ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಗ್ರಾಮೀಣ ಜನರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು ಹಾಗೂ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಿದೆ.
ಇಲಾಖೆಯು ಶುದ್ಧ ಮತ್ತು ಸುರಕ್ಷಿತ ನೀರನ್ನು ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡುವ ಮೂಲಕ ಗ್ರಾಮೀಣ ಜನರ ಮತ್ತು ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ತಡೆಯುತ್ತಿದೆ.
ಶುದ್ಧ ನೀರಿನ ಸುರಕ್ಷತೆಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಸಲುವಾಗಿ ಕೇಂದ್ರ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಜಲ ಜೀವನ್ ಮಿಷನ್ ಯೋಜನೆಯಡಿ “ಸ್ವಚ್ಛ ಜಲ ಸೆ ಸುರಕ್ಷಾ- ಶುದ್ಧ ನೀರಿನಿಂದ ಸುರಕ್ಷತೆ” ಎಂಬ ಅಭಿಯಾನವನ್ನು ಅಕ್ಟೋಬರ್ 2. 2022 ರಿಂದ 2023 ರ ಜನವರಿ 26ರವರೆಗೆ ಹಮ್ಮಿಕೊಂಡಿತ್ತು.
ಜಲ ಜೀವನ್ ಮಿಷನ್ ಯೋಜನೆಯಡಿ ಸರಬರಾಜು ಮಾಡುತ್ತಿರುವ ಶುದ್ಧ ಮತ್ತು ಸುರಕ್ಷಿತ ನೀರಿನ ಬಗ್ಗೆ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು, ನೀರಿನ ಗುಣಮಟ್ಟದ ಬಗ್ಗೆ ಜಾಗೃತಿ ಮತ್ತು ಅರಿವನ್ನು ಮೂಡಿಸುವುದು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮದಡಿಯಲ್ಲಿ ಬರುವ ಕೆಲವು ಚಟುವಟಿಕೆಗಳನ್ನು ಎಂದರೆ;
• FTKs ಮತ್ತು H2S Vialsಗಳನ್ನು ಉಪಯೋಗಿಸಿ ಗ್ರಾಮಗಳಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಕೈಗೊಳ್ಳುವ ಸಲುವಾಗಿ 5 ಮಹಿಳೆಯರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿಯನ್ನು ನೀಡುವುದು.
• FTKs ಮತ್ತು H2S Vialsಗಳನ್ನು ಉಪಯೋಗಿಸಿ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ ಸಂಸ್ಥೆಗಳಿಗೆ ಮತ್ತು ಪ್ರತಿ ಹಳ್ಳಿಯಲ್ಲಿಯೂ ಕನಿಷ್ಠ ಮೂರು ಮನೆಗಳಿಗೆ ಸರಬರಾಜಾಗುವ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವುದು.
• ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಮೂಲಗಳ ರಾಸಾಯನಿಕ ಮತ್ತು ಬ್ಯಾಕ್ಟಿರಿಯಲಾಜಿಕಲ್ ನಿಯತಾಂಕಗಳ ಗುಣಮಟ್ಟವನ್ನು ಪರೀಕ್ಷಿಸುವುದು.
• ನೀರಿನ ಗುಣಮಟ್ಟದ ಪರೀಕ್ಷಾ ವರದಿಗಳನ್ನು (Both FTKs& H2S Vials & Lab testing) ನಿಗದಿತ ನಮೂನೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡುವುದು.
• ಕಲುಷಿತವೆಂದು ಕಂಡು ಬರುವ ನೀರಿನ ಮೂಲಗಳಿಗೆ ಪರ್ಯಾಯವಾಗಿ ಶುದ್ಧ ಮತ್ತು ಸುರಕ್ಷಿತ ನೀರನ್ನು, ಈ ಅಭಿಯಾನದಲ್ಲಿ ನಿಗದಿಗೊಳಿಸಿರುವ ದಿನಾಂಕದೊಳಗೆ ತಪ್ಪದೇ ಅನುಷ್ಠಾನಗೊಳಿಸುವುದು.
• ಕಲುಷಿತವೆಂದು ಕಂಡುಬಂದಿರುವ ನೀರಿನ ಮೂಲಗಳಿಂದ ಕುಡಿಯಲು ನೀರನ್ನು ಸರಬರಾಜು ಮಾಡದೇ ಅಂತಹ ಮೂಲಗಳ ಹತ್ತಿರ “ಈ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ” ಎಂಬ ನಾಮಫಲಕವನ್ನು ಅಳವಡಿಸಿ, ಇಂತಹ ನೀರಿನ ಮೂಲಗಳ ವಿವರಗಳನ್ನು ಜಲ ಜೀವನ್ ಮಿಷನ್ ನ WQMIS ನಲ್ಲಿ Geo-tagging ಮಾಡುವುದು.
• ನೀರಿನ ಮಾದರಿಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಎಲ್ಲಾ ಕುಡಿಯುವ ನೀರಿನ ಮೂಲಗಳನ್ನು ಜೆಜೆಎಂ ನ WQMISನಲ್ಲಿ Geo-tagging ಮಾಡುವುದು.
• FTKs ಮತ್ತು H2S Vials ಮತ್ತು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಎಲ್ಲಾ ನೀರಿನ ಮೂಲಗಳ ಪರೀಕ್ಷಾ ವರದಿಗಳನ್ನು WQMISನಲ್ಲಿ ಕಡ್ಡಾಯವಾಗಿ ದಾಖಲಿಸುವ ಹಾಗೂ ಇನ್ನಿತರೆ ಕೆಲಸವನ್ನು ಮಾಡಲಾಯಿತು.
ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಬಗ್ಗೆ ವಿವಿಧ ಸ್ಥಳಗಳಲ್ಲಿ ಏರ್ಪಡಿಸಲಾದ FTK ತರಬೇತಿ ಕಾರ್ಯಕ್ರಮಗಳು
ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ/ವಿಭಾಗದ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಪ್ರಯೋಗಾಲಯ ಸಿಬ್ಬಂದಿಗಳು, ISA/ISRA ಮತ್ತು ಇತರೆ ಸಿಬ್ಬಂದಿಗಳಿಗೆ “ಶುದ್ಧ ನೀರಿನಿಂದ ಸುರಕ್ಷತೆ” ಅಭಿಯಾನವನ್ನು ಯಶಸ್ವಿಗೊಳಿಸಲು ಅಗತ್ಯವಿರುವ ಎಲ್ಲಾ ಮಾಹಿತಿ, ತರಬೇತಿಗಳು ಮತ್ತು ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ಅಗತ್ಯವಿರುವ FTKs & H2S Vials ಗಳನ್ನು ಒದಗಿಸುವಂತೆ ತಿಳಿಸಿ, ಪರಿಣಾಮಕಾರಿಯಾಗಿ ಅಭಿಯಾನದಡಿಯಲ್ಲಿ ಬರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ತಿಳಿಸಲಾಯಿತು
ರಾಜ್ಯಾದ್ಯಂತ ಇರುವ ಎಲ್ಲಾ ಗ್ರಾಮ/ಗ್ರಾಮ ಪಂಚಾಯತಿಗಳಲ್ಲಿ ಪ್ರಾಥಮಿಕ ಹಂತದಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಬಗ್ಗೆ ತರಬೇತಿಗಳನ್ನು ಹಮ್ಮಿಕೊಂಡಿರುವುದಲ್ಲದೆ, ಗ್ರಾಮೀಣ ಜನರಲ್ಲಿ ನೀರಿನ ಮತ್ತು ನೀರಿನ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೀದಿನಾಟಕ, ಕಲಾ ಜಾಥಾ, ಗೋಡೆಬರಹ, ವಸ್ತು ಪ್ರದರ್ಶನಗಳಲ್ಲಿ ಮತ್ತು FTKs & H2S Vials ಗಳನ್ನು ಉಪಯೋಗಿಸಿ ಪ್ರಾಥಮಿಕ ಹಂತದಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ತರಬೇತಿಗಳನ್ನು ಆಯಾ ಗ್ರಾಮದಲ್ಲಿನ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರಿಗೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಲಭ್ಯವಿರುವ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನೀರಿನ ಗುಣಮಟ್ಟದ ಬಗ್ಗೆ ಹಾಗೂ ಕಲುಷಿತ ನೀರಿನಿಂದ ಮಾನವನ ಅರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪ್ರಯೋಗಾಲಯದ ಸಿಬ್ಬಂದಿ, ನೀರಿನ ಮಾದರಿ ಸಂಗ್ರಾಹಕರು ಮತ್ತು ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆಯ ಸಿಬ್ಬಂದಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳ ಮೂಲಕ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿರುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಕುರಿತು ಜಾಗೃತಿ ಮೂಡಿಸುವ ಗೋಡೆ ಬರಹಗಳು
ಇದಲ್ಲದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮತ್ತು 46 ತಾಲ್ಲೂಕು ಮಟ್ಟದ ಪ್ರಯೋಗಾಲಯಗಳಲ್ಲಿ ಆಯಾ ಪ್ರಯೋಗಾಲಯದ ವ್ಯಾಪ್ತಿಗೆ ಬರುವ ನೀರಿನ ಮೂಲಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲಾಗಿರುವುದಲ್ಲದೇ ಎಲ್ಲಾ ಗ್ರಾಮ/ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಗುಣಮಟ್ಟದ ವರದಿಗಳನ್ನು ಪ್ರದರ್ಶಿಸಲಾಗಿದೆ. ಈ ಎಲ್ಲಾ ಪರೀಕ್ಷಾ ವರದಿಗಳನ್ನು ಭಾರತ ಸರ್ಕಾರದ WQMIS Portalನಲ್ಲಿ ಕೂಡಾ ಅಪ್ಲೋಡ್ ಮಾಡಲಾಗಿದೆ.
ಗ್ರಾಮಗಳಿಗೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಶುದ್ಧವಿರುವುದನ್ನು ಖಚಿತ ಪಡಿಸಿಕೊಳ್ಳಲು, ರಾಜ್ಯದ ಎಲ್ಲಾ ನಳನೀರು ಸಂಪರ್ಕವನ್ನು ಕಲ್ಪಿಸುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ನೀರಿನ ಗುಣಮಟ್ಟ ಸರಿಯಿರುವ ಬಗ್ಗೆ ಪರೀಕ್ಷೆಗಳನ್ನು ಕೈಗೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿರುತ್ತದೆ.
ಇದಲ್ಲದೇ ರಾಜ್ಯದ ಎಲ್ಲಾ 31 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿರುವ ನೀರಿನ ಮೂಲಗಳನ್ನು ಇಲಾಖೆಯಿಂದಲೇ ಸೃಜಿಸಿರುವ Kobo Applicationನಲ್ಲಿ ಆ ನೀರಿನ ಮೂಲಗಳ ಎಲ್ಲಾ ವಿವರಗಳನ್ನು ಅಂದರೆ ಅಕ್ಷಾಂಶ, ರೇಖಾಂಶ ವಿವರ ಮತ್ತು ಇನ್ನಿತರೆ ವಿವರಗಳನ್ನು ದಾಖಲಿಸಲಾಗಿರುತ್ತದೆ ಹಾಗೂ ರಾಜ್ಯದ 98% ನಷ್ಟು VWSC ಸಮಿತಿಯ ಐದು ಜನ ಆಸಕ್ತ ಮಹಿಳೆಯರಿಗೆ FTKs ಮತ್ತು H2S Vials ಗಳನ್ನು ಉಪಯೋಗಿಸಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ತರಬೇತಿಯನ್ನು ನೀಡಲಾಗಿರುತ್ತದೆ.
ರಾಜ್ಯದಲ್ಲಿರುವ ಒಟ್ಟು 46,237 ಶಾಲೆಗಳಲ್ಲಿ, 41,382 ಶಾಲೆಗಳಿಗೆ ಸರಬರಾಜಾಗುವ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲಾಗಿದ್ದು, ಶೇ.89.50 ಗುರಿಯನ್ನು ಹಾಗೂ 53,518 ಅಂಗನವಾಡಿ ಕೇಂದ್ರಗಳಲ್ಲಿ 47,685 ಅಂಗನವಾಡಿಗಳಿಗೆ ಸರಬರಾಜಾಗುವ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಅಂದರೆ ಶೇ.89.66 ರಷ್ಟು ಪ್ರಗತಿಯನ್ನು ಕೈಗೊಳ್ಳಲಾಗಿರುತ್ತದೆ. ರಾಜ್ಯದ 28,320 ಗ್ರಾಮಗಳ ಪೈಕಿ 19,258 ಗ್ರಾಮಗಳಿಗೆ ಸರಬರಾಜಾಗುವ ಕುಡಿಯುವ ನೀರಿನ ಗುಣಮಟ್ಟವನ್ನು ಅಂದರೆ (ಪ್ರತಿ ಹಳ್ಳಿಯಲ್ಲೂ ಕನಿಷ್ಠ ಮೂರು ಮನೆಗಳಿಗೆ ಸರಬರಾಜಾಗುವ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು) ಶೇ 68% ರಷ್ಟು ಪ್ರಗತಿಯನ್ನು ಸಾಧಿಸಲಾಗಿದ್ದು, ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಕೊಳವೆಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವ (PWS) ಮಾದರಿಗಳ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಕಾರ್ಯಕ್ರಮವು ಪ್ರಗತಿಯಲ್ಲಿದ್ದು, ಭಾರತ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರಾರಂಭಿಸಿರುವ “ಸ್ವಚ್ಛ ಜಲ ಸೆ ಸುರಕ್ಷಾ” (ಶುದ್ಧ ನೀರಿನಿಂದ ಸುರಕ್ಷತೆ) ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕಾರ್ಯನಿರತವಾಗಿದೆ.
ಶುದ್ಧ ನೀರು ಆರೋಗ್ಯಕರ ಜೀವನದ ಮೂಲಮಂತ್ರ. ಶುದ್ಧ ನೀರು ಕುಡಿದು ಸ್ವಸ್ಥ ಜೀವನ ನಡೆಸೋಣ.
2,305 total views, 1 views today