Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಗ್ರಾಮೀಣಭಾಗದಲ್ಲಿ ಉತ್ತಮ ಆರೋಗ್ಯ, ಉತ್ತಮ ಪರಿಸರ ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರ ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿಅನೇಕಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದೆಜನರು ಬಚ್ಚಲು ನೀರು, ಬಟ್ಟೆಗಳನ್ನು ತೊಳೆದ ನೀರು ಹಾಗೂ ಪಾತ್ರೆಗಳನ್ನು ತೊಳೆದ ನೀರನ್ನು ಚರಂಡಿಗಳಿಗೆ ಬಿಡುತ್ತಿದ್ದರು. ಇದರಿಂದಚರಂಡಿಗಳು ತುಂಬಿರೋಗಗಳ ತಾಣವಾಗುತ್ತಿತ್ತು.ನಂತರ ಬೂದು ನೀರು ನದಿಯನ್ನುಸೇರಿ ನದಿನೀರಿನಮಾಲಿನ್ಯಕ್ಕೆ ಕಾರಣವಾಗುತ್ತಿತ್ತು. ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿಯಲ್ಲಿ ನೈರ್ಮಲ್ಯ ಕಾಪಾಡುವ ಹಾಗೂ ಜನರ ಜೀವನ ಮಟ್ಟ ಸುಧಾರಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಮಾಡಲಾಗುತ್ತಿದೆ.ಬೂದು ನೀರು ಎಲ್ಲೆಂದರಲ್ಲಿ ನಿಂತು ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆದು ನೀರಿನ ವೈಜ್ಞಾನಿಕ ನಿರ್ವಹಣೆ ಮಾಡುವ ಉದ್ದೇಶದಿಂದ ಬೂದು ನೀರು ನಿರ್ವಹಣಾಘಟಕಗಳನ್ನು ನಿರ್ಮಿಸಲಾಗುತ್ತಿದೆ.

ಗ್ರಾಮೀಣ ಪ್ರದೇಶದ ನೈರ್ಮಲ್ಯವನ್ನು ವೃದ್ಧಿಸುವುದು,ಚರಂಡಿಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದು.ಸಾಂಪ್ರದಾಯಿಕ ಜಲಮೂಲಗಳ ಸಂರಕ್ಷಣೆ ಮತ್ತು ನೀರಿನ ಗುಣಮಟ್ಟವನ್ನು ಸುಧಾರಿಸುವುದು.ದ್ರವ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ ಮಾಡಿ ಮರು ಬಳಕೆ ಮಾಡುವುದು ಬೂದುನೀರುನಿರ್ವಹಣೆಯ ಸ್ವಚ್ಛ ಭಾರತ್ ಮಿಷನ್(ಗ್ರಾ) ಮುಖ್ಯ ಉದ್ದೇಶಗಳಾಗಿವೆ.

ಕೊಪ್ಪಳ ಜಿಲ್ಲೆಯ ಒಟ್ಟು 153 ಗ್ರಾಮ ಪಂಚಾಯಿತಿಗಳ 580 ಗ್ರಾಮಗಳಲ್ಲಿಬೂದು ನೀರು ನಿರ್ವಹಣೆರೂಪುರೇಷೆ ಸಿದ್ಧಪಡಿಸಲಾಗಿದೆ. ನದಿಗಳಿಗೆ ಹಾಗೂ ಜಲಮೂಲಗಳಿಗೆ ಸೇರುವ ಬೂದು ನೀರನ್ನು ಸಂಸ್ಕರಿಸುವುದರಿಂದಜಲ ಮೂಲಗಳಸಂರಕ್ಷಣೆ ಮತ್ತು ಪರಿಸರ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಬಹುದು. ಜಿಲ್ಲೆಯಲ್ಲಿಬೂದು ನೀರು ಸಂಸ್ಕರಿಸುವ ಸಲುವಾಗಿ ವೈಜ್ಞಾನಿಕ ಮತ್ತು ತಾಂತ್ರಿಕ ಸಂಯೋಜನೆಗೆ ಮಹತ್ವ ನೀಡಲಾಗುತ್ತಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಬೂದುನೀರುನಿರ್ವಹಣೆಯನ್ನು ಅನುಷ್ಠಾನಗೊಳಿಸಲು ಈಗಾಲೇ ಜಿಲ್ಲೆಯ 580 ಗ್ರಾಮಗಳ DPRಗಳಿಗೆ ಅನುಮೋದನೆನೀಡಲಾಗಿದೆ.

