Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ರಾಜ್ಯದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡುವ ಮುನ್ನ ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಂಡು ನೀರನ್ನು ಸರಬರಾಜು ಮಾಡಬೇಕಾಗಿರುತ್ತದೆ. ಈ ಸಂಬಂಧವಾಗಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ 1998ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿರುತ್ತದೆ.

ಇಲಾಖೆಯಡಿಯಲ್ಲಿ ಸ್ಥಾಪಿಸಿರುವ ಪ್ರಯೋಗಾಲಯಗಳಲ್ಲಿ ಕೈಗೊಳ್ಳುವ ನೀರಿನ ಗುಣಮಟ್ಟದ ಪರೀಕ್ಷಾ ವರದಿಗಳ ನಿಖರತೆಗೆ ಸಂಬಂಧಿಸಿದಂತೆ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಪರೀಕ್ಷಾ ಸಂಸ್ಥೆಗೆ ಭಾರತದಲ್ಲಿ ಮಾನ್ಯತೆ ಪಡೆದ ಪ್ರಾಧಿಕಾರದಿಂದ ಪ್ರಮಾಣೀಕರಣದ ಅಗತ್ಯವಿದೆ. ಪ್ರಮಾಣೀಕರಣದ ಮಾನದಂಡಗಳನ್ನು ಅನುಸರಿಸಲು, ಎಲ್ಲಾ ಪ್ರಯೋಗಾಲಯಗಳು ಗುಣಮಟ್ಟ ಮತ್ತು ಮೌಲ್ಯಮಾಪನದ ಸಂಬಂಧಿಸಿದ ಮಾನದಂಡಗಳನ್ನು ಅನುಸರಿಸಬೇಕಾಗಿದ್ದು, ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಮತ್ತು ಇತರೆ ಪರೀಕ್ಷಾ ಪ್ರಯೋಗಾಲಯಗಳು ಸಂಬಂಧಿತ ಪ್ರಾಧಿಕಾರದಿಂದ ಮಾನ್ಯತೆ ಪಡೆಯುವ ಅಗತ್ಯವಿದೆ. ಭಾರತದಲ್ಲಿ ಮಾನ್ಯತೆಗೆ ಕೇಂದ್ರ ಪ್ರಾಧಿಕಾರವೆಂದರೆ National Accreditation Board for Testing and Calibration Laboratories (NABL) ಭಾರತದಲ್ಲಿ ಸೂಚಿಸಲಾದ ಮಾನದಂಡಗಳ ಪ್ರಕಾರ ಇರಬೇಕಾದ ಯಾವುದೇ ರೀತಿಯ ಪ್ರಯೋಗಾಲಯಕ್ಕೆ ಎನ್‌ಎಬಿಎಲ್ ಅನುಮೋದನೆ ಅತ್ಯಗತ್ಯವಾಗಿರುತ್ತದೆ.

ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯಗಳಿಗೆ ಭಾರತ ಸರ್ಕಾರದ ಜಲಜೀವನ್ ಮಿಷನ್‌ನ ಮಾರ್ಗಸೂಚಿ ಪ್ರಕಾರ NABL ಮಾನ್ಯತೆಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಸದರಿ NABL ಮಾನ್ಯತೆಯನ್ನು ಪಡೆಯುವುದು ಕಷ್ಟದ ಪ್ರಕ್ರಿಯೆಯಾಗಿದ್ದು, NABL ಮಾರ್ಗಸೂಚಿಯ ಅನ್ವಯ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಲು ಸೂಕ್ತ ಅರ್ಹತೆ ಹೊಂದಿರುವ, ನುರಿತ ಮತ್ತು ಅನುಭವವಿರುವಂತಹ ಸಿಬ್ಬಂದಿ ಅಗತ್ಯವಿದ್ದು, ನಿರ್ದಿಷ್ಟ ಉಪಕರಣಗಳು ಮತ್ತು ಇತರೆ ಮೂಲಭೂತ ಸೌಕರ್ಯಗಳು ಮತ್ತು ಪ್ರಯೋಗಾಲಯ ನಿರ್ವಹಣೆಗೆ ತಕ್ಕಂತೆ ಪ್ರಯೋಗಾಲಯದ ಕಟ್ಟಡದ ರಚನೆಯು ಅವಶ್ಯಕವಾಗಿರುತ್ತದೆ.

