Englishs

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕುರಿತು:


ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ವಚ್ಛ ಭಾರತ್ ಮಿಷನ್ ನ ಗ್ರಾಮೀಣ ಘಟಕವನ್ನು ನಿರ್ವಹಿಸುತ್ತದೆ ಮತ್ತು ಗ್ರಾಮೀಣ ಭಾಗಕ್ಕೆ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ದಿನಾಂಕ 04-03-2014 ರಂದು ಮಹತ್ತರ ಉದ್ದೇಶವನ್ನಿಟ್ಟುಕೊಂಡು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯನ್ನು ಸೃಜಿಸಲಾಯಿತು. ಆಯುಕ್ತರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಡಳಿತದ ಮುಖ್ಯಸ್ಥರಾಗಿದ್ದು, ರಾಜ್ಯದ ಗ್ರಾಮೀಣ ಪ್ರದೇಶದ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕಾರ್ಯರೂಪಗೊಳಿಸುವ ಒಟ್ಟಾರೆ ಜವಾಬ್ದಾರಿಯನ್ನು ಆಯುಕ್ತರು ಹೊಂದಿದ್ದಾರೆ.

ಉದ್ದೇಶ ಮತ್ತು ಗುರಿ:

ಗ್ರಾಮೀಣ ಪ್ರದೇಶದ ಜನಗಳ ಆರೋಗ್ಯದಲ್ಲಿ ಸುಸ್ಥಿರತೆಯನ್ನು ಸಾಧಿಸುವುದು ಮತ್ತು ಬಡತನ ರೇಖೆಯನ್ನು ತಗ್ಗಿಸುವುದನ್ನು ಗುರಿಯಾಗಿಟ್ಟುಕೊಂಡು ವಲಯ ಸುಧಾರಣಾ ಕಾರ್ಯನೀತಿಗಳನ್ನು ಅನುಷ್ಠಾನಗೊಳಿಸುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ. ಇಲಾಖೆಯು ಎಲ್ಲಾ ಹಂತಗಳಲ್ಲಿ ಅಂದರೆ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಗಳು ಮತ್ತು ರಾಜ್ಯ ಕೇಂದ್ರ ಕಚೇರಿಗಳಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ವಿಷಯಗಳಿಗೆ ಸಂಬಂಧಿಸಿದಂತೆ ನೀತಿ ಮತ್ತು ಅನುಷ್ಠಾನ ಮಾರ್ಗಸೂಚಿಗಳನ್ನು ಕಾಲ ಕಾಲಕ್ಕೆ ತಕ್ಕಂತೆ ಒದಗಿಸುತ್ತದೆ.

ಆಡಳಿತಾತ್ಮಕ ಸ್ವರೂಪ:

ಕ್ಷೇತ್ರಗಳು

ನೈರ್ಮಲ್ಯ

ಹೆಚ್ಚಿನ ಓದು

ನೈರ್ಮಲ್ಯ

ಇಲಾಖೆಯು ಗ್ರಾಮೀಣ ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರೀಕನಿಗೂ ಸುಸ್ಥಿರ ನೈರ್ಮಲ್ಯ ಒದಗಿಸುವ ಉದ್ದೇಶದಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಗ್ರಾಮೀಣ ಕರ್ನಾಟಕವು 2018ರ ನವೆಂಬರ್ 19ರಂದು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲ್ಪಟ್ಟಿರುತ್ತದೆ. ಇದೀಗ ಸುಸ್ಥಿರ ನೈರ್ಮಲ್ಯವನ್ನು ಸಾಧಿಸುವ ಉದ್ದೇಶದಿಂದ ಗ್ರಾಮೀಣ ಕರ್ನಾಟಕದಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಪ್ರಸ್ತುತ ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ 2 ಜಾರಿಯಲ್ಲಿದ್ದು, ಸುಸ್ಥಿರ ನೈರ್ಮಲ್ಯ ಮತ್ತು ODF+ ಅಂಶಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

ಕುಡಿಯುವ ನೀರು

ಗ್ರಾಮೀಣ ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರೀಕನಿಗೂ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ತಲಾ 55 ಲೀಟರ್‌ನಂತೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿಯೊಂದಿಗೆ ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಕುಡಿಯುವ ನೀರಿನ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಪ್ರಸ್ತುತ ಜಲ ಜೀವನ್ ಮಿಷನ್ ಯೋಜನೆ ರಾಜ್ಯಾದ್ಯಂತ ಚಾಲ್ತಿಯಲ್ಲಿದೆ.

ಕುಡಿಯುವ ನೀರು

ಹೆಚ್ಚಿನ ಓದು

ಯೋಜನೆಗಳು

ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ):

ಗ್ರಾಮೀಣ ಸ್ವಚ್ಛತೆಗೆ ವಿಶೇಷ ಒತ್ತು ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಒಂದು ಕಿರು ನೋಟ:

  • ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು 2005 ರಿಂದ ಮಾರ್ಚ್ 2012 ರವರೆಗೆ
  • ನಿರ್ಮಲ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಏಪ್ರಿಲ್ 2012 ರಿಂದ ಅಕ್ಟೋಬರ್ 2, 2014
  • ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಂತ-1 ಮುಕ್ತಾಯವಾಗಿರುತ್ತದೆ. ಅಕ್ಟೋಬರ್ 2, 2014 ರಿಂದ 2020
  • ಪ್ರಸ್ತುತ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಂತ-2 ಅನುಷ್ಠಾನಗೊಳ್ಳುತ್ತಿದೆ.

ಈ ಯೋಜನೆಯ ಪ್ರಮುಖ ಅಂಶಗಳು:

  • ಬಯಲು ಬಹಿರ್ದೆಸೆ ಮುಕ್ತಗೊಳಿಸುವುದು
  • ಜನರ ಜೀವನ ಮಟ್ಟ ಮತ್ತು ಆರೋಗ್ಯವನ್ನು ಸುಧಾರಿಸುವುದು
  • ವೈಯಕ್ತಿಕ ಶೌಚಾಲಯ ಕಟ್ಟುವುದು ಮತ್ತು ಬಳಸುವುದು
  • ಸಮುದಾಯ ಶೌಚಾಲಯ ಕಟ್ಟುವುದು ಮತ್ತು ಬಳಸುವುದು
  • ಶಾಲೆ ಹಾಗೂ ಅಂಗನವಾಡಿಗಳಲ್ಲಿ ಶೌಚಾಲಯ ಕಟ್ಟಿಸಿ, ಬಳಸುವುದು
  • ಘನ ತ್ಯಾಜ್ಯ ನಿರ್ವಹಣೆ
  • ದ್ರವ ತ್ಯಾಜ್ಯ ನಿರ್ವಹಣೆ
  • ಐ.ಇ.ಸಿ ಚಟುವಟಿಕೆಗಳು
ಜಲಜೀವನ್ ಮಿಷನ್

ರಾಜ್ಯದ ಎಲ್ಲಾ ಮನೆಗಳಿಗೂ ಶುದ್ಧ ನೀರನ್ನು ಒದಗಿಸುವುದಕ್ಕೋಸ್ಕರ ಮನೆ ಮನೆಗೆ ಗಂಗೆ ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ (JJM) ಅನ್ನು ಅನುಷ್ಠಾನಗೊಳಿಸುತ್ತಿದೆ.

ಈ ಯೋಜನೆಯ ಪ್ರಮುಖ ಉದ್ದೇಶಗಳು:

  • ಪ್ರತಿಯೊಂದು ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸುವುದು
  • 55 lpcd ನೀರನ್ನು ಒದಗಿಸುವ ಸಲುವಾಗಿ ನೀರಿನ ಮೂಲಗಳ ಸುಸ್ಥಿರತೆ ಕಾಪಾಡುವುದು.
  • ಶುದ್ಧ ನೀರಿನ ಖಾತ್ರಿಗಾಗಿ ಹೊಸ ತಂತ್ರಜ್ಞಾನವನ್ನು ಬಳಸುವುದು
  • ತ್ಯಾಜ್ಯ ನೀರನ್ನು ನಿರ್ವಹಣೆ ಮಾಡುವುದು
  • ಬೆಂಬಲ ಚಟುವಟಿಕೆಗಳಾದ IEC ಮತ್ತು HRD ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು
  • ಕುಡಿಯುವ ನೀರಿನ ಪರೀಕ್ಷೆ ಮತ್ತು ಕಣ್ಗಾವಲಿನ ವ್ಯವಸ್ಥೆ ಮಾಡುವುದು
  • ಕಾರ್ಯಾಚರಣೆ ಮತ್ತು ನಿರ್ವಹಣೆ

ನಮ್ಮ ಸಾಧನೆಗಳು*:

*14 ಜುಲೈ 2022 ರ ಅನುಸಾರ

ವಾರ್ತಾಪತ್ರ

ಇಲಾಖೆಯ ಕುರಿತು ನಿರಂತರ ಮಾಹಿತಿಗಾಗಿ ಸಂಪರ್ಕದಲ್ಲಿರಲು ನಮ್ಮ ವಾರ್ತಾಪತ್ರ ಸಬ್ಸ್ರೈಬ್ ಆಗಿರಿ

 72,639 total views,  12 views today

WhatsApp chat