ಕನಕಗಿರಿ ತಾಲ್ಲೂಕಿನ ಗೌರಿಪುರ ಗ್ರಾಮ ಪಂಚಾಯಿತಿಯ ಚಿಕ್ಕತಾಂಡ ಗ್ರಾಮದಲ್ಲಿ ಮೊದಲ ಹಂತದಲ್ಲಿಬೂದುನೀರುನಿರ್ವಹಣೆಯನ್ನು ಅನುಷ್ಠಾನ ಮಾಡಲಾಗಿದೆ. ಚಿಕ್ಕತಾಂಡ ಗ್ರಾಮದಲ್ಲಿ ಒಟ್ಟು 170 ಕುಟುಂಬಗಳಿದೆ.ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆ, ಮಹಾತ್ಮಗಾಂಧಿ ನರೇಗಾ ಯೋಜನೆಗಳಸಹಭಾಗಿತ್ವದಲ್ಲಿ ಮನೆಗಳಿಂದ ಹೊರಬಂದ ಬೂದು ನೀರನ್ನುವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ.ಗ್ರಾಮದಲ್ಲಿ ಸುಮಾರು34.20 KLD ಬೂದು ನೀರು ಉತ್ಪತ್ತಿಯಾಗುತ್ತಿದೆ.ಅದಕ್ಕೆ ಶೇ.50 ರಷ್ಟು ಅಂದರೆ ಸುಮಾರು 17.10 KLD ನಷ್ಟು ಬೂದು ನೀರನ್ನು Inline Treatment ನ ಮಾದರಿಯಲ್ಲಿ ಬರುವ Floating Trap, SiltTrap Constructed Wetlandಮತ್ತು, Planted Gravel Filter Media ಮೂಲಕ ಗ್ರಾಮದಲ್ಲಿ ಬೂದು ನೀರನ್ನು ಸಂಸ್ಕರಿಸಲು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

“ನಮ್ಮ ತಾಂಡದ ನೀರು ಊರಿಂದ ಹೊರಗೆ ಬಂದು ನಿಂತು ಗಬ್ಬು ನಾರುತಾ ಇತ್ತು. ಅದನ್ನ ನೋಡಿ ನಾವು ಗ್ರಾಮ ಪಂಚಾಯಿತಿಯರವರನ್ನು ಬೈತಾ ಇದ್ವಿ, ಈಗ ಬಳಸಿದ ನೀರನ್ನೆ ಸಂಸ್ಕರಿಸಿಮತ್ತೆ ಮರು ಬಳಕೆಯಾಗುವಂತೆ ಮಾಡಿದ್ದಾರೆ. ರಸ್ತೆ ಪಕ್ಕದಲ್ಲಿ ಬೂದುನೀರು ನಿರ್ವಹಣೆ ಇರುವುದರಿಂದ ರಸ್ತೆಯಲ್ಲಿ ಹೋಗುವ ಜನರು ಬಂದು ನಿಂತು ನೋಡಿಹೋಗುತ್ತಾರೆ.

ನಮ್ಮೂರಲ್ಲೂ ಈ ರೀತಿ ವ್ಯವಸ್ಥೆಇರುವುದು ನಮ್ಮಗೂ ಖುಷಿ ಅನಿಸುತ್ತದೆ” ಎಂದುಗ್ರಾಮದಜನರುಅಭಿಪ್ರಾಯಪಡುತ್ತಾರೆ.
ಚಿಕ್ಕತಾಂಡದಜನರು ಕೃಷಿ ಮಾಡುವ ಉದ್ದೇಶ ಹೊಂದಿದ್ದರು. ಆದರೆ ಈ ಭಾಗದಲ್ಲಿಬೋರು ಹಾಕಿಸಿದರೂ ಕೂಡ ನೀರು ಸಿಗುವುದಿಲ್ಲ. ಇಲ್ಲಿನ. ಬೂದು ನೀರನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದರೆ ಕೃಷಿಗೆ ಬಳಕೆ ಮಾಡಬಹುದು ಎಂದು ತಿಳಿಸಿದಾಗ ತುಳುಜಪ್ಪ ಎಂಬ ರೈತ ಮುಂದೆ ಬಂದಿದ್ದು ತಮ್ಮ ಜಮೀನಿನಲ್ಲಿ ಬೂದು ನೀರು ನಿರ್ವಹಣೆಗೆ ಜಾಗ ಕೊಟ್ಟು ಸಹಕರಿಸಿದರು. ಈಗ ತುಳಜಪ್ಪತಮ್ಮ ಜಮೀನಿಗೆ ಅದೇ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ತಾಲ್ಲೂಕಿನಲ್ಲಿ ಮಾದರಿಯಾಗಿದೆ. ಇದನ್ನುನೋಡಿಬೇರೆ ಗ್ರಾಮದವರು ತಮ್ಮ ಗ್ರಾಮಗಳಲ್ಲಿ ಬೂದುನೀರಿನನಿರ್ವಹಣೆ ಮಾಡುತ್ತೇವೆ ಎನ್ನುತ್ತಾರೆಎಂದುಪಿ.ಡಿ.ಓಅಭಿಪ್ರಾಯವ್ಯಕ್ತಪಡಿಸುತ್ತಾರೆ.

ಪ್ರತಿ ಮನೆಯಿಂದ ಹೊರಬರುವ ಬೂದು ನೀರನ್ನು ಚರಂಡಿ ಮೂಲಕ ಊರಿಂದ ಹೊರಗೆ ಬಿಡುವುದು ಎಲ್ಲಾ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಕೊಪ್ಪಳ ಜಿಲ್ಲೆಯಲ್ಲಿ ಬೂದು ನೀರು ನಿರ್ವಹಣೆಯನ್ನುಅನುಷ್ಠಾನ ಮಾಡಲಾಗುತ್ತಿದ್ದು, ಪ್ರತಿಯೊಂದು ಗ್ರಾಮದಲ್ಲೂ ಕೂಡ ಬೂದು ನೀರಿನ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಅದರಲ್ಲಿ ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಚಿಕ್ಕತಾಂಡದಗ್ರಾಮದಲ್ಲಿ ಬೂದು ನೀರಿನ ಸಂಸ್ಕರಣೆಗ್ರಾಮದ ನೈರ್ಮಲ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ. ಇದು ಜಿಲ್ಲೆಯಲ್ಲಿ ಮಾದರಿಯಾಗಿದ್ದು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಹರ್ಷ ವ್ಯಕ್ತಪಡಿಸುತ್ತಾರೆ.

ನೀರುಅತ್ಯಮೂಲ್ಯಸಂಪತ್ತು. ನೀರಿನಜವಾಬ್ದಾರಿಯುತಬಳಕೆಮತ್ತುನಿರ್ವಹಣೆಅತಿಮುಖ್ಯ. ಜಲಮೂಲಗಳಸಂರಕ್ಷಿಸೋಣ. ನಾಡಿನಏಳ್ಗೆಗೆಕೈಜೋಡಿಸೋಣ.

 2,131 total views,  7 views today

WhatsApp chat