Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪುತ್ತನಪುರ ಗ್ರಾಮ ಪಂಚಾಯಿತಿಯು ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಇದ್ದು ತಾಲ್ಲೂಕು ಕ್ಷೇತ್ರ ಗುಂಡ್ಲುಪೇಟೆಯಿಂದ 7 ಕಿ.ಮೀ. ಮತ್ತು ಜಿಲ್ಲಾ ಕ್ಷೇತ್ರ ಚಾಮರಾಜನಗರದಿಂದ 42 ಕಿ.ಮೀ. ದೂರದಲ್ಲಿದೆ. ಪುತ್ತನಪುರ ಗ್ರಾಮ ಪಂಚಾಯಿತಿಯು ಪುತ್ತನಪುರ, ಹ೦ಗಳಪುರ, ಬಸವಾಪುರ, ಬೆಂಡರವಾಡಿ ಮತ್ತು ಕೋಡಹಳ್ಳಿ ಎಂಬ 6 ಗ್ರಾಮಗಳನ್ನೊಳಗೊಂಡಿದ್ದು ಇಲ್ಲಿನ ಒಟ್ಟು ಜನಸಂಖ್ಯೆ 6283 ಇರುತ್ತದೆ.

ಸರ್ಕಾರದಿಂದ ಗ್ರಾಮೀಣ ಭಾಗದ ಪ್ರತಿ ಮನೆಗೂ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಾರಿಯಾದ ಜಲ ಜೀವನ್ ಮಿಷನ್‌ ಯೋಜನೆಯು ಎಲ್ಲಾ ಗ್ರಾಮಗಳಲ್ಲಿಯೂ ಹಂತ ಹಂತವಾಗಿ ಅನುಷ್ಠಾನಗೊಳ್ಳುತ್ತಿದ್ದು, ಪ್ರತಿ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಮತ್ತು ಮೀಟರ್ ಅಳವಡಿಸುವ ಮೂಲಕ ಯೋಜನೆಯ ಉದ್ದೇಶವನ್ನು ಪೂರ್ಣಗೊಳಿಸಲಾಗುತ್ತಿದೆ.

ಯೋಜನೆಯ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಭಿಪ್ರಾಯ

ಜಲ ಜೀವನ್ ಮಿಷನ್‌ 2019 ರಲ್ಲಿ ಜಾರಿಯಾದ ಯೋಜನೆಯಾಗಿದ್ದು ಮುಂದಿನ 5 ವರ್ಷಗಳಲ್ಲಿ ಪ್ರತಿ ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ಮತ್ತು ಸುರಕ್ಷಿತ ನೀರು ಒದಗಿಸುವ ನಿಟ್ಟಿನಲ್ಲಿ ಕಾರ್ಯರೂಪಿತವಾದ ಯೋಜನೆ. ಗ್ರಾಮೀಣ ಭಾಗದ ಮಹಿಳೆಯರ ದೈಹಿಕ ಶ್ರಮ ಕಡಿಮೆ ಮಾಡಿ ಅವರ ಆರೋಗ್ಯವನ್ನು ವೃದ್ಧಿಸುವಲ್ಲಿ ಇದು ಸಹಕಾರಿಯಾಗಿದೆ