ಪ್ರಯೋಗಾಲಯಗಳಿಗೆ ಮಾನ್ಯತೆ ಪಡೆಯುವ ರಾಸಾಯನಿಕ ನಿಯತಾಂಕಗಳ ಪರೀಕ್ಷೆಗಳನ್ನು ಕೈಗೊಳ್ಳಲು ISO-17025-2017 ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬೇಕಾಗಿದ್ದು, ನಾಲ್ಕು ಹಂತಗಳಲ್ಲಿ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗಿದ್ದು, ಅವುಗಳೆಂದರೆ ಗುಣಮಟ್ಟದ ಕೈಪಿಡಿ (Quality Manual), ನಿರ್ವಹಣಾ ವ್ಯವಸ್ಥೆಯ ಕಾರ್ಯವಿಧಾನಗಳು (Management system procedures) ಮತ್ತು IS ಭಾರತೀಯ ಮಾನದಂಡಗಳ ಪ್ರಕಾರ ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನದ (Standard operation procedures) ಕೈಪಿಡಿ ಮತ್ತು ದಾಖಲಾತಿಗಳ ನಮೂನೆಗಳನ್ನು (Documentation formats) ಸಿದ್ಧಪಡಿಸಿಕೊಳ್ಳಬೇಕಾಗಿರುತ್ತದೆ.

ಈ ಎಲ್ಲಾ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ನುರಿತ ಸಿಬ್ಬಂದಿಯನ್ನು ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಲು ತೆಗೆದುಕೊಳ್ಳಲಾಗಿರುತ್ತದೆ ಮತ್ತು ಅವಶ್ಯಕವಿರುವ ಕಟ್ಟಡ ನವೀಕರಣ ಕಾರ್ಯಗಳನ್ನು (Partitions, Wet analysis room, Platforms with granite slabs, Instrumentation room) ಕೈಗೊಳ್ಳಲಾಗಿದ್ದು, ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ಅಗತ್ಯವಿರುವ ಉಪಕರಣಗಳು, ರಾಸಾಯನಿಕಗಳು, ಗಾಜಿನ ಪರಿಕರಗಳು, Certified Reference Materials ಗಳು ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು 2020-21 ನೇ ಸಾಲಿನ ಜಲ ಜೀವನ್ ಮಿಷನ್‌ನ ಕುಡಿಯುವ ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮದ ಅನುದಾನವನ್ನು ಬಳಸಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ಪ್ರಯೋಗಾಲಯವನ್ನು ಸುಸಜ್ಜಿತಗೊಳಿಸಲಾಗಿರುತ್ತದೆ.

ಮುಂದುವರೆದು NABL ಮಾನ್ಯತೆ ಪಡೆಯಲು ಅರ್ಜಿ ಸಲ್ಲಿಸುವ ಮುಂಚೆ ಮೇಲೆ ತಿಳಿಸಿರುವ ಕೈಪಿಡಿ ಮತ್ತು ದಾಖಲಾತಿಗಳನ್ನು ISO-17025-2017 ಮತ್ತು ಭಾರತೀಯ ಮಾನದಂಡಗಳ ಪ್ರಕಾರ ಸಿದ್ಧಪಡಿಸಿಕೊಳ್ಳಲಾಗಿರುತ್ತದೆ. ಅಗತ್ಯವಿರುವ ದಾಖಲೆಗಳ ನಿರ್ವಹಣೆ, ಉಪಕರಣಗಳ ವಾರ್ಷಿಕ ನಿರ್ವಹಣೆ Internal calibration, External calibration, ಕೈಗೊಳ್ಳಲಾಗಿದ್ದು, ನೀರಿನ ಗುಣಮಟ್ಟದ ವರದಿಗಳ ಅಂತರ್ ಪ್ರಯೋಗಾಲಯಗಳ ಹೋಲಿಕೆ (Inter laboratory comparison) ಗಳನ್ನು ಮಾನ್ಯತೆ ಪಡೆದಿರುವ, ವಿವಿಧ ಪ್ರಯೋಗಾಲಯಗಳಲ್ಲಿ ಕೈಗೊಂಡು, ರಾಸಾಯನಿಕ ನಿಯತಾಂಕಗಳ ಪರೀಕ್ಷೆಯಲ್ಲಿ ಪ್ರಾವೀಣ್ಯತೆಯನ್ನು ಖಚಿತಪಡಿಸಿಕೊಳ್ಳಲು NABL ನಿಂದ ಮಾನ್ಯತೆ ಪಡೆದಿರುವ PT Providers ಗಳಿಂದ (Proficiency Testing), ಪ್ರಾವೀಣ್ಯತೆ ಪರೀಕ್ಷೆಗಳನ್ನು ಕೈಗೊಳ್ಳಲಾಗಿರುತ್ತದೆ ಮತ್ತು ದಕ್ಷಿಣ ಕನ್ನಡ ಪ್ರಯೋಗಾಲಯದ ಆಂತರಿಕ ಪರಿಶೋಧನೆಯನ್ನು ಕೈಗೊಂಡು, ಸದರಿ ಆಂತರಿಕ ಪರಿಶೋಧನೆಯಲ್ಲಿ ತಿಳಿಸಿರುವ ನ್ಯೂನತೆಗಳನ್ನು ಸರಿಪಡಿಸಲು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಪ್ರಯೋಗಾಲಯ ನಿರ್ವಹಣಾ ಸಮಿತಿಯಿಂದ ವಿಮರ್ಶೆ ಸಭೆಯನ್ನು (MRM meeting) ನಡೆಸಿ, ಆಂತರಿಕ ಪರಿಶೋಧನೆಯಲ್ಲಿ ತಿಳಿಸಿರುವ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಂಡು, ದಿನಾಂಕ: 28.04.2021 ರಂದು ಒಟ್ಟು 16 ರಾಸಾಯನಿಕ ನಿಯತಾಂಕಗಳ (Colour, Taste, pH, Turbidity, Odour, Specific Conductance, Alkalinity, Total Dissolved Solids, Total Hardness, Calcium, Magnesium, Chloride, Fluoride, Sulphate Nitrate, Iron) ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವುದಕ್ಕೆ NABL ಗೆ Online ಮೂಲಕ ಅರ್ಜಿಯನ್ನು ಸಲ್ಲಿಸಲಾಗಿರುತ್ತದೆ ಮತ್ತು ಈ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ನಿರ್ವಹಣೆ ಮತ್ತು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲಾ ಪ್ರಯೋಗಾಲಯಕ್ಕೆ NABL ಮಾನ್ಯತೆಯನ್ನು ನೀಡುವ NABL ನಿಂದ Final Audit ಅನ್ನು ಶ್ರೀ ಆರ್. ಕೆ. ಸೋಲಂಕಿ ನೇತೃತ್ವದಲ್ಲಿ, ತಾಂತ್ರಿಕ ಮೌಲ್ಯಮಾಪಕರಾದ ಶ್ರೀ ಸ್ಯಾಮ್ಯುಯಲ್ ಪ್ರಸನ್ನ ರವರು ದಿನಾಂಕ: 02.06.2021 ರಂದು ಕೈಗೊಂಡಿದ್ದು, ಅಂತಿಮ ಪರಿಶೋಧನೆಯಲ್ಲಿ ಪ್ರಯೋಗಾಲಯಗಳಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ಅಳವಡಿಸಿಕೊಂಡಿರುವ ವಿಧಾನಗಳ (ISO-17025-2017) ದಾಖಲಾತಿಗಳನ್ನು ಮತ್ತು ಕಾರ್ಯವಿಧಾನಗಳನ್ನು ತಿಳಿಸಲಾಗಿದ್ದು, Audit ಸಮಯದಲ್ಲಿ ಸೂಚಿಸಿರುವ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಂಡು ಪರೀಕ್ಷಾ ವರದಿಗಳನ್ನು Auditor ಗಳಿಗೆ ಸಲ್ಲಿಸಲಾಗಿರುತ್ತದೆ.

ಈ ಎಲ್ಲಾ ಅಂಶಗಳ ಆಧಾರದ ಮೇಲೆ Auditor ಗಳು ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಂಡಿರುವ ಕಾರ್ಯವಿಧಾನಗಳ ದಾಖಲಾತಿಗಳ, ನೀರಿನ ಗುಣಮಟ್ಟದ ಪರೀಕ್ಷಾ ವರದಿಗಳ ಪರಿಶೀಲನೆ, ಮತ್ತು ಪ್ರಯೋಗಾಲಯಗಳಲ್ಲಿ ನಿರ್ವಹಿಸಿರುವ ದಾಖಲಾತಿಗಳ ಆಧಾರದ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಪ್ರಯೋಗಾಲಯಕ್ಕೆ NABL ಮಾನ್ಯತೆಯನ್ನು ಮೇಲೆ ತಿಳಿಸಿರುವ ಒಟ್ಟು 16 ರಾಸಾಯನಿಕ ನಿಯತಾಂಕಗಳ ಪರೀಕ್ಷೆಗಳನ್ನು ಕೈಗೊಳ್ಳಲು ಅರ್ಹತೆಯನ್ನು ಹೊಂದಿರುತ್ತದೆ ಎಂದು NABL Board ಗೆ ಶಿಫಾರಸ್ಸು ಮಾಡಿರುತ್ತಾರೆ. ಸದರಿಯವರ ಶಿಫಾರಸ್ಸಿನ ಆಧಾರದ ಮೇಲೆ NABL ನಿಂದ ದಕ್ಷಿಣ ಕನ್ನಡ ಜಿಲ್ಲಾ ನೀರು ಪರೀಕ್ಷಾ ಪ್ರಯೋಗಾಲಯಕ್ಕೆ NABL ಮಾನ್ಯತೆಯನ್ನು ನೀಡಲಾಗಿರುತ್ತದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿಯಲ್ಲಿ ಸ್ಥಾಪಿಸಲಾಗಿರುವ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಯೋಗಾಲಯವು NABL ಮಾನ್ಯತೆಯನ್ನು ಪಡೆದಿರುವ ರಾಜ್ಯದ ಮೊದಲ ಪ್ರಯೋಗಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುತ್ತದೆ.

 6,422 total views,  2 views today

WhatsApp chat