Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಚಿಕ್ಕಬಳ್ಳಾಪುರ ಜಿಲ್ಲೆಯು ಕರ್ನಾಟಕದ ಆಗ್ನೇಯ ಭಾಗದಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲಿದ್ದು, ಕರ್ನಾಟಕದಪೂರ್ವ ಹೆಬ್ಬಾಗಿಲು ಎಂದು ಪ್ರಸಿದ್ದವಾಗಿದೆ . ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯೂ ಹಳೆಯ ಕೋಲಾರ ಜಿಲ್ಲೆಯನ್ನು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಾಗಿ ವಿಭಜಿಸುವ ಮೂಲಕ ರೂಪುಗೊಂಡಿತು. ಆಡಳಿತಾತ್ಮಕವಾಗಿ ಜಿಲ್ಲೆಯನ್ನು 6 ತಾಲೂಕುಗಳು, 26 ಹೋಬಳಿಗಳು, 150 ಗ್ರಾಮ ಪಂಚಾಯಿತಿಗಳು ಮತ್ತು 1321 ಗ್ರಾಮಗಳಾಗಿ ವಿಂಗಡಿಸಲಾಗಿದೆ. 2011 ರ ಜನಗಣತಿಯ ಪ್ರಕಾರ ಜನಸಂಖ್ಯೆಯು 12.54 ಲಕ್ಷಗಳು ಹೊಂದಿದೆ. ಭೌಗೋಳಿಕವಾಗಿ ಮಣ್ಣು ಫಲವತ್ತಾಗಿದ್ದು ರಾಗಿ, ಜೋಳ, ಎಣ್ಣೆ ಬೀಜಗಳು, ತರಕಾರಿಗಳು ಮತ್ತು ಹಣ್ಣಿನ ಬೆಳೆಗಳು ಬೆಳೆಯಲು ಅನುಕೂಲಕರವಾಗಿದೆ. ಇಲ್ಲಿನ ಜನರು ಕೃಷಿಯನ್ನು ಪ್ರಧಾನ ಆರ್ಥಿಕ ಚಟುವಟಿಕೆಯನ್ನಾಗಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1243 ಪ್ರಾಚೀನ ಕೆರೆಗಳಿದ್ದು ಜನರು ಗೃಹಬಳಕೆ ಹಾಗು ನೀರಾವರಿಗಾಗಿ ಕೆರೆ ಹಾಗೂ ಅಂತರ್ಜಲದ ಮೇಲೆ ಅವಲಂಬಿತರಾಗಿದ್ದಾರೆ. ಜಿಲ್ಲೆಯಲ್ಲಿನ ಪಾಲಾರ್, ಪೊನ್ನಯಾರ್ ಮತ್ತು ಪೆನ್ನಾರ್ ಎಂಬ ಮೂರು ನದಿ ಜಲಾನಯನ ಪ್ರದೇಶಗಳು ಬರಿದಾಗಿದೆ. ಈ ಎಲ್ಲಾ ನದಿಗಳು ಮತ್ತು ಅವುಗಳ ಉಪನದಿಗಳು ಚಿಕ್ಕದಾಗಿದ್ದು, ಮಳೆಗಾಲದಲ್ಲಿ ಮಾತ್ರ ನೀರು ಹರಿಯುತ್ತದೆ. ಮೇಲ್ಮೈ ನೀರಿನ ನೀರಾವರಿ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ ಅಂತರ್ಜಲವು ಗೃಹಬಳಕೆ ಮತ್ತು ನೀರಾವರಿ ಉದ್ದೇಶಗಳ ಮುಖ್ಯ ಮೂಲವಾಗಿದೆ. ಆದ್ದರಿಂದಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅಂತರ್ಜಲವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಈ ಬರಪೀಡಿತ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಜಲ ಜೀವನ್ ಮಿಷನ್ (ಜೆಜೆಎಂ), ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, 2024ರ ವೇಳೆಗೆ ಗ್ರಾಮೀಣ ಕುಟುಂಬಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಸ್ಥಿರ ನೀರಿನ ಮೂಲವಿಲ್ಲದ ಕಾರಣ ಜಲ್ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಳೆದ 2 ವರ್ಷಗಳಿಂದ ಯಾವುದೇ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು ಕೆರೆಗಳು ತುಂಬಿ ಕೋಡಿ ಹರಿದಿರುತ್ತದೆ. ಜೊತೆಗೆ ಕೆ. ಸಿ ವ್ಯಾಲಿ/ಹೆಚ್.ಎನ್ ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಯಡಿ ಸುಮಾರು 330 ಕೆರೆಗಳು ತುಂಬಿರುವ ಹಿನ್ನಲೆಯಲ್ಲಿ ಜಿಲ್ಲೆಯ ಬಹಳಷ್ಟು ಬತ್ತಿಹೋಗಿದ್ದ ಕೊಳವೆಬಾವಿಗಳು ಮತ್ತೆ ಪುರ್ನಚಾಲ್ತಿಯಾಗಿರುತ್ತವೆ. ಚಿಕ್ಕಬಳ್ಳಾಪುರ ನಗರಕ್ಕೆ ಜಕ್ಕಲಮಡಗು ಕೆರೆಯಿಂದ ನೀರನ್ನು ಬಳಸಿಕೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕುಡಿಯುವ ನೀರು ಒದಗಿಸುತ್ತಿದ್ದು, ಈ ಯೋಜನೆಯಲ್ಲಿನ ಎನ್ರೂಟ್ ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮೊದಲ ಹಂತದಲ್ಲಿ ತಿಪ್ಪೇನಹಳ್ಳಿ ಮತ್ತು ಇತರೆ 5 ಗ್ರಾಮಗಳಿಗೆ ಒಟ್ಟು 6 ಜನವಸತಿಗಳ 1151 ಮನೆಗಳಿಗೆ ಕಾರ್ಯಾತ್ಮಕ ಗೃಹ ನಳ ಸಂಪರ್ಕವನ್ನು ಯಶಸ್ವಿಯಾಗಿ ನೀಡಲಾಗಿದೆ. ಎರಡನೇ ಹಂತದಲ್ಲಿ ಮೈಲಪ್ಪನಹಳ್ಳಿ ಮತ್ತು ಇತರೆ 4 ಗ್ರಾಮಗಳ ಒಟ್ಟು 5 ಜನವಸತಿಗಳ 1486 ಮನೆಗಳಿಗೆ ಕಾರ್ಯಾತ್ಮಕ ಗೃಹ ನಳ ಸಂಪರ್ಕ ನೀಡಲಾಗಿದೆ.

ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಜಲ ಜೀವನ್ ಮಿಷನ್ ಯೋಜನೆಯಡಿ 5 ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಚಾಲ್ತಿಯಲ್ಲಿದ್ದು, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಮಂಡಿಕಲ್ ಹೋಬಳಿಯ ಯಾದರ‍್ಲಹಳ್ಳಿ ಕೆರೆಯಿಂದ ನೀರನ್ನು ಬಳಸಿಕೊಂಡು ಸುಮಾರು 14 ಗ್ರಾಮಗಳಿಗೆ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಗುಡಿಬಂಡೆ ತಾಲೂಕಿನ ಅಮಾನಿ ಭೈರಸಾಗರ ಕೆರೆಯಿಂದ ನೀರನ್ನು ಬಳಸಿಕೊಂಡು 27 ಗ್ರಾಮಗಳಿಗೆ ಮನೆ ಮನೆಗೆ ಕಾರ್ಯಾತ್ಮಕ ಗೃಹ ನಳ ಕಲ್ಪಿಸಲಾಗುತ್ತಿದೆ. ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯ ದಂಡಿಗಾನಹಳ್ಳಿ ಕೆರೆಯಿಂದ ನೀರನ್ನು ಬಳಸಿಕೊಂಡು 41 ಗ್ರಾಮಗಳಿಗೆ ಮನೆ ಮನೆಗೆ ಕಾರ್ಯಾತ್ಮಕ ಗೃಹ ನಳಸಂಪರ್ಕ ನೀಡುವ ಯೋಜನೆ ಪ್ರಾರಂಭವಾಗಿದೆ ಮತ್ತು ಬಾಗೇಪಲ್ಲಿ ತಾಲೂಕಿನ ವಂಡಮಾನ್ ಕೆರೆಯಿಂದ ನೀರನ್ನು ಬಳಸಿಕೊಂಡು 20 ಗ್ರಾಮಗಳಿಗೆ ಕಾರ್ಯಾತ್ಮಕ ಗೃಹ ನಳ ಕಲ್ಪಿಸಿ ಶುದ್ಧ ಮತ್ತು ಸುರಕ್ಷಿತ ನೀರನ್ನು ಒದಗಿಸುವ ಯೋಜನೆ ಪ್ರಾರಂಭವಾಗಿದೆ.

ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಜಲ ಜೀವನ್ ಮಿಷನ್ ಯೋಜನೆಯಡಿ 5 ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಚಾಲ್ತಿಯಲ್ಲಿದ್ದು, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಮಂಡಿಕಲ್ ಹೋಬಳಿಯ ಯಾದರ‍್ಲಹಳ್ಳಿ ಕೆರೆಯಿಂದ ನೀರನ್ನು ಬಳಸಿಕೊಂಡು ಸುಮಾರು 14 ಗ್ರಾಮಗಳಿಗೆ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಗುಡಿಬಂಡೆ ತಾಲೂಕಿನ ಅಮಾನಿ ಭೈರಸಾಗರ ಕೆರೆಯಿಂದ ನೀರನ್ನು ಬಳಸಿಕೊಂಡು 27 ಗ್ರಾಮಗಳಿಗೆ ಮನೆ ಮನೆಗೆ ಕಾರ್ಯಾತ್ಮಕ ಗೃಹ ನಳ ಕಲ್ಪಿಸಲಾಗುತ್ತಿದೆ. ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯ ದಂಡಿಗಾನಹಳ್ಳಿ ಕೆರೆಯಿಂದ ನೀರನ್ನು ಬಳಸಿಕೊಂಡು 41 ಗ್ರಾಮಗಳಿಗೆ ಮನೆ ಮನೆಗೆ ಕಾರ್ಯಾತ್ಮಕ ಗೃಹ ನಳಸಂಪರ್ಕ ನೀಡುವ ಯೋಜನೆ ಪ್ರಾರಂಭವಾಗಿದೆ ಮತ್ತು ಬಾಗೇಪಲ್ಲಿ ತಾಲೂಕಿನ ವಂಡಮಾನ್ ಕೆರೆಯಿಂದ ನೀರನ್ನು ಬಳಸಿಕೊಂಡು 20 ಗ್ರಾಮಗಳಿಗೆ ಕಾರ್ಯಾತ್ಮಕ ಗೃಹ ನಳ ಕಲ್ಪಿಸಿ ಶುದ್ಧ ಮತ್ತು ಸುರಕ್ಷಿತ ನೀರನ್ನು ಒದಗಿಸುವ ಯೋಜನೆ ಪ್ರಾರಂಭವಾಗಿದೆ.

ಜಿಲ್ಲೆಯಾದ್ಯಂತ ನೀರಿನ ಸುಸ್ಥಿರತೆಯನ್ನು ಪರಿಶೀಲಿಸಿ ಹಾಗೂ ಲಭ್ಯತೆಯ ಮೇರೆಗೆ ಮೊದಲ ಹಂತದಲ್ಲಿ ಏಕ ಗ್ರಾಮ ಯೋಜನೆ, ಜಲ ಜೀವನ್ ಮಿಷನ್ ಯೋಜನೆಯಡಿ ಸುಮಾರು 509 ಗ್ರಾಮಗಳಿಗೆ ಕಾರ್ಯಾತ್ಮಕ ಗೃಹ ನಳಸಂಪರ್ಕ ನೀಡಲು ಗುರಿ ಹೊಂದಿದ್ದು, ಡಿ. ಪಿ. ಆರ್ ತಯಾರಿಸಿ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. ಕಳೆದ 2 ವರ್ಷಗಳಿಂದ ದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಸುಮಾರು ಕೆರೆಗಳು ತುಂಬಿರುವ ಹಿನ್ನಲೆಯಲ್ಲಿ ಕೆರೆ ಅಂಗಳದಲ್ಲಿರುವ ಕೊಳವೆ ಬಾವಿಗಳು ಪೂರ್ತಿಯಾಗಿರುವ ಕಾರಣ 2ನೇ ಹಂತದಲ್ಲಿ ಉಳಿದ ಎಲ್ಲಾ ಗ್ರಾಮಗಳಿಗೆ ಹಾಗೂ ಜನವಸತಿ ಪ್ರದೇಶಗಳಿಗೆ ಕಾರ್ಯಾತ್ಮಕ ಗೃಹ ನಳ ಕಲ್ಪಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ಒಟ್ಟಾರೆಯಾಗಿ ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಬಹುಗ್ರಾಮ ಮತ್ತು ಏಕಗ್ರಾಮ ಕುಡಿಯುವ ನೀರು ಯೋಜನೆಯಡಿ “ಮನೆಮನೆಗೆ ಗಂಗೆ” ಎಂಬ ಶೀರ್ಷಿಕೆಯಂತೆ ಕಾರ್ಯಾತ್ಮಕ ಗೃಹ ನಳ ಉದ್ದೇಶ ಹೊಂದಲಾಗಿದೆ.

ಜಲ ಜೀವನ್ ಮಿಷನ್ ಯೋಜನೆಯಿಂದ ಈಗಾಗಲೇಕಾರ್ಯಾತ್ಮಕ ಗೃಹ ನಳಸಂಪರ್ಕ ಹೊಂದಿರುವ ಗ್ರಾಮಗಳಲ್ಲಿ ಮಹಿಳೆಯರಿಗೆ ನೀರಿನ ಸಮಸ್ಯೆಗಳು ನಿವಾರಣೆಯಾಗಿವೆ. ಇದರಿಂದ ಮಹಿಳೆಯರಿಗೆ, ವೃದ್ಧರಿಗೆ ಹಾಗೂ ಮಕ್ಕಳಿಗೆ ತುಂಬಾ ಪ್ರಯೋಜನವಾಗಿದೆ,ಹಾಗೂ ಮುಖ್ಯವಾಗಿ ರೈತರಿಗೆ ಅನುಕೂಲಕರವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 3,979 total views,  2 views today

WhatsApp chat