Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

https://swachhamevajayate.org/wp-content/uploads/2023/05/WhatsApp-Image-2023-03-14-at-11.06.46-AM-600x500.jpg

ಅತ್ಯಮೂಲ್ಯಸಂಪತ್ತಾದ ನೀರಿನ ನಿರ್ವಹಣೆ ಮತ್ತು ಸಮುದಾಯ ಇಂಗು ಗುಂಡಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ ಔರಾದ್ ತಾಲೂಕಿನ ಧೂಪತ ಮಹಾಗಾಂವ್ ಗ್ರಾಮ ಪಂಚಾಯಿತಿ ಸದಸ್ಯೆ ಗೀತಾಬಾಯಿ ಪವಾರ್ ರಾಷ್ಟಮಟ್ಟದ ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ 2023 ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಗಡಿ ಜಿಲ್ಲೆಯ ಕೀರ್ತಿ ಪತಾಕೆಯನ್ನು ರಾಷ್ಟಮಟ್ಟದಲ್ಲಿ ಹಾರಿಸಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತುರಾಜ್ಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಯೋಗದಲ್ಲಿ ತಾಲ್ಲೂಕಿನ ಧೂಪತಮಹಗಾಂವ್‌ನಲ್ಲಿ ಸುಮಾರು 125ಕ್ಕೂ ಹೆಚ್ಚು ಕಡೆ ಮಳೆ ನೀರು ಹಾಗೂ ಅನಾವಶ್ಯಕ ನೀರು ಪೋಲಾಗದಂತೆ ಇಂಗುಗುಂಡಿ ನಿರ್ಮಿಸಿಕೊಳ್ಳುವಲ್ಲಿ ಸದಸ್ಯೆ ಗೀತಾಬಾಯಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಗ್ರಾಮದ ಜನರಿಗೆ ನೀರಿನ ಮಹತ್ವದ ಮನವರಿಕೆ ಮಾಡಿಸಿ ಇಂಗುಗಂಡಿ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಸ್ವತ ತಾವೂ ಸಹ ಒಂದು ಇಂಗುಗುಂಡಿ ನಿರ್ಮಿಸಿಕೊಂಡು ಇತರರಿಗೂ ಪ್ರೋತ್ಸಾಹ ನೀಡಿ ಮಾದರಿಯಾಗಿ ಹೊರ ಹೊಮ್ಮಿದ್ದಾರೆ.

ಮಹಿಳಾ ಸದಸ್ಯೆಯೊಬ್ಬರು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಇಂಗುಗುಂಡಿ ನಿರ್ಮಿಸಿಕೊಂಡಿದ್ದಲ್ಲದೆ ಗ್ರಾಮದ ಇತರರಿಗೂ ಇಂಗುಗುಂಡಿ ನಿರ್ಮಾಣ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ರಾಷ್ಟಮಟ್ಟದ ಪ್ರಶಸ್ತಿಯು ಇವರನ್ನು ಹುಡುಕಿಕೊಂಡು ಬಂದಿದ್ದು, ಔರಾದ್ ತಾಲೂಕಿಗೂ ಗರಿಮೆ ಮೂಡಿದೆ.

https://swachhamevajayate.org/wp-content/uploads/2023/05/WhatsApp-Image-2023-03-14-at-11.05.23-AM-600x500.jpg
https://swachhamevajayate.org/wp-content/uploads/2023/05/WhatsApp-Image-2023-03-14-at-11.02.11-AM-1-600x500.jpg

ವ್ಯರ್ಥ ನೀರು ಸದುಪಯೋಗ

ಮನೆ ಬಳಕೆಯ ವ್ಯರ್ಥ ನೀರು ಚರಂಡಿಗೆ ಹರಿದು ಪೋಲಾಗುತ್ತದೆ. ಆದರೆಈ ನೀರನ್ನೇ ಇಂಗುಗುಂಡಿಯ ಮೂಲಕ ಭೂಮಿಗೆ ಇಂಗಿಸಿ, ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸವನ್ನು ಗೀತಾಬಾಯಿ ಶ್ರದ್ಧೆಯಿಂದ ಮಾಡಿಕೊಂಡು ಬಂದಿದ್ದಾರೆ. ಅಲ್ಲದೆ, ಮನೆಯಲ್ಲಿ ನಿತ್ಯವೂ ಪಾತ್ರೆ ತೊಳೆದ,ಬಟ್ಟೆ ಒಗೆದ,ಸ್ನಾನ ಮಾಡಿದ, ಅಡುಗೆ ಮಾಡುವಾಗ ಬಳಸಿದ ಹಾಗೂ ಮನಗೆಲಸ ಸೇರಿದಂತೆ ಯಾವುದೇ ಕೆಲಸಕ್ಕೆ ಬಳಸಿದ ನೀರು ವ್ಯರ್ಥವಾಗದಂತೆ ಇಂಗುಗುಂಡಿಯ ಮೂಲಕ ಪುನರ್ ಬಳಕೆಗೆ ಒತ್ತು ನೀಡಿರುವುದು ಇವರ ಸಾಧನೆಯಾಗಿದೆ. ಜೊತೆಗೆಮಳೆ ನೀರು, ಚರಂಡಿ ನೀರು ಅನಾವಶ್ಯಕ ಪೋಲಾಗದಂತೆ ಸಮುದಾಯ ಇಂಗುಗುಂಡಿ ನಿರ್ಮಾಣ ಮಾಡಿಕೊಂಡು ಅದರ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ.ತಾವಷ್ಟೇ ಅಲ್ಲದೆ, ಗ್ರಾಮದ ಎಲ್ಲರೂ ನೀರಿನ ಸದ್ಬಳಕೆ ಮಾಡಬೇಕು. ನೀರನ್ನು ಉಳಿಸಬೇಕು ಎಂಬ ಸಂದೇಶವನ್ನು ಸಮುದಾಯದ ಮಟ್ಟದಲ್ಲಿ ಗೀತಾಬಾಯಿ ಸಾರಿದ್ದಾರೆ. ಇಂಗುಗುಂಡಿಯನ್ನು ನಿರ್ಮಿಸಿಆನೀರನ್ನು ಕೃಷಿಗೆಬಳಸುವರುಅಲ್ಲದೆಮನೆಯ ಅಂಗಳದಲ್ಲಿ ಕಿಚನ್ ಗಾರ್ಡನ್ ಸಹ ಮಾಡಿಕೊಂಡು ನೀರನ್ನು ಸದುಪಯೋಗ ಮಾಡಿಕೊಳ್ಳಬಹುದು ಎನ್ನುವುದನ್ನು ಇವರು ಮಾಡಿ ತೋರಿಸಿದ್ದಾರೆ.