ತದನಂತರದಲ್ಲಿ ಜಲ ಜೀವನ್‌ ಮಿಷನ್‌ ಯೋಜನಾ ತಂಡದವರು ಗ್ರಾಮ ಸಭೆಗಳಲ್ಲಿ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾ, ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಅಲ್ಲಿನ ಭಾಗದ ಜನತೆಗೆ ಯೋಜನೆಯ ನೈಜ ಉದ್ದೇಶ ತಿಳಿಸಿದರು ಹೀಗೆ ಹಂತ ಹಂತವಾಗಿ ಜನರಿಗೆ ಈ ಯೋಜನೆಯ ಬಗ್ಗೆ ನಂಬಿಕೆ ಮೂಡಿತು. ಆದರೂ ಯೋಜನೆಯ ಮೊತ್ತದಲ್ಲಿ ಶೇ.10% ಸಮುದಾಯ ವಂತಿಕೆ ಸಂಗ್ರಹಿಸಬೇಕಾಗಿರುವುದರಿಂದ ಈ ವಿಷಯವಾಗಿ ಗ್ರಾಮಸ್ಥರು ಪ್ರಶ್ನಿಸುವುದು ಸಹಜವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ, ಜಲ ಜೀವನ ಮಿಷನ್‌ ಯೋಜನಾ ತಂಡದವರು ಪ್ರತಿ ಗ್ರಾಮದಲ್ಲೂ ಸಮುದಾಯ ವಂತಿಕೆಯ ಕುರಿತು ಸಭೆ ನಡೆಸಿ ಸಮುದಾಯ ವಂತಿಕೆ ಕಟ್ಟಬೇಕಾದ ಉದ್ದೇಶವನ್ನು ತಿಳಿಸಿರುವುದರಿಂದ ಈಗ ಜೆಜೆಎಂ ಯೋಜನೆ ಮೂಲಕ ನಳ ಸಂಪರ್ಕ ಪಡೆದ ಎಲ್ಲರೂ ಸಮುದಾಯ ವಂತಿಕೆ ಕಟ್ಟುತ್ತಿರುವುದು ಖುಷಿಯ ವಿಚಾರವಾಗಿದೆ.

ಈ ಯೋಜನೆಯ ಪಾಲುದಾರರಾದ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, AE/JE, ತಾಲ್ಲೂಕು ಪಂಚಾಯಿತಿ EO, ಜಿಲ್ಲಾ ಯೋಜನಾ ವ್ಯವಸ್ಥಾಪಕರು, ISA ಸಂಸ್ಥೆ ಸಿಬ್ಬಂದಿಗಳು, ಪಂಚಾಯಿತಿ ಮಟ್ಟದ ಅಧಿಕಾರಿಗಳು ತರಬೇತಿ ನೀಡುವುದರ ಮೂಲಕ ಹಾಗೂ ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ 148 ಕಾರ್ಯಾತ್ಮಕ ನಳ ಸಂಪರ್ಕ ನೀಡುವುದರ ಮೂಲಕ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.

ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಲ್ಲಿ ಬಸವಾಪುರ ಗ್ರಾಮದ ಗುತ್ತಿಗೆದಾರರು ಹೆಚ್ಚಿನ ಆಸಕ್ತಿಯಿಂದ ತಕ್ಷಣ ಸ್ಪಂದಿಸುತ್ತಾರೆ. ಹಾಗೆ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಳವಡಿಕೆ ಮಾಡುವುದರ ಮೂಲಕ ಯೋಜನೆಯನ್ನು ಹೆಚ್ಚು ಫಲಪ್ರದವಾಗಿ ಮಾಡಿದ್ದಾರೆ. ಜೊತೆಗೆ ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಭಾಗಿದಾರರಾಗಿದ್ದಾರೆ.

