ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ್ ಮಿಷನ್(ಗ್ರಾ) ಹಾಗೂ ಜಲ ಜೀವನ್ ಮಿಷನ್ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಗ್ರಾಮೀಣ ಕರ್ನಾಟಕಕ್ಕೆ ಶುದ್ಧ, ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಜೊತೆಗೆ ನೈರ್ಮಲ್ಯ ಮತ್ತು ವೈಯಕ್ತಿಕ ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಚಾರಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಜನರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಬಹಳ ಸಮಯ ಹಿಡಿಯುತ್ತಿತ್ತು. ಇದನ್ನು ಅರಿತು, ಗ್ರಾಮೀಣ ಕರ್ನಾಟಕದ ಜನರು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಚಾರಗಳಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ನೇರವಾಗಿ ರಾಜ್ಯ ಕಚೇರಿಗೆ ದೂರನ್ನು ಸಲ್ಲಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಇಲಾಖೆಯಡಿ ಪರಿಹಾರ ಸಹಾಯವಾಣಿಯನ್ನು ಸ್ಥಾಪಿಸಲಾಯಿತು.
ಗ್ರಾಮೀಣ ಕರ್ನಾಟಕದ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವ ಮಹದುದ್ದೇಶದಿಂದ ಮಾರ್ಚ್ 2020ರಲ್ಲಿ ಆರಂಭವಾದ ಪರಿಹಾರ ಸಹಾಯವಾಣಿಗೆ ಡಿಸೆಂಬರ್ 2021ರವರೆಗೂ 62,628 ಕರೆಗಳು ಬಂದಿವೆ. 62,628 ಕರೆಗಳ ಪೈಕಿ 17,095ದೂರುಗಳು ದಾಖಲಾಗಿದ್ದು, ಈ ಪೈಕಿ 15,917ದೂರುಗಳನ್ನು ವಿವಿಧ ಹಂತಗಳಲ್ಲಿ ಪರಿಹರಿಸಲಾಗಿದೆ. ಇನ್ನು ಪರಿಹಾರ ಸಹಾಯವಾಣಿಗೆ ಯಾವೆಲ್ಲಾ ಸಮಸ್ಯೆಗಳ ಕುರಿತು ದೂರುಗಳನ್ನು ದಾಖಲಿಸಬಹುದು ಎಂಬುದನ್ನು ನೋಡುವುದಾದರೆ,
ಮೇಲ್ಕಾಣಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ಗ್ರಾಮೀಣ ಕರ್ನಾಟಕದ ನಿವಾಸಿಗಳು/ಸಾರ್ವಜನಿಕರು ಪರಿಹಾರ ಸಹಾಯವಾಣಿ ದೂರವಾಣಿ ಸಂಖ್ಯೆ 9480985555ನಂಬರಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವರ್ಷದ 365 ದಿನಗಳೂ ಸಹ ಕರೆಮಾಡಿ ದೂರನ್ನು ಸಲ್ಲಿಸಬಹುದಾಗಿರುತ್ತದೆ. ಇದಿಷ್ಟೇ ಅಲ್ಲದೆ ಪರಿಹಾರ ಸಹಾಯವಾಣಿ ಸಂಖ್ಯೆ 9480985555 ನಂಬರಿಗೆ WhatsApp ಮೂಲಕವೂ ದೂರಗಳನ್ನು ಸಲ್ಲಿಸಬಹುದಾಗಿರುತ್ತದೆ. ಹಾಗೂ ಇಲಾಖೆಯ ವಿವಿಧ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್‌ಗಳ ಮೂಲಕವು ಗ್ರಾಮೀಣ ಸಾರ್ವಜನಿಕರು ದೂರುಗಳನ್ನು ದಾಖಲಿಸಬಹುದು. ಹೀಗೆ ವಿವಿಧ ಮಾಧ್ಯಮಗಳ ಮೂಲಕ ದಾಖಲಾದ ದೂರುಗಳನ್ನು ಪರಿಹಾರ ಸಹಾಯವಾಣಿ ಪೋರ್ಟಲ್ (http://parihara.swachhamevajayate.org/parihara/)ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ದೂರು ದಾಖಲಾಗಿರುವ ಬಗ್ಗೆ ತಕ್ಷಣವೇ ಸಂದೇಶ ರವಾನೆಯಾಗುತ್ತದೆ. ಅಂತೆಯೇ ದೂರುದಾರರಿಗೂ ಸಹ ಸಂಬಂಧಪಟ್ಟ ಅಧಿಕಾರಿಯ ದೂರವಾಣಿ ಸಂಖ್ಯೆಯನ್ನೊಳಗೊಂಡ ಸಂದೇಶ ರವಾನೆಯಾಗುತ್ತದೆ. ಹೀಗೆ ದಾಖಲಾದ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನಿಗದಿತ ಅವಧಿಯೊಳಗೆ ಬಗೆಹರಿಸಬೇಕಾಗಿರುತ್ತದೆ. ಒಂದುವೇಳೆ ನಿಗದಿತ ಅವಧಿಯೊಳಗೆ ದೂರುಗಳನ್ನು ಬಗೆಹರಿಸದೇ ಇದ್ದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ಈ ದೂರಿಗೆ ಸಂಬಂಧಿಸಿದ ಮಾಹಿತಿ ರವಾನೆಯಾಗುತ್ತದೆ.
ಹೀಗೆ ಪರಿಹಾರ ಸಹಾಯವಾಣಿಯು ಇಲಾಖೆಯ ರಾಜ್ಯ ಕಚೇರಿಯಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುತ್ತಾ ಬಂದಿರುತ್ತದೆ. ತಮ್ಮೆಲ್ಲಾ ಕುಡಿಯುವ ನೀರಿನ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಪರಿಹಾರ ಸಹಾಯವಾಣಿಯನ್ನು ಸಂಪರ್ಕಿಸಿದ್ದಕ್ಕಾಗಿ ಗ್ರಾಮೀಣ ಕರ್ನಾಟಕದ ಜನತೆಗೆ ಇಲಾಖೆ ಧನ್ಯವಾದ ತಿಳಿಸುತ್ತಿದೆ. ಧನ್ಯವಾದ ಕರ್ನಾಟಕ.
4,479 total views, 1 views today