Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ನೀರು ಅಮೂಲ್ಯ ವಸ್ತು. ಜೀವಜಲ ನೀರನ್ನು ಸಂರಕ್ಷಿಸಲು ಮೊದಲಿನಿಂದಲೂ ಬಾವಿ, ಕೆರೆ, ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ. ಸಿಂಧೂ ನಾಗರೀಕತೆ ಕಾಲದಿಂದ ಕಲ್ಯಾಣಿಗಳು/ಪುಷ್ಕರಣಿಗಳು ಎಂದು ಕರೆಯುವ ನೀರಿನ ಮೂಲಗಳು ಮನುಷ್ಯನಲ್ಲದೆ ಸಕಲ ಜೀವರಾಶಿಗೂ ಕುಡಿಯಲು ಹಾಗೂ ಜೀವಸಂಕುಲದ ಇತರೆ ಅಗತ್ಯತೆಗಳಿಗೆ ನೀರನ್ನು ಪೂರೈಸುತ್ತಾ ಬಂದಿದೆ. ಆದರೆ ಕಾಲ ಬದಲಾದಂತೆ ಜಲಮೂಲಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಗಿಡಗಂಟಿಗಳು, ಮಣ್ಣು/ಹೂಳಿನಿಂದ ತುಂಬಿ, ಈಗ ಬಹುತೇಕ ಪುಷ್ಕರಣಿಗಳು ಶಿಥಿಲಾವಸ್ಥೆಯಲ್ಲಿವೆ.

 

ಇದನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು, ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿಸ್ವಚ್ಛತೆಯೇ ಸೇವೆಎಂಬ ವಿನೂತನ ಅಭಿಯಾನವನ್ನು ಕೈಗೊಂಡಿದೆ. ಅಭಿಯಾನದಲ್ಲಿ ಜಲಮೂಲಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು ನಮ್ಮ

ಪುಷ್ಕರಣಿಗಳು ಜೀವ ಪಡೆಯುತ್ತಿವೆ. ಗಿಡಗಂಟಿಗಳು, ಮಣ್ಣು/ಹೂಳಿನಿಂದ ತುಂಬಿ ಶಿಥಿಲಾವಸ್ಥೆಯಲ್ಲಿದ್ದ ಬಾವಿ, ಕೆರೆ, ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ನಿಟ್ಟಿನಲ್ಲಿ ಗ್ಯಾರಘಟ್ಟ ಗ್ರಾಮ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆಯಲ್ಲಿ ಸುಮಾರು 120 ವರ್ಷಗಳ ಹಳೆಯದಾದ ಕಲ್ಯಾಣಿಗಳು ಮರುಹುಟ್ಟು ಪಡೆದಿವೆ.

ಗ್ಯಾರಘಟ್ಟ ಗ್ರಾಮದ ಕಲ್ಯಾಣಿಯನ್ನು ಗ್ರಾಮಪಂಚಾಯಿತಿಯ ನೇತೃತ್ವದಲ್ಲಿ ಗ್ರಾಮದ ನಾಗರೀಕರು, ಮಹಿಳೆಯರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸ್ವಚ್ಛಗೊಳಿಸಲಾಗಿದೆ. ಮಳೆ ಇಲ್ಲದ ಕಾರಣ ಮತ್ತು ಕಸ ಹೂಳು ತುಂಬಿದ್ದ ಕಾರಣ ಕಲ್ಯಾಣಿಯ ನೀರು ಬತ್ತಿ ಹೋಗಿತ್ತು. ಈ ಮೊದಲು ಇಲ್ಲಿ ಆಂಜನೇಯ ಸ್ವಾಮಿ ದೇವರನ್ನು ಕಲ್ಯಾಣಿಯ ಬಳಿ ಕೂರಿಸಿ ಗ್ರಾಮಸ್ಥರೆಲ್ಲ ಸೇರಿ ಪೂಜೆ ಮಾಡುತ್ತಿದ್ದರು. ಕಲ್ಯಾಣಿ ಬತ್ತಿದ ನಂತರ ಈ ಆಚರಣೆಯೂ ನಿಂತಿತ್ತು. ಈಗ ನಾಗರಿಕರೆಲ್ಲ ಸೇರಿ ಸ್ವಚ್ಛತಾಕಾರ್ಯ ಕೈಗೊಂಡಿದ್ದು, ಮಳೆಯೂ ಉತ್ತಮವಾಗಿ ಆಗುತ್ತಿರುವುದರಿಂದ ಕಲ್ಯಾಣಿ ತುಂಬುವ ಭರವಸೆಯಿದೆ. 'ಸ್ವಚ್ಛತೆಯೇ ಸೇವೆ’ ಅಭಿಯಾನಐತಿಹಾಸಿಕವಾಗಿದ್ದು ನಮ್ಮ ಪರಂಪರೆಗೆ ಮತ್ತೆ ಜೀವ ತುಂಬುತ್ತಿದೆ.

ಗ್ರಾಮದ ಹಿರಿಯ ಮುಖಂಡರಾದ ಮಾಧುಸ್ವಾಮಿ ಅವರು, "ಈಗ ನಿಂತಿರುವ ದೇವರಕಾರ್ಯ ಕಾರ್ಯವನ್ನು ನಾವೆಲ್ಲರೂ ಅಚ್ಚುಕಟ್ಟಾಗಿ ಮತ್ತೆ ಮುಂದುವರೆಸಿಕೊಂಡು ಹೋಗುತ್ತೇವೆ" ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು.

ಗ್ರಾಮದ ಮಹಿಳೆ ಮಂಜುಳಾ ಅವರು, " ಕಲ್ಯಾಣಿಯಲ್ಲಿ ಗಿಡಗಂಟಿಗಳು, ಮಣ್ಣು/ಹೂಳಿನಿಂದ ಕೂಡಿದ್ದು, ವಿಷಜಂತುಗಳು ಇದರಲ್ಲಿ ಇರಬಹುದು ಎಂಬ ಭಯ ಸುತ್ತಮುತ್ತ ಮನೆಯವರಿಗಿತ್ತು. 'ಸ್ವಚ್ಛತೆಯೇ ಸೇವೆ' ಅಭಿಯಾನ ನಮ್ಮೆಲ್ಲರಲ್ಲೂ ಉತ್ಸಾಹ ತುಂಬಿಸಿ ನಾವೆಲ್ಲರೂ ಸೇರಿ ಸ್ವಚ್ಛತೆ ಮಾಡುವಂತೆ ಪ್ರೇರೇಪಿಸಿತು. ಈಗ ಕಲ್ಯಾಣಿ ಪ್ರದೇಶವೆಲ್ಲಾ ಸ್ವಚ್ಛತೆಯಿಂದ ಸುಂದರವಾಗಿ ಕಾಣುತ್ತದೆ" ಎಂದು ಹೇಳುತ್ತಾರೆ.

ಒಟ್ಟಾರೆಯಾಗಿ ಸರ್ಕಾರದ ಯೋಜನೆಗಳು/ಅಭಿಯಾನಗಳು ಜನರ ಸಹಭಾಗಿತ್ವದಲ್ಲಿ ಅನುಷ್ಠಾನಗೊಂಡಾಗ ಗ್ರಾಮಸ್ಥರಿಗೆ ಜವಾಬ್ದಾರಿ ಅರಿವಾಗುತ್ತದೆ. ಸ್ವಚ್ಛತೆಯೇ ಸೇವೆ ಅಭಿಯಾನವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

 2,062 total views,  5 views today

WhatsApp chat