ಹರ್ ಘರ್ ಜಲ್ ಘೋಷಣೆ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅಂತರ್ಜಲದ ಮಟ್ಟ ಕುಸಿದಿದ್ದು, 1000 ಅಡಿ ಬೋ‌ವೆಲ್ ಕೊರೆದರೂ ನೀರು ಲಭ್ಯವಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು. ಗ್ರಾಮದಲ್ಲಿ ಇಲ್ಲಿಯವರೆಗೂ ಬೋರ್‌ವೆಲ್‌ ನೀರನ್ನು ಓವರ್ ಹೆಡ್ ಟ್ಯಾಂಕ್ ಮೂಲಕ ತೊಂಬೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಬೇಸಿಗೆ ಕಾಲದಲ್ಲಿ ಅಂತರ್ಜಲ ಮಟ್ಟ ಕುಸಿತ, ವಿದ್ಯುತ್‌ ವ್ಯತ್ಯಯ, ಪೈಪ್‌ಲೈನ್‌ ಸೋರಿಕೆಯಿಂದ ನೀರು ಸರಬರಾಜು ಮಾಡಲಾಗದ ತುರ್ತು ಸಂದರ್ಭಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿರುವ ಉದಾಹರಣೆಗಳು ಇವೆ. ಪ್ರಸ್ತುತ ಈ ಯೋಜನೆಯ ಅನುಷ್ಠಾನದಿಂದ ಮೇಲಿನ ಸಮಸ್ಯೆಗಳಿಗೆ ಪರಿಹಾರ ದೊರೆತಿದೆ. ಎಲ್ಲಾ ಮನೆಗಳಿಗೂ ನಳ ಸಂಪರ್ಕ ಕಲ್ಪಿಸಲಾಗಿದ್ದು, ಈ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಲಾಗಿದೆ.

 

 

ಗ್ರಾಮಸ್ಥರ ಅಭಿಪ್ರಾಯ

ಜಲ ಜೀವನ್‌ ಮಿಷನ್‌ ಯೋಜನೆಯು ಒಂದು ಉತ್ತಮ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಜನರ ಮನೆ ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ನೀಡಲಾಗುತ್ತಿದೆ. ಪ್ರಾರಂಭದಲ್ಲಿ ಮಾಹಿತಿ ಕೊರತೆಯಿಂದ ನಾವು ಈ ಯೋಜನೆಯ ಬಗ್ಗೆ ಮತ್ತು

ಮೀಟರ್ ಆಳವಡಿಸುವುದರ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದೆವು. ಯೋಜನೆ ಕಾರ್ಯರೂಪಕ್ಕೆ ಬರುತ್ತಿದ್ದಂತೆ ಹಾಗೂ ಜೆಜೆಎಂ ತಂಡ ಯೋಜನೆ ಬಗ್ಗೆ ಗ್ರಾಮಗಳಿಗೆ ಭೇಟಿ ನೀಡಿ, ಸಭೆಗಳನ್ನು ಮಾಡಿ ಮಾಹಿತಿ ನೀಡಿದ್ದರಿಂದ, ಈಗ ಯೋಜನೆಯ ಬಗ್ಗೆ ಅರಿವು  ಮೂಡಿದೆ.”

HDPE ಅಂತಹ ಉತ್ತಮ ಗುಣಮಟ್ಟದ ಪೈಪ್‌ಗಳನ್ನು ಬಳಸಿರುವುದರಿಂದ ಮುಂದಿನ ದಿನಗಳಲ್ಲಿ ಪೈಪ್‌ಲೈನ್ ದುರಸ್ಥಿ ಸಮಸ್ಯೆಗಳು ಬರುವುದಿಲ್ಲ. ಒಟ್ಟಾರೆಯಾಗಿ ಎಲ್ಲಾ ಗ್ರಾಮಗಳಲ್ಲಿಯೂ ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ ನಮ್ಮ ತಾಲ್ಲೂಕಿನ ನೀರಿನ ಬವಣೆ ನೀಗಿಸಿದಂತಾಗಿ, ಯೋಜನೆ ನಮ್ಮೆಲ್ಲರ ಪಾಲಿಗೆ ವರದಾನವಾಗಲಿದೆ ಎಂದು ಸಂತಸ ವ್ಯಕ್ತ ಪಡಿಸುತ್ತಾರೆ ಗ್ರಾಮಸ್ಥರು.

­­ನೀರು ಬೆಲೆಕಟ್ಟಲಾಗದ ಸಂಪನ್ಮೂಲವಾಗಿದ್ದು, ನೀರನ್ನು ಅತ್ಯಂತ ಜವಾಬ್ದಾರಿಯುತವಾಗಿ ಬಳಸೋಣ.

 1,842 total views,  4 views today

WhatsApp chat