Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

https://swachhamevajayate.org/wp-content/uploads/2023/02/WhatsApp-Image-2023-01-05-at-11.49.51-AM-600x600.jpeg
https://swachhamevajayate.org/wp-content/uploads/2023/02/WhatsApp-Image-2023-01-04-at-12.12.16-PM-600x600.jpeg

‘ಆರೋಗ್ಯವೇ ಭಾಗ್ಯ’ ಎಂಬ ಮಾತು ನಮ್ಮಲ್ಲಿದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಹಾಗೂ ಸ್ವಚ್ಛವಾದ ಪರಿಸರ ಅಗತ್ಯವಾಗಿದೆ. ನಮ್ಮ ಆರೋಗ್ಯದ ದೃಷ್ಠಿಯಿಂದ ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ನಮ್ಮ ಓಣಿ, ಶಾಲೆ, ಅಂಗನವಾಡಿ, ಕಛೇರಿ, ಗ್ರಾಮ ಮೊದಲಾದವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಬಯಲು ಬಹಿರ್ದೆಸೆಯನಿರ್ಮೂಲನೆ,

ಶೌಚಾಲಯನಿರ್ಮಾಣಮತ್ತುಬಳಕೆ,ತ್ಯಾಜ್ಯಗಳವೈಜ್ಞಾನಿಕವಿಂಗಡಣೆಮತ್ತುವಿಲೇವಾರಿ, ಮಲ ಹೊರುವ ಅನಿಷ್ಟಪದ್ಧತಿಯ ನಿರ್ಮೂಲನೆ, ಜನಜಾಗೃತಿ, ಹಸಿರುಪರಿಸರನಿರ್ಮಾಣಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)ಯೋಜನೆಯ ಉದ್ದೇಶವಾಗಿದೆ.

ಈನಿಟ್ಟಿನಲ್ಲಿನಮ್ಮಗ್ರಾಮದಸ್ವಚ್ಛತೆನಮ್ಮೆಲ್ಲರಹೊಣೆಎಂದುಅರಿವು ಮೂಡಿಸಲುಮತ್ತುಗ್ರಾಮದಜನರುಸ್ವಯಂಪ್ರೇರಿತರಾಗಿಸ್ವಚ್ಛತೆಯಕಾರ್ಯಕ್ರಮಗಳಲ್ಲಿಪಾಲ್ಗೊಳ್ಳುವಂತೆಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆವತಿಯಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ “ನಮ್ಮ ಗ್ರಾಮ ಸ್ವಚ್ಛ ಗ್ರಾಮ”, “ಗ್ರಾಮದ ನಡೆ ಸ್ವಚ್ಛತೆ ಕಡೆ” ಎಂಬ ಶೀರ್ಷಿಕೆಯಡಿ ಪ್ರತಿ ಮಾಹೆಯ ಮೊದಲ ಶನಿವಾರದಂದು ಸಮಗ್ರ ಸ್ವಚ್ಛತೆಗಾಗಿಶ್ರಮದಾನ ಚಟುವಟಿಕೆಗಳನ್ನು ಕೈಗೊಳ್ಳಲುತಿಳಿಸಿತ್ತು.

https://swachhamevajayate.org/wp-content/uploads/2023/02/WhatsApp-Image-2023-01-04-at-12.12.26-PM-1-600x600.jpeg
https://swachhamevajayate.org/wp-content/uploads/2023/02/WhatsApp-Image-2023-01-04-at-12.12.38-PM-600x600.jpeg

ಅದರಂತೆಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿಮಾಹೆಯಮೊದಲಶನಿವಾರವನ್ನು ಸ್ವಚ್ಛ ಶನಿವಾರವನ್ನಾಗಿ ಆಚರಿಸುವ ಮೂಲಕ ಗ್ರಾಮೀಣ ಸಮುದಾಯದಲ್ಲಿ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಲು ಕಾರ್ಯಕ್ರಮಗಳನ್ನುರೂಪಿಸಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆ, ಅಂಗನವಾಡಿ, ಅಂಗಡಿ ಮುಂಗಟ್ಟುಗಳು, ಪುರಾತನ ಕಲ್ಯಾಣಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದಕ್ಕಾಗಿ ಜನ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಸ್ವಸಹಾಯ ಗುಂಪಿನ ಮಹಿಳೆಯರು ಹಾಗೂ ಆ ಗ್ರಾಮದ ಮುಖಂಡರೊಂದಿಗೆ ಶ್ರಮದಾನ ಚಟುವಟಿಕೆ ನಡೆಸುವುದು,ಸಾರ್ವಜನಿಕ ಸ್ಥಳಗಳಲ್ಲಿಎಲ್ಲೆಂದೆರಲ್ಲಿ ತ್ಯಾಜ್ಯ ಎಸೆಯದಿರುವಂತೆ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆಮಾಡಲುಜಾಗೃತಿ ಮೂಡಿಸಲಾಗುತ್ತಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಕಿತ್ತನಹಳ್ಳಿ ಗ್ರಾಮ ಪಂಚಾಯಿತಿಯ ಕಿತ್ತನಹಳ್ಳಿ ಗ್ರಾಮದಲ್ಲಿ ೧೦೦ ವರ್ಷಗಳಷ್ಟು ಹಳೆಯದಾದ ಕಲ್ಯಾಣಿಯು ನಗರೀಕರಣಮುಂತಾದಕಾರಣಗಳಿಂದ ಮುಚ್ಚಿ ಹೋಗಿತ್ತು. “ನಮ್ಮ ಗ್ರಾಮ ಸ್ವಚ್ಛ ಗ್ರಾಮ-ಗ್ರಾಮದ ನಡೆ ಸ್ವಚ್ಛತೆ ಕಡೆ” ಶ್ರಮದಾನದಮೂಲಕಕಲ್ಯಾಣಿಯನ್ನುಪುನರುಜ್ಜೀವನಗೊಳಿಸಲುಕಾರ್ಯನಿರ್ವಾಹಕ ಅಧಿಕಾರಿಗಳುನೇತೃತ್ವ ವಹಿಸಿದರು. ಬೆಂಗಳೂರು ಉತ್ತರ ತಾಲ್ಲೂಕಿನ ೧೧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತುಸಿಬ್ಬಂದಿ ವರ್ಗದವರು.ಗ್ರಾಮ ಪಂಚಾಯಿತಿಗಳಚುನಾಯಿತಪ್ರತಿನಿಧಿಗಳುಶ್ರಮದಾನಮಾಡುವ ಮೂಲಕ ಪುನರುಜ್ಜೀವನಗೊಳಿಸಿದರು.

https://swachhamevajayate.org/wp-content/uploads/2023/02/WhatsApp-Image-2023-01-04-at-12.12.34-PM-600x600.jpeg
https://swachhamevajayate.org/wp-content/uploads/2023/02/WhatsApp-Image-2023-01-04-at-12.12.42-PM-600x600.jpeg

ಸ್ವಚ್ಛತೆಗಾಗಿಶ್ರಮದಾನಕಾರ್ಯಕ್ರಮದಡಿಯಲ್ಲಿಕಿತ್ತನಹಳ್ಳಿಗ್ರಾಮಪಂಚಾಯಿತಿಯ ಮುಚ್ಚಿಹೋಗಿದ್ದಪುರಾತನಕಲ್ಯಾಣಿಯನ್ನು ಸ್ವಚ್ಛಗೊಳಿಸಿಪುನರುಜ್ಜೀವನಗೊಳಿಸಲಾಯಿತು. ಇದೇರೀತಿಎಲ್ಲಾಗ್ರಾಮಪಂಚಾಯಿತಿಗಳಲ್ಲೂಸಹಇಂತಹಚಟುವಟಿಕೆಗಳುನಡೆಯಬೇಕಿದೆಎಂದುಬೆಂಗಳೂರು ಉತ್ತರ ತಾಲ್ಲೂಕಿನ ಕಾರ್ಯನಿರ್ವಾಹಕಅಧಿಕಾರಿಅಭಿಪ್ರಾಯಪಟ್ಟರು.

ನಮ್ಮಗ್ರಾಮಪಂಚಾಯಿತಿಯಲ್ಲಿಪುರಾತನವಾದಕಲ್ಯಾಣಿಇದೆಯೆಂಬುದೆಬಹುತೇಕರಿಗೆಗೊತ್ತಿರಲಿಲ್ಲ. ಕಲ್ಯಾಣಿ, ಕೆರೆಮುಂತಾದ ಜಲಮೂಲಗಳ ಕುರಿತುಜಾಗೃತಿಮೂಡಿಸಲಾಗಿದೆ. ಜಲಮೂಲಗಳಸ್ವಚ್ಛತೆಹಾಗೂಸಂರಕ್ಷಣೆಅಗತ್ಯ. ನಮ್ಮಗ್ರಾಮಪಂಚಾಯಿತಿಯಲ್ಲಿ ಪುರಾತನಕಲ್ಯಾಣಿಪುನರುಜ್ಜೀವನಗೊಳಿಸಿರುವುದುಎಲ್ಲರಿಗೂಸಂತಸತಂದಿದೆಎಂದುಕಿತ್ತನಹಳ್ಳಿಗ್ರಾಮಪಂಚಾಯಿತಿಅಧ್ಯಕ್ಷರುಅಭಿಪ್ರಾಯ ವ್ಯಕ್ತಪಡಿಸಿದರು.

ಸದೃಢವಾದ ಶರೀರದಲ್ಲಿ ಸದೃಢವಾದಮನಸ್ಸು ಇರುತ್ತದೆ ಎಂಬ ಮಾತಿದೆ.ನಮ್ಮ ದೈಹಿಕಹಾಗೂಮಾನಸಿಕಆರೋಗ್ಯದ ದೃಷ್ಠಿಯಿಂದ ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಮುಖವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯ ಚಟುವಟಿಕೆಗಳಲ್ಲಿತೊಡಗಬೇಕು. ಇದು ನಮ್ಮ ಮನೆಯ ಪರಿಸರದಿಂದಲೇ ಪ್ರಾರಂಭವಾದಾಗಲೇ ಸ್ವಚ್ಛ ಗ್ರಾಮಕ್ಕೆ ಸಂಪೂರ್ಣ ಯಶಸ್ಸು ದೊರೆಯುತ್ತದೆ.

 2,293 total views,  1 views today

WhatsApp chat