Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಭಾರತದಲ್ಲಿ ದ್ರವ ತ್ಯಾಜ್ಯ ನಿರ್ವಹಣೆ ಅನ್ನೋದು ಬಹುದೊಡ್ಡ ಸವಾಲು. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿದಿನ ಸರಾಸರಿ 61,754 ಮಿಲಿಯನ್ ಲೀಟರ್ ದ್ರವ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅಡಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇಂದು ದ್ರವ ತ್ಯಾಜ್ಯ ನೀರನ್ನು ಸರಿಯಾಗಿ ನಿರ್ವಹಣೆ ಮಾಡದೇ ಜನ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕ ಸಾಂಕ್ರಾಮಿಕ ರೋಗಗಳ ಉಗಮ ಸ್ಥಾನವಾಗಿದೆ ದ್ರವ ತ್ಯಾಜ್ಯ. ಆದರೆ ಸಮರ್ಪಕವಾಗಿ ದ್ರವ ತ್ಯಾಜ್ಯವನ್ನು ನಿರ್ವಹಣೆ ಮಾಡಿದರೆ ಎಲ್ಲಾ ರೀತಿಯ ನೈರ್ಮಲ್ಯ ಸಮಸ್ಯೆಗಳಿಂದ  ಹೇಗೆ ಹೊರಗೆ ಬರಬಹುದು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಗುರುರಾಜ ಶಾಂತಪ್ಪ ಅಕ್ಕೊಡಿ.

ಗುರುರಾಜ ಶಾಂತಪ್ಪ ಅಕ್ಕೊಡಿ ಅವರ ಮನೆಯಿಂದ ಹೊರ ಹೋಗುತ್ತಿದ್ದ ಪಾತ್ರೆ ತೊಳೆದ ನೀರು, ಬಟ್ಟೆ ತೊಳೆದ ನೀರು, ಬಾತ್ ರೂಂ ನಿಂದ ಹೋಗುವ ನೀರು ಮನೆ ಮುಂದೆ ಹೋಗಿ ಚರಂಡಿ ಸೇರಿ ಸೊಳ್ಳೆ ಕಾಟ ಶುರುವಾಗಿತ್ತು. ಈ ನೀರನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದು ಅವರಿಗೆ ದೊಡ್ಡ ತಲೆನೋವಾಗಿತ್ತು. ಕೊನೆಗೆ ಆಶಾ ಕಾರ್ಯಕರ್ತೆಯೊಬ್ಬರು ನೀಡಿದ ಸಲಹೆಯಂತೆ ಅವರು ಗ್ರಾಮದ ಪಿಡಿಓ ಅವರನ್ನು ಭೇಟಿಯಾಗುತ್ತಾರೆ. ಈ ವೇಳೆ ದ್ರವ ತ್ಯಾಜ್ಯ ನಿರ್ವಹಣೆಯ ಬಗ್ಗೆ ಪಿಡಿಓ ತಿಳಿಸಿ ಕೊಡುತ್ತಾರೆ.

ಇದೇ ವೇಳೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ https://english.swachhamevajayate.org/wp-content/uploads/2021/01/December_LWM_Kannada.pdf ವೆಬ್ ಸೈಟ್ ಗೆ ಭೇಟಿ ನೀಡುವಂತೆ ಪಿಡಿಓ ತಿಳಿಸಿದರು. ಅಲ್ಲದೇ ಈ ಬಗ್ಗೆ ವಿಡಿಯೋಗಳನ್ನು ನೋಡಬೇಕು ಎಂದರೆ https://youtu.be/-GbNl98jEMA?list=PLn-oMHMztYUclSc9BcC4KohOyESX723v_ ಲಿಂಕ್ ಕ್ಲಿಕ್ ಮಾಡುವಂತೆ ತಿಳಿಸಿಕೊಟ್ಟರು.

ಬೂದು ನೀರು ಎಂದರೆ ನಾವು ಪ್ರತಿದಿನ ಪಾತ್ರೆ ತೊಳೆಯುವಾಗ, ಬಟ್ಟೆ ತೊಳೆಯುವಾಗ, ಇತರೆ ವಸ್ತುಗಳನ್ನು ತೊಳೆಯುವಾಗ ಹಾಗೇ ಸ್ನಾನ ಮಾಡುವಾಗ ಕಲುಷಿತವಾಗಿ ಹೊರ ಹೋಗುವ ನೀರು. ಇನ್ನು ಕಪ್ಪು ನೀರು ಎಂದರೆ ಶೌಚಾಲಯದಿಂದ ಹೊರಬರುವ ಮಲ ಹೊಂದಿರುವಂತಹ ಕಲುಷಿತವಾದ ನೀರು. ಹೀಗೆ ಪಿಡಿಓ ಗುರುರಾಜ ಶಾಂತಪ್ಪ ಅಕ್ಕೊಡಿ ಅವರಿಗೆ ದ್ರವ ತ್ಯಾಜ್ಯದ ಬಗ್ಗೆ ವಿವರಿಸಿದ್ರು. ಅಲ್ಲದೇ ಇಂಗು ಗುಂಡಿ ಬಗ್ಗೆ ತಿಳಿಸಿಕೊಡುತ್ತಾರೆ. ಅದರಂತೆ ಗುರುರಾಜ ಅವರು ಮನೆಗೆ ಬಂದು ಪಿಡಿಓ ಮಾರ್ಗದರ್ಶನದಂತೆ ಇಂಗು ಗುಂಡಿ ನಿರ್ಮಿಸಿ ಇದೀಗ ಅದಕ್ಕೆ ಬೂದು ನೀರನ್ನು ಹರಿಸುತ್ತಿದ್ದಾರೆ. ಅಲ್ಲದೇ ಅದರಿಂದ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಸದ್ಯ ಅವರ ಮನೆ ಸುತ್ತಮುತ್ತ ಕೊಳಚೆ ನೀರು ನಿಲ್ಲುತ್ತಿಲ್ಲ, ಸೊಳ್ಳೆ ಕಾಟವಿಲ್ಲ. ಜೊತೆ ರೋಗ ಭಯ ಕೂಡ ಇಲ್ಲ. ಇದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇದೀಗ ಗ್ರಾಮದ ಅನೇಕರು ಗುರುರಾಜ ಶಾಂತಪ್ಪ ಅಕ್ಕೊಡಿ ಅವರನ್ನು ಮಾದರಿಯಾಗಿಸಿಕೊಂಡು ತಮ್ಮ ಮನೆ ಬಳಿ ಇಂಗು ಗುಂಡಿ ನಿರ್ಮಿಸಿಕೊಂಡು ದ್ರವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ.

ಹೀಗೆ ಬೇರೆ ಬೇರೆ ವಿಧಾನಗಳ ಮೂಲಕ ದ್ರವ ತ್ಯಾಜ್ಯವನ್ನು ನಿರ್ವಹಣೆ ಮಾಡಬಹುದು. ಸರ್ಕಾರ ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮೂಲಕ ಜನರಿಗೆ ಎಲ್ಲಾ ಸಹಕಾರ ನೀಡುತ್ತಿದೆ. ನೀವು ಕೂಡ ನಿಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಗಮನ ಹರಿಸಿ ಗ್ರಾಮ ಪಂಚಾಯಿತಿಯ ಸಿಬ್ಬಂದಿಯ ಮಾರ್ಗದರ್ಶನ ಪಡೆದು ದ್ರವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿ, ನೈರ್ಮಲ್ಯಯುತ ಪರಿಸರ ನಿರ್ಮಿಸಿ.

ಸಮರ್ಪಕವಾಗಿ ದ್ರವ ತ್ಯಾಜ್ಯ ನಿರ್ವಹಿಸೋಣ, ಸ್ವಚ್ಛ ಪರಿಸರ ನಿರ್ಮಿಸೋಣ...

 6,352 total views,  6 views today

WhatsApp chat