ಸ್ಯಾನಿಟರಿ ಪ್ಯಾಡ್ ಬಳಕೆಯ ಅರಿವು

ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಋತುಚಕ್ರದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಈ ಅವಧಿಯಲ್ಲಿ ಎಲ್ಲರೂ ಆರೋಗ್ಯಕ್ಕಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವಂತೆ ಇವರು ಪ್ರೇರೇಪಿಸಿದ್ದಾರೆ. ಬಳಸಿದ ಸ್ಯಾನಿಟರಿ ಪ್ಯಾಡ್ ಅನ್ನು ಒಣ ಕಸದೊಂದಿಗೆ ಮಿಶ್ರಣ ಮಾಡದೇ ಪ್ರತ್ಯೇಕವಾಗಿ ಕಾಗದದಲ್ಲಿ ಮಡಚಿ xಎಂದು ಗುರುತು ಚಿಹ್ನೆ ಹಾಕಿ ಸ್ವಚ್ಛ ವಾಹಿನಿಗೆ ವಿಲೇವಾರಿ ಮಾಡಬೇಕು. ಅದನ್ನು ಘಟಕದವರು ಇನ್ಸಿನರೇಟರ್ ಯಂತ್ರಕ್ಕೆ ಹಾಕಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುತ್ತಾರೆ ಎಂದು ಮಹಿಳೆಯರಲ್ಲಿ ಗೀತಾಬಾಯಿ ಅರಿವು ಮೂಡಿಸಿದ್ದಾರೆ.

ಗೊಗ್ಗವ್ವೆ ಕೆರೆಯಪುನಶ್ಚೇತನ

ಗ್ರಾಮ ಪಂಚಾಯಿತಿ ವತಿಯಿಂದ ಗೊಗ್ಗವ್ವೆ ಕೆರೆಯನ್ನು ಸ್ವಚ್ಛಗೊಳಿಸಿ, ಇದೀಗ ಬೋಟಿಂಗ್ ವ್ಯವಸ್ಥೆ ಮಾಡಿರುವುದು ಗ್ರಾಮದ ಹೆಗ್ಗೆಳಿಕೆಯಾಗಿದೆ. ಕಲುಷಿತ ನೀರಿನಿಂದ ಕೂಡಿದ್ದ ಈ ಕೆರೆ ಈಗ ಸುಂದರವಾಗಿದೆ. ಗ್ರಾಮದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಕಂಪ್ಯೂಟರ್‌ ಕಲಿಕೆಯ ವ್ಯವಸ್ಥೆ ಮಾಡಲಾಗಿದೆ. ಗೀತಾಬಾಯಿ ಅವರುಗ್ರಾಮದಸರ್ವಾಂಗೀಣ ಅಭಿವೃದ್ಧಿಗೆಅವಿರತಪ್ರಯತ್ನಮಾಡುತ್ತಿದ್ದಾರೆ..

ಸುಜಲ್ ಶಕ್ತಿ ಸಮ್ಮಾನ್ ಪ್ರದಾನ

ಗೀತಾಬಾಯಿ ಅವರ ಸಾಧನೆಯನ್ನು ಕಂಡು ಭಾರತ ಸರಕಾರದ ಜಲ ಶಕ್ತಿ ಸಚಿವಾಲಯವು 2023ರ ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಪ್ರಶಸ್ತಿಯನ್ನು ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟಪತಿ ದ್ರೌಪತಿ ಮುರ್ಮು ಅವರು ಗೀತಾಬಾಯಿಅವರಿಗೆನೀಡಿದ್ದಾರೆ.

 2,465 total views,  1 views today

WhatsApp chat