Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಮೈಸೂರು ಸಂಸ್ಥಾನದಲ್ಲಿ ಅರಿಕೊಟ್ಟಾರ ಎಂದೇ ಕರೆಯಲ್ಪಡುತ್ತಿದ್ದ ಚಾಮರಾಜನಗರ ಜಿಲ್ಲೆ ತಮಿಳುನಾಡು ಮತ್ತು ಕೇರಳ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 18 ಕಿ.ಮೀ ದೂರದ ಗಜ್ಜಲ ಹಟ್ಟಿ ಎಂಬಲ್ಲಿ ಈ ಜಿಲ್ಲೆಯ ಜೀವನಾಡಿಯಾಗಿರುವ ಸುವರ್ಣಾವತಿ ನದಿಯ ಉಗಮ ಸ್ಥಾನವಾಗಿದೆ. ಚಾಮರಾಜನಗರ ಮತ್ತು ಕೊಯಮತ್ತೂರು ರಸ್ತೆಯ ಹೆದ್ದಾರಿಯ ಪಕ್ಕದಲ್ಲಿ 1977ರಲ್ಲಿ ಜಲಾಶಯವನ್ನು ನಿರ್ಮಿಸಲಾಗಿದ್ದು, ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಭಾಗಗಳಿಗೆ ನೀರರಿಸಲು ಈ ಜಲಾಶಯ ನೆರವಾಗಿದೆ. ಈ ಭಾಗಗಳನ್ನು ಬಿಟ್ಟರೆ ಜಿಲ್ಲೆಯ ಇನ್ನುಳಿದ ಭಾಗವು ನೀಲಗಿರಿಯಲ್ಲಿನ ಲೇವಾರ್ಡ ಪ್ರದೇಶದಲ್ಲಿದ್ದು, ಅರೆ ಶುಷ್ಕ ಮಳೆ ಅವಲಂಬಿತ ಪ್ರದೇಶವನ್ನು ಅರಣ್ಯದ ಬೆಟ್ಟಗಳ ಜೊತೆಗೆ ಹೊಂದಿದೆ. ಈ ಜಿಲ್ಲೆಯು ಸುಮಾರು 2000ನೇ ಇಸವಿಯಿಂದ ತೀವ್ರತರನಾದ ಬರಕ್ಕೆ ತುತ್ತಾಗಿದ್ದು, ಜಿಲ್ಲೆಯ ಅನೇಕ ಬಡ ಜನರು, ಕೂಲಿ ಕಾರ್ಮಿಕರು ಕೆಲಸದ ಹುಡುಕಾಟದಲ್ಲಿ ಮೈಸೂರು, ಬೆಂಗಳೂರು ಮತ್ತು ಕೇರಳಗಳಿಗೆ ವಲಸೆ ಹೋಗಲಾರಂಬಿಸಿದರು.

ನೀರಿನ ಅತಿಯಾದ ಅಭಾವದಿಂದಾಗಿ ಈ ಭಾಗದ ಭೂಮಿ ಬರಡು ಭೂಮಿಯಾಗಿ ಹೋಗಿಬಿಟ್ಟಿದೆ. ಬೇಸಿಗೆ ಕಾಲದಲ್ಲಂತೂ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಇದೀಗ ಪರಿಸ್ಥಿತಿ ಕೊಂಚ ಸುಧಾರಿಸಿದ್ದು, ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ ಜೀವನ್ ಮಿಷನ್ ನಿಂದಾಗಿ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ತಲಾ 55 ಲೀ. ಶುದ್ಧ ನೀರನ್ನು ಪಡೆಯಬುದಾಗಿದ್ದು, ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾದ ಯೋಜನೆಯ ಅನುಷ್ಠಾನ ಕಾಮಗಾರಿ ಯಶಸ್ವಿಯಾಗಿದೆ. ಈ ಕುರಿತ ಒಂದು ಪಕ್ಷಿ ನೋಟ ಇಲ್ಲಿದೆ.

ಚಾಮರಾಜನಗರವು 5 ತಾಲ್ಲೂಕು, 130 ಗ್ರಾಮ ಪಂಚಾಯಿತಿ, 708 ಕಂದಾಯ ಗ್ರಾಮಗಳು ಹಾಗೂ 895 ಜನವಸತಿಗಳನ್ನು ಒಳಗೊಂಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಜಲ ಜೀವನ್ ಮಿಷನ್ ಯೋಜನೆಯನ್ನು ಜಿಲ್ಲೆಯ ಅಮಚವಾಡಿ ಗ್ರಾಮದ ಆದಿ ಜಾಂಬವರ ಬೀದಿಯಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. 2011ರ ಜನಗಣತಿಯ ಪ್ರಕಾರ ಈ ಗ್ರಾಮದಲ್ಲಿ 7221 ಜನರು ವಾಸಿಸುತ್ತಿದ್ದರು. ಈ ಪೈಕಿ 3524 ಪುರುಷರು, 3697 ಮಹಿಳೆಯರು. ಪ್ರಸ್ತುತ (ಡಿಸೆಂಬರ್-2020) ಗ್ರಾಮ ಪಂಚಾಯಿತಿಯ ಸಮೀಕ್ಷೆಗಳ ಪ್ರಕಾರ ಈ ಗ್ರಾಮವು 10,122 ಜನಸಂಖ್ಯೆಯನ್ನು ಹೊಂದಿದೆ.

ಪ್ರಸ್ತುತ ಈ ಗ್ರಾಮ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಕಿರು ನೀರು ಸರಬರಾಜು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದೆ. ಪೈಪ್‌ಲೈನ್ ಮೂಲಕ ಗ್ರಾಮಕ್ಕೆ ಶುದ್ಧ ನೀರನ್ನು ಒದಗಿಸಲಾಗುತ್ತಿದ್ದು, ಇದೀಗ ಜಲ ಜೀವನ್ ಮಿಷನ್ ಯೋಜನೆಯಡಿ ಅಮಚವಾಡಿ ಗ್ರಾಮದ ಆದಿ ಜಾಂಬವ ಬೀದಿಯಲ್ಲಿನ ಪ್ರತಿ ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಮೂಲಕ ತಲಾ 55 ಲೀ. ಶುದ್ಧ ನೀರನ್ನು ಒದಗಿಸಲಾಗುತ್ತಿದೆ. ಈ ಯೋಜನೆ ಜಾರಿಗೂ ಮುನ್ನ ಈ ಯೋಜನೆಯಿಂದಾಗುವ ಲಾಭದ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನೊಳಗೊಂಡ ತಂಡ ಇಲ್ಲಿನ ಜನರಿಗೆ ಸಮುದಾಯ ಪಾಲುದಾರಿಕೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಇದಕ್ಕೆ ಇಲ್ಲಿನ ಜನರು ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಜಲ ಜೀವನ್ ಮಿಷನ್ ಯೋಜನೆಯನ್ನು ಮಿತವ್ಯಯದಲ್ಲಿ ಹಾಗೂ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿಷಯ ಪರಿಣತರ ಸಲಹೆ ಪಡೆದು ಅಮಚವಾಡಿ ಗ್ರಾಮದ ಒಂದು ಬೀದಿಯಲ್ಲಿ ಪ್ರಾಯೋಗಿಕವಾಗಿ ಎಲ್ಲಾ ಮನೆಗಳಿಗೂ ಕಾರ್ಯಾತ್ಮಕ ನಳ ಸಂಪರ್ಕ ಅಳವಡಿಸುವ ಮೂಲಕ ತಲಾ 55 ಲೀ. ಶುದ್ಧ ನೀರನ್ನು ಒದಗಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ಇನ್ನುಳಿದ ಎಲ್ಲಾ ಗ್ರಾಮಗಳಲ್ಲಿ ಯೋಜನೆಯನ್ನು ಕ್ರಮೇಣವಾಗಿ ಅನುಷ್ಠಾನಗೊಳಿಸುವುದಾಗಿ” ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ & ನೈ ಇಲಾಖೆ, ಚಾಮರಾಜನಗರ ತಿಳಿಸಿದ್ದಾರೆ.

“ಈ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಪೈಪ್‌ಲೈನ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿತ್ತು. ಸದ್ಯ ಜಲ ಜೀವನ್ ಮಿಷನ್ ಯೋಜನೆಯಿಂದಾಗಿ ಅಮಚವಾಡಿ ಗ್ರಾಮದ ಆದಿ ಜಾಂಬವರ ಬೀದಿಯಲ್ಲಿ ಎಲ್ಲಾ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಬೋರ್‌ವೆಲ್‌ಗಳು ಹಾಗೂ 50ಕ್ಕೂ ಹೆಚ್ಚಿನ ಜಲ ಮೂಲಗಳನ್ನು ಸಂರಕ್ಷಿಸಿಕೊಳ್ಳಲಾಗಿದ್ದು, ಸರಿಯಾದ ಸಮಯಕ್ಕೆ ನಿಗದಿತ ಪ್ರಮಾಣದ ಶುದ್ಧ ನೀರನ್ನು ಪೂರೈಕೆ ಮಾಡಬಹುದಾಗಿದೆ” ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀಣಾ.ಎಸ್ ಅಭಿಪ್ರಾಯಪಟ್ಟಿದ್ದಾರೆ.

“ಈ ಹಿಂದೆ ನಮ್ಮ ಗ್ರಾಮದ ಎಲ್ಲಾ ಹೆಂಗಸರು ಕೊಡಗಳನ್ನು ಹಿಡಿದು ಸಾಲಿನಲ್ಲಿ ನಿಂತು ಬೋರ್‌ವೆಲ್‌ಗಳ ಮೂಲಕ ನೀರನ್ನು ಪಡೆಯುತ್ತಿದ್ದೆವು. ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿದ್ದರಿಂದ ನಮ್ಮ ಸಮಯವೆಲ್ಲಾ ನೀರನ್ನು ಹಿಡಿಯುವುದರಲ್ಲೇ ವ್ಯರ್ಥವಾಗುತ್ತಿತ್ತು. ಇದೀಗ ಮನೆಗಳಿಗೆ ನಲ್ಲಿಗಳನ್ನು ಹಾಕಲಾಗಿದ್ದು, ಅತ್ಯಂತ ಕಡಿಮೆ ಹಣ ಪಾವತಿ ಮಾಡಿ ಮನೆಯ ಬಾಗಿಲಿನಲ್ಲೇ ನಾವು ಶುದ್ಧ ನೀರನ್ನು ಪಡೆಯುತ್ತಿರುವುದು ತುಂಬಾ ಖುಷಿಯಾಗಿದೆ. ಎನ್ನುತ್ತಿದ್ದಾರೆ” ಅಮಚವಾಡಿ ಆದಿ ಜಾಂಬವರ ಬೀದಿಯ ಫಲಾನುಭವಿ ವಿದ್ಯಾಶ್ರೀ.

ಜಲ ಜೀವನ್ ಮಿಷನ್ ಯೋಜನೆಯಡಿ ಈ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿರುವ ಯೋಜನೆಯ ಅನುಷ್ಠಾನ ಕೆಲಸ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಈ ಬೀದಿಯ ನಿವಾಸಿಗಳ ಸಹಕಾರದಿಂದ ಎಲ್ಲಾ ಕಾರ್ಯಾತ್ಮಕ ನಳ ಸಂಪರ್ಕಗಳಿಗೂ ಮೀಟರ್ ಅಳವಡಿಸಲಾಗಿದ್ದು, ನೀರಿನ ಬಳಕೆ ಆಧಾರದ ಮೇಲೆ ಬಳಕೆದಾರರಿಂದ, ಬಳಕೆದಾರರ ಶುಲ್ಕವನ್ನು ಸಂಗ್ರಹ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳ ಮನೆಗಳೂ ನಳ ಸಂಪರ್ಕವನ್ನು ಹೊಂದುವ ಮೂಲಕ ಸರಿಯಾದ ಸಮಯಕ್ಕೆ ನಿಗದಿತ ಪ್ರಮಾಣದ ಶುದ್ಧ ನೀರು ಎಲ್ಲಾ ಮನೆಗಳಿಗೂ ಲಭ್ಯವಾಗುವಂತೆ ನೋಡಿಕೊಳ್ಳುವುದು ಈ ಯೋಜನೆಯ ಮುಖ್ಯ ಧ್ಯೇಯವಾಗಿದೆ.

 7,038 total views,  2 views today

WhatsApp chat