Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಣಿ ನಾಡುಎಂದೇ ಕರೆಸಿಕೊಳ್ಳುವ ಬಳ್ಳಾರಿ ಜಿಲ್ಲೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಭೌಗೋಳಿಕವಾಗಿ ರಾಜ್ಯದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಅತಿ ಹೆಚ್ಚು ಖನಿಜ ಸಂಪತ್ತನ್ನು ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿರುವ ಜಿಲ್ಲೆಯಾಗಿದೆ. ಸ್ವಾತಂತ್ರ್ಯಕ್ಕಿಂತ ನೈರ್ಮಲ್ಯ ಮುಖ್ಯವೆಂಬ ಬಾಪುವಿನ ಕನಸು ಈ ಜಿಲ್ಲೆಯ ಪುಟ್ಟಗ್ರಾಮವೊಂದರಲ್ಲಿ ನನಸಾಗಿದೆ. ಈ ಗ್ರಾಮ ಪಂಚಾಯತಿಯ ಹೆಸರು ಕೊರ್ಲಗುಂದಿ. ೧೩೫೭ ಕುಟುಂಬಗಳನ್ನು ಹೊಂದಿರುವ ಈ ಪುಟ್ಟಗ್ರಾಮ ಸ್ವಚ್ಛ ಸುಂದರ ಗ್ರಾಮವಾಗಿ ಹೊರಹೊಮ್ಮಿದೆ. ನಿರ್ಮಲ ಭಾರತ್‌ ಅಭಿಯಾನ ಹಾಗೂ ಸ್ವಚ್ಛ ಭಾರತ ಮಿಷನ್ (ಗ್ರಾ)ಯೋಜನೆಯ ಲಾಭ ಪಡೆದಿರುವ ಈ ಗ್ರಾಮಸ್ಥರು ಪ್ರತಿಯೊಂದು ಮನೆಗಳಲ್ಲಿಯೂ ಶೌಚಾಲಯಗಳನ್ನು ಕಟ್ಟಿಸಿಕೊಳ್ಳುವ ಜೊತೆಗೆ ಮನೆಯ ಎಲ್ಲಾ ಸದಸ್ಯರು ಶೌಚಾಲಯವನ್ನು ಬಳಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸರಿ ಸುಮಾರು ೬ ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮ ಪಂಚಾಯತಿ ೧೮ ಜನ ಚುನಾಯಿತ ಸದಸ್ಯರನ್ನು ಒಳಗೊಂಡಿದೆ.

ನೀರು ಮತ್ತು ನೈರ್ಮಲ್ಯ ಕುರಿತು ವಿಶೇಷ ಕಾಳಜಿಯನ್ನು ಹೊಂದಿರುವ ಈ ಗ್ರಾಮ ಪಂಚಾಯತಿಯ ಸದಸ್ಯರು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ಪ್ರವೃತ್ತವಾಗಿದ್ದು ೧೨ ಜನರನ್ನೊಳಗೊಂಡ ನೀರು ಮತ್ತು ನೈರ್ಮಲ್ಯ ಸಮಿತಿಯನ್ನೂ ರಚಿಸಿಕೊಂಡಿದೆ. ಕುಡಿಯುವ ನೀರು, ನೀರಿನ ಮಿತ ಬಳಕೆ, ವೈಯಕ್ತಿಕ ನೈರ್ಮಲ್ಯ, ಗ್ರಾಮದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು, ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಹಾಗೂ ಸಮರ್ಪಕ ತ್ಯಾಜ್ಯ ವಿಲೇವಾರಿ ಸೇರಿದಂತೆ ಈ ಸಮಿತಿ ಪ್ರತಿ ವಾರಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುತ್ತಿದೆ.

ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಚೆನ್ನಮ್ಮ, ಉಪಾಧ್ಯಕ್ಷೆ ಓ.ಸುಲೋಚನಾ ಇಲ್ಲಿನ ಪಂಚಾಯತಿ ಆಭಿವೃಧ್ಧಿ ಅಧಿಕಾರಿ ಎಂ.ಕೆ ಸಂಧ್ಯಾರಾಣಿ ಜೊತೆಗೂಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಇವರ ಈ ಸೇವೆಯನ್ನು ಪರಿಗಣಿಸಿದ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ೨೦೧೭-೨೦೧೮ ರಲ್ಲಿ ನಿರ್ಮಲ ಗ್ರಾಮ ಪುರಸ್ಕಾರವನ್ನು ಈ ಗ್ರಾಮ ಪಂಚಾಯತಿಗೆ ನೀಡಿ ಗೌರವಿಸಿದೆ. ೨೦೧೮-೨೦೧೯ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಸಹ ಗಾಂಧಿಗ್ರಾಮ ಪುರಸ್ಕಾರವನ್ನು ನೀಡಿ ಗೌರವಿಸಿದೆ.

ಇನ್ನು ಒಂದು ಹೆಜ್ಜೆ ಮುಂದುವರೆದಿರುವ ಈ ಗ್ರಾಮ ಪಂಚಾಯತಿಯು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಅನುದಾನ ಪಡೆದು ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಿದೆ. ಮನೆ, ಅಂಗಡಿ ಮುಗ್ಗಟ್ಟು ಸೇರಿದಂತೆ ಗ್ರಾಮದಲ್ಲಿ ಉತ್ಪಾದನೆಯಾಗುವ ಒಣ ಕಸವನ್ನು ಈ ಘಟಕದಲ್ಲಿ ಸಂಗ್ರಹಿಸಲಾಗುತ್ತಿದೆ. ಈ ಘಟಕದಲ್ಲಿ ಸದ್ಯ ೬ ಮಂದಿ ಕಾರ್ಯ ನಿರ್ವಹಿಸುತ್ತಿದ್ದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಈ ಘಟಕದ ಮೇಲುಸ್ತುವಾರಿ ವಹಿಸಿದ್ದಾರೆ. ವಾರಕ್ಕೆಒಮ್ಮೆ ಮನೆ ಮನೆಗೆ ತೆರಳಿ ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಒಣ ಕಸವನ್ನು ಪಂಚಾಯತಿಯ ವಾಹನದ ಮೂಲಕ ಘಟಕಕ್ಕೆತಂದು ಸುಮಾರು ೫೪ ವಿಭಾಗಗಳಾಗಿ ವಿಂಗಡಿಸಲಾಗುತ್ತಿದೆ. ಹೀಗೆ ವಿಂಗಡಿಸಲ್ಪಟ್ಟ ತ್ಯಾಜ್ಯವನ್ನು ಮರುಬಳಕೆಗೆ ನೀಡುವ ಮೂಲಕ ಪಂಚಾಯತಿತ್ಯಾಜ್ಯದಿಂದ ಆದಾಯದ ಮೂಲವನ್ನುಕಂಡುಕೊಂಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಪಂಚಾಯತಿ ಗ್ರಾಮದ ಜನರ ಸಹಕಾರದೊಂದಿಗೆ ಮುನ್ನಡೆಯುತ್ತಿದ್ದು ಈ ಉತ್ಸಾಹ ಹುಮ್ಮಸ್ಸು ಸದಾ ಹೀಗೆ ಮುಂದುವರೆಯಲಿ ಎಂದು ಆಶಿಸೋಣ.

ನಮ್ಮಿಂದಲೇ ಆಗಲಿ‌ ಬದಲಾವಣೆ

 6,669 total views,  6 views today

WhatsApp chat