Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ದ್ರವತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯತೆಯಿದೆ. ವೈಯಕ್ತಿಕ ಸ್ವಚ್ಛತೆ, ಗೃಹ ಸ್ವಚ್ಛತೆ, ಸುರಕ್ಷಿತ ನೀರು, ಮಲ ತ್ಯಾಜ್ಯದ ಸೂಕ್ತ ವಿಲೇವಾರಿ, ತ್ಯಾಜ್ಯ ಮತ್ತು ಬಳಸಿದ ನೀರಿನ ವಿಲೇವಾರಿ ಮುಂತಾದ ಅಂಶಗಳೊಂದಿಗೆ ಸ್ವಚ್ಛ ಭಾರತ್ ಮಿಷನ್‌ ಯೋಜನೆಯು ವಿಸ್ತೃತ ಸ್ವರೂಪವನ್ನು ಹೊಂದಿದೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ವಾತಾವರಣದಲ್ಲಿ ಅನೈರ್ಮಲ್ಯ ಉಂಟಾಗಿ ಅನಾರೋಗ್ಯಕರ/ಅಸಹ್ಯಕರ ಪರಿಸರ ರೂಪುಗೊಂಡು, ಕುಟುಂಬದ ಆರ್ಥಿಕತೆ ಮತ್ತು ಆರೋಗ್ಯಕರ ಜೀವನದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ಆದ್ದರಿಂದ ಗ್ರಾಮಗಳಲ್ಲಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಕಲ್ಪಿಸಿದರೆ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಸ್ವಚ್ಛ-ಸ್ವಸ್ಥ ಗ್ರಾಮಗಳನ್ನು ರೂಪಿಸಿ ಸದೃಢ ಸಮಾಜ ರೂಪಿಸಬಹುದಾಗಿದೆ. ದ್ರವತ್ಯಾಜ್ಯ ನಿರ್ವಹಣೆ ಮಾಡುವುದು ಗ್ರಾಮೀಣ  ಪ್ರದೇಶದಲ್ಲಿ ಒಂದು ಸವಾಲೇ ಸರಿ. ಅಪೇಕ್ಷಣೀಯ ರೀತಿಯಲ್ಲಿ ತ್ಯಾಜ್ಯವನ್ನು ವಿಲೇವಾರಿ ಮತ್ತು ನಿರ್ವಹಣೆ ಮಾಡುವ ಸಲುವಾಗಿ ತ್ಯಾಜ್ಯ ಉತ್ಪಾದನೆಯ ಮೂಲದಲ್ಲಿಯೇ ತ್ಯಾಜ್ಯದ ವಿಂಗಡಣೆ ಮತ್ತು ಸೂಕ್ತ ಸಂಗ್ರಹಣೆ-ಸಂಸ್ಕರಣೆ ವ್ಯವಸ್ಥೆಯನ್ನು ಕಲ್ಪಿಸುವುದು ಗ್ರಾಮ ಪಂಚಾಯಿತಿಗಳ ಪ್ರಮುಖ ಜವಾಬ್ದಾರಿಯಾಗಿರುವ ಜೊತೆಗೆ ಸಮುದಾಯದ ಸಹಭಾಗಿತ್ವವೂ ಸಹ ಗಣನೀಯ ಪಾತ್ರ ವಹಿಸುತ್ತದೆ. “ವ್ಯವಸ್ಥಿತವಾದ ಘನ-ದ್ರವತ್ಯಾಜ್ಯ ನಿರ್ವಹಣೆಯಿಂದ ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ  ಕನಸು ನನಸಾಗಬಲ್ಲದು.

ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲ್ಲೂಕು ಕಸಬಾ ಹೋಬಳಿಗೆ ಸೇರಿದ ಮದಕರಿಪುರ ಗ್ರಾಮ ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಂತೆ ಕೇವಲ 4 ಕಿ.ಮಿ ದೂರದಲ್ಲಿದೆ. ಮದಕರಿಪುರ ಮತ್ತು ಪಿಳ್ಳೆಕೆರನಹಳ್ಳಿ ಹೆಸರಿನ 2 ಗ್ರಾಮಗಳನ್ನೊಳಗೊಂಡಿದೆ. ನಗರ ಹಾಗೂ ಗ್ರಾಮೀಣ ಪರಿಸರ ಎರಡರ ಸಮ್ಮಿಳಿತವಾಗಿರುವ ಈ ಗ್ರಾಮದಲ್ಲಿ ಪ್ರತಿ ದಿನ ಸರಾಸರಿ ಉತ್ಪಾದನೆಯಾಗುವ ಘನ ತ್ಯಾಜ್ಯದ ಪ್ರಮಾಣ 2808 ಕೆ.ಜಿ ಆಗಿದ್ದು, ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ದ್ರವತ್ಯಾಜ್ಯ 5740 ಲೀಟರ್‌ಎಂದು ