ್ಞಾನ ಆಧಾರಿತ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪನೆಯು ತ್ಯಾಜ್ಯವನ್ನು ಸಂಪನ್ಮೂಲವಾಗಿಸುವುದರತ್ತ ಅತ್ಯಂತ ಪರಿಣಾಮಕಾರಿ ಹೆಜ್ಜೆಯಗುವುದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಸಾಮಾನ್ಯರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಗ್ರಾಮ ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿ, ಸ್ವ- ಸಂಘದ ಮಹಿಳೆಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಲಾಗುತ್ತಿದೆ.

 1,389 total views,  1 views today

WhatsApp chat