Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ರಾಮಾಪುರ ಗ್ರಾಮ ಪಂಚಾಯಿತಿಯು ಹೋಬಳಿ ಕೇಂದ್ರವಾಗಿದೆ. ನಿತ್ಯ ನೂರಾರು ಜನರು ಇಲ್ಲಿಗೆ ವ್ಯವಹಾರಕ್ಕಾಗಿ ಬರುತ್ತಾರೆ. ಪಕ್ಕದ ತಮಿಳುನಾಡು ರಾಜ್ಯದ ಗಡಿ ಭಾಗಗಳಿಂದಲೂ ಜನರು ವ್ಯಾಪಾರಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ರಾಮಾಪುರ ಗ್ರಾಮವು ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು, ವಾಣಿಜ್ಯ ಮಳಿಗೆಗಳನ್ನು ಹೊಂದಿದ್ದು ಅಧಿಕ ಜನಸಂಪರ್ಕ ಹೊಂದಿದೆ.

ರಾಮಾಪುರ ಗ್ರಾಮ ಪಂಚಾಯಿತಿಯಲ್ಲಿ 2,870 ಕುಟುಂಬಗಳಿದ್ದು 14,611 ಜನರು ಇಲ್ಲಿ ವಾಸವಾಗಿದ್ದಾರೆ. ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಎಲ್ಲಾ ಕುಟುಂಬಗಳು ಶೌಚಾಲಯ ವ್ಯವಸ್ಥೆ ಹೊಂದಿವೆ. ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿ ಕುಟುಂಬಕ್ಕೆ ಹಸಿರು ಮತ್ತು ನೀಲಿ ಬಣ್ಣದ ಎರಡು ಬುಟ್ಟಿಗಳನ್ನು ಹಂಚಲಾಗಿದೆ. ಪ್ರತಿ ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ ಹಾಗೂ ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆ.

ಇಷ್ಟೆಲ್ಲದರ ನಡುವೆ ಸಮುದಾಯ ಶೌಚಾಲಯದ ಕೊರತೆ ಎದ್ದು ಕಾಣುತ್ತಿತ್ತು. ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ರಾಮಾಪುರಕ್ಕೆ ಬರುವ ಸಾರ್ವಜನಿಕರು ಸಮುದಾಯ ಶೌಚಾಲಯ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿದ್ದರು. ಇಲ್ಲಿಗೆ ಭೇಟಿ ನೀಡುವ ಮಹಿಳೆಯರು ಮುಜುಗರ ಹಾಗೂ ಕಷ್ಟಗಳನ್ನು ಅನುಭವಿಸುತ್ತಿದ್ದರು.

ಈ ಸಮಸ್ಯೆಯನ್ನು ಮನಗಂಡ ನಿಕಟಪೂರ್ವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ರಾಮಪುರ ಗ್ರಾಮ ಪಂಚಾಯತಿಗೆ ಸಮುದಾಯ ಶೌಚಾಲಯ ನಿರ್ಮಿಸಲು ಸೂಚನೆ ನೀಡಿದ್ದರು. ಅದರೆ ಇಲ್ಲಿ ಗ್ರಾಮ ಪಂಚಾಯಿತಿ/ಸರ್ಕಾರಕ್ಕೆ ಸೇರಿದ ಯಾವುದೇ ಖಾಲಿ ಸ್ಥಳವಿರದಿದ್ದರಿಂದ ಹಾಗೂ ಈ ಪ್ರದೇಶವು ಬಹು ಬೇಡಿಕೆ ಹೊಂದಿರುವ ಕೇಂದ್ರ ಸ್ಥಾನವಾದ್ದರಿಂದ ಜಾಗವನ್ನು ನೀಡಲು ದಾನಿಗಳು ಮುಂದೆ ಬರಲಿಲ್ಲ. ಈ ಕಾರಣಗಳಿಂದ ಗ್ರಾಮ ಪಂಚಾಯಿತಿಗೆ ಸಮುದಾಯ ಶೌಚಾಲಯ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂಬ ಮನೋಭಾವವಿದ್ದರು ಅನುಷ್ಠಾನ ಕಷ್ಟ ಸಾಧ್ಯವಾಗಿತ್ತು.

ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಮುದಾಯ ಶೌಚಾಲಯ ನಿರ್ಮಿಸಲು ಸ್ಥಳಾವಕಾಶ ಲಭ್ಯತೆ ಇಲ್ಲದೆ ಶೌಚಾಲಯ ಎಲ್ಲಿ ನಿರ್ಮಿಸಬೇಕು ಎಂಬ ಹುಡುಕಾಟದಲ್ಲಿದ್ದಾಗ ಹೊಳೆದ ಸ್ಥಳ ಆಶ್ಚರ್ಯಪಡುವಂತದ್ದು. ರಾಮಾಪುರ ಗ್ರಾಮದ ನಡುವೆ ಸುಮಾರು 25 ಅಗಲ 15 ಅಡಿ ಅಳವಿರುವ ಒಂದು ಚರಂಡಿ ಇದೆ. ಗ್ರಾಮದ ಬೂದು ನೀರು ಮತ್ತು ಮಳೆ ನೀರು ಇಲ್ಲಿ ಹರಿದು ಹೋಗುತ್ತದೆ.

ಈ ಸ್ಥಳವು ಬಸ್ ನಿಲ್ದಾಣದ ಸಮೀಪದಲ್ಲೇ ಇದೆ. ಹಾಗಾಗಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುವ ಕೇಂದ್ರ ಸ್ಥಾನವೆಂದು ತೀರ್ಮಾನಿಸಿ ಚರಂಡಿಯ ಸುತ್ತ ಪಿಲ್ಲರ್ ಗಳನ್ನು ನಿರ್ಮಿಸಿ ಕಟ್ಟಡ ನಿರ್ಮಾಣ ಮಾಡುವ ಚಿಂತನೆಯೊಂದಿಗೆ ಸಮುದಾಯ ಶೌಚಾಲಯದ ಕಾಮಗಾರಿ ಪ್ರಾರಂಭಗೊಂಡಿತು.

ಸಮುದಾಯ ಶೌಚಾಲಯ ನಿರ್ಮಾಣಕ್ಕಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ವತಿಯಿಂದ ರೂ.1.80 ಲಕ್ಷ ಅನುದಾನ ಹಾಗೂ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯಡಿ ಐದು ಲಕ್ಷಗಳ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಪಿಲ್ಲರ್ ಗಳ ಮೇಲೆ ನಿರ್ಮಾಣಗೊಂಡಿರುವ ಸಮುದಾಯ ಶೌಚಾಲಯದ ತ್ಯಾಜ್ಯವು ಮಳೆ ನೀರು ಮತ್ತು ನಿತ್ಯ ಹರಿಯುವ ಬೂದು ನೀರಿಗೆ ಸಂಪರ್ಕ ಹೊಂದದ ಹಾಗೆ ಶೌಚಾಲಯದ ಪಿಟ್ ಗಳನ್ನು ನಿರ್ಮಿಸಲಾಗಿದೆ.

ಪ್ರತಿ ಮನೆಯಿಂದ ಹೊರಬರುವ ಬೂದು ನೀರನ್ನು ಚರಂಡಿ ಮೂಲಕ ಊರಿಂದ ಹೊರಗೆ ಬಿಡುವುದು ಎಲ್ಲಾ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಕೊಪ್ಪಳ ಜಿಲ್ಲೆಯಲ್ಲಿ ಬೂದು ನೀರು ನಿರ್ವಹಣೆಯನ್ನುಅನುಷ್ಠಾನ ಮಾಡಲಾಗುತ್ತಿದ್ದು, ಪ್ರತಿಯೊಂದು ಗ್ರಾಮದಲ್ಲೂ ಕೂಡ ಬೂದು ನೀರಿನ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಅದರಲ್ಲಿ ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಚಿಕ್ಕತಾಂಡದಗ್ರಾಮದಲ್ಲಿ ಬೂದು ನೀರಿನ ಸಂಸ್ಕರಣೆಗ್ರಾಮದ ನೈರ್ಮಲ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ. ಇದು ಜಿಲ್ಲೆಯಲ್ಲಿ ಮಾದರಿಯಾಗಿದ್ದು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಹರ್ಷ ವ್ಯಕ್ತಪಡಿಸುತ್ತಾರೆ.

ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕರು ಈ ಸಮುದಾಯ ಶೌಚಾಲಯವನ್ನು ಉದ್ಘಾಟನೆ ಮಾಡಿದ್ದರು. ಈ ಸಮುದಾಯ ಶೌಚಾಲಯ ಕಳೆದ ಎರಡು ವರ್ಷಗಳಿಂದ ಯಾವುದೇ ತೊಂದರೆಗಳಿಲ್ಲದೆ ಚೆನ್ನಾಗಿ ನಿರ್ವಹಣೆ ಆಗುತ್ತಿದ್ದು ಜಿಲ್ಲೆಯಲ್ಲಿಯೇ ಮಾದರಿ ಸಮುದಾಯ ಶೌಚಾಲಯ ಎನಿಸಿದೆ. ಸಮುದಾಯ ಶೌಚಾಲಯದ ಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಇದ್ದು ಹೀಗೆಯೇ ನಿರಂತರವಾಗಿ ಉತ್ತಮ ನಿರ್ವಹಣೆಯಾಗಲಿ ಎಂದು ಬಯಸುತ್ತಿದ್ದಾರೆ.

ಪ್ರತಿಯೊಬ್ಬರೂ ಪ್ರತಿಬಾರಿ ಶೌಚಾಲಯ ಬಳಸೋಣ. ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡೋಣ. ಆರೋಗ್ಯಕರ ಜೀವನ ನಡೆಸೋಣ.

 2,287 total views,  1 views today

WhatsApp chat