Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ನಾವೆಲ್ಲಾ ಮದುವೆಯಲ್ಲಿ ಹುಡುಗನಿಗೆ ಕಾರು, ಬೈಕು, ಚಿನ್ನ, ಆಸ್ತಿ, ಮನೆ ಹೀಗೆ ಬೇರೆ ಬೇರೆ ರೀತಿಯ ಉಡುಗೊರೆಗಳನ್ನು ಕೊಡುವುದನ್ನು ನೋಡಿದ್ದೇವೆ. ಆದರೆ ಮದುವೆಯಾಗಿ ಮನೆಗೆ ಬಂದ ಅಳಿಯನಿಗೆ ಶೌಚಾಲಯವೊಂದನ್ನು ಉಡುಗೊರೆಯಾಗಿ ಕೊಡುವುದನ್ನು ಎಲ್ಲಾದರೂ ನೋಡಿದ್ದೀರಾ? ಕೇಳೋದಕ್ಕೆ ವಿಚಿತ್ರ ಅನ್ನಿಸಿದರೂ ಇಂತಹದ್ದೊಂದು ಘಟನೆ ನಡೆದಿರುವುದು ಮಾತ್ರ ಸತ್ಯ.

ಭಾರತವು ಹಳ್ಳಿಗಳದೇಶ. ಗ್ರಾಮಗಳಅಭಿವೃದ್ಧಿಯೆದೇಶದಅಭಿವೃದ್ಧಿ. ಆದರೆ ಗ್ರಾಮಗಳಲ್ಲಿ ಇಂದು ಎಲ್ಲೆಂದರಲ್ಲಿ ಕಸ ಹಾಕುವುದು,ಕೆಟ್ಟ ರಸ್ತೆಗಳು, ರಸ್ತೆ ಬದಿಯಲ್ಲಿ ತಿಪ್ಪೆಗಳು, ಬಯಲು ಶೌಚ, ಮೂಗು ಮುಚ್ಚಿಕೊಂಡು ಹೋಗುವಂತಹ ವಾತಾವರಣ ಹೆಚ್ಚಾಗುತ್ತಿದೆ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ಸ್ವಚ್ಛ ಮತ್ತು ಸ್ವಸ್ಥ ಗ್ರಾಮಗಳ ನಿರ್ಮಾಣವಾಗಿತ್ತು. ಗಾಂಧೀಜಿ ಕಂಡ ಕನಸನ್ನು ನನಸಾಗಿಸುವತ್ತ ಕೊಪ್ಪಳ ಜಿಲ್ಲೆ ಮುಂದಡಿ ಇಡುತ್ತಿದೆ.

ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿಚಿಲುಮೆ -2 ಎಂಬ ಶೀರ್ಷಿಕೆಯಲ್ಲಿ ಕೊಪ್ಪಳ ಜಿಲ್ಲೆಯ 153 ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ಶುಕ್ರವಾರದಂದು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಗ್ರಾಮ ನೈರ್ಮಲ್ಯಕ್ಕಾಗಿ ಸಾರ್ವಜನಿಕ ಸ್ಥಳಗಳಾದ ಗ್ರಂಥಾಲಯಗಳ ಆವರಣ, ಶಾಲಾ ಆವರಣ, ಅಂಗನವಾಡಿಗಳ ಆವರಣ, ಆಸ್ಪತ್ರೆ ಆವರಣ, ಗ್ರಾಮ ಪಂಚಾಯಿತಿಗಳ ಆವರಣ, ಸಮುದಾಯ ಭವನಗಳ ಆವರಣ, ಸಾರ್ವಜನಿಕ ಐತಿಹಾಸಿಕ ಸ್ಥಳಗಳು, ಕಲ್ಯಾಣಿಗಳು, ಬಸ್‌ ನಿಲ್ದಾಣಗಳು, ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ ಮಾಡುವ ಮೂಲಕ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ಯೋಜನೆಯು ಯಶಸ್ವಿಯಾಗಿ ಅನುಷ್ಠಾನವಾಗುವಂತೆ ಮಾಡಲಾಗುತ್ತಿದೆ.

ಸ್ವಚ್ಛತಾ ಜಾಥಾ:- ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸರ್ವ ಸದಸ್ಯರು\ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾ) ಹಾಗೂ ಓ.ಡಿ.ಎಫ್. ಪ್ಲಸ್ ಘಟಕಾಂಶಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ.

ಕಸದ ಬುಟ್ಟಿ ವಿತರಣೆ:- ಮನೆಯ ಹಂತದಲ್ಲಿಯೇ ಕಸವನ್ನು ವಿಂಗಡಿಸಿ ಸ್ವಚ್ಛ ವಾಹಿನಿಗೆ ಕೊಡುವಂತೆ ಜನರಲ್ಲಿ ಜಾಗೃತಿ ಮೂಡಿಸಿ, ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಲು ಅನುಕೂಲವಾಗುವಂತೆ ಪ್ರತಿಯೊಂದು ಮನೆಗೂ ಎರಡು ಕಸದ ಬುಟ್ಟಿ ಕೊಡಲಾಗಿದೆ.

ಮನೆ ಮನೆಗೆ ಭೇಟಿ :- ಶೌಚಾಲಯಗಳ ನಿರಂತರ ಬಳಕೆಮಾಡುವಂತೆ, ಮೂಲದಲ್ಲಿಯೇ ಕಸ ವಿಂಗಡಣೆ ಮಾಡುವಂತೆ ಮನೆ ಮನೆಗೆ ಭೇಟಿ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ.

ಮನೆ ಮನೆಗಳಿಗೆ ಕರಪತ್ರ ವಿತರಣೆ:- ಮನೆಗಳಿಗೆ ಭೇಟಿ ನೀಡಿ ವೈಯಕ್ತಿಕ ಶುಚಿತ್ವ ಹಾಗೂ ಋತುಚಕ್ರ ನೈರ್ಮಲ್ಯ ಮತ್ತು ಮನೆ ಹಂತದಲ್ಲಿ ಕಸ ವಿಂಗಡಣೆ ಕುರಿತು ಮಾಹಿತಿ ನೀಡುವ ಕರ ಪತ್ರಗಳನ್ನು ವಿತರಿಸಲಾಗಿದೆ.

ಅಂಗಡಿಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ :- ಸಾರ್ವಜನಿಕರಿಗೆ ಏಕ ಬಳಕೆ ಪ್ಲಾಸ್ಟಿಕ್‌ ನಿಂದಾಗುವ ಪರಿಣಾಮ ಮತ್ತು ನಿಷೇಧ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಅಂಗಡಿ ಮಾಲೀಕರಿಗೆ ಏಕ ಬಳಕೆ ಪ್ಲಾಸಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸಿ ಏಕ ಬಳಕೆ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಪ್ಲಾಸ್ಟಿಕ್ ಗಳನ್ನು ಬಳಸದಂತೆ ಸೂಚಿಸಲಾಗಿದೆ.

ಬಸ್ ನಿಲ್ದಾಣಗಳ ಶುಚಿತ್ವ. ಗ್ರಾಮೀಣ ಪ್ರದೇಶದ ಬಸ್ ಸ್ಟ್ಯಾಂಡ್ ಗಳಲ್ಲಿ ಜನರು ಎಲೆ-ಅಡಿಕೆ ತಂಬಾಕು, ಗುಟುಕಾ ತಿಂದು ಉಗುಳುವಕೆಟ್ಟಅಭ್ಯಾಸಹೆಚ್ಚಾಗಿತ್ತು. ಈ ರೀತಿಯ ಸಾರ್ವಜನಿಕ ಸ್ಥಳವನ್ನು ಚಿಲುಮೆ ಕಾರ್ಯಕ್ರಮದಲ್ಲಿ ಗುರುತಿಸಿ ಸಾರ್ವಜನಿಕರನ್ನು ಒಳಗೊಂಡಂತೆ ಎಲ್ಲರೂ ಭಾಗವಹಿಸಿ ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸಿ ಸ್ವಚ್ಛತೆ ಎಲ್ಲರೂ ಆದ್ಯತೆ ‌ಎಂದು ಕರೆ ನೀಡಲಾಗಿದೆ.

ಐತಿಹಾಸಿಕ ಸ್ಥಳಗಳು- ಐತಿಹಾಸಿಕ ಸ್ಥಳಗಳಾದ ಕಲ್ಯಾಣಿಗಳು ಕೆಲವು ಕಡೆ ಅವನತಿ ಹೊಂದುತ್ತಿದ್ದವು. ಅವುಗಳ ಸ್ವಚ್ಛತೆಗೆ ಆದ್ಯತೆ ನೀಡಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಚ್ಛಾಗ್ರಹಿಗಳು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಐತಿಹಾಸಿಕ ಸ್ಥಳಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ.

https://swachhamevajayate.org/wp-content/uploads/2023/05/unnamed-file-400x400.jpg
https://swachhamevajayate.org/wp-content/uploads/2023/05/5-400x400.jpg
https://swachhamevajayate.org/wp-content/uploads/2023/05/6-scaled-400x400.jpg

ಸ್ವಚ್ಛತೆಯ ಕುರಿತು ಜಾಗೃತಿ ಎಲ್ಲರಿಗೂ ಅವಶ್ಯ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಅಂಗನವಾಡಿಗಳಲ್ಲಿ, ಶಾಲೆಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಂಗನವಾಡಿ ಆವರಣ, ಶಾಲಾಆವರಣ ಸ್ವಚ್ಛಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಓದಲು ಒಳ್ಳೆಯ ಪರಿಸರ ನಿರ್ಮಿಸಲಾಗುತ್ತಿದೆ. ಶಾಲೆಯ ಸುತ್ತ ಗಿಡ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತಿದೆ.

ದೇವಾಲಯಗಳು, ಗ್ರಂಥಾಲಯಗಳು ಮುಂತಾದ ಸ್ಥಳಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛ ಮಾಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಗ್ರಾಮಗಳ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಮನವರಿಕೆ ಮಾಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೊಪ್ಪಳ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

 2,290 total views,  2 views today

WhatsApp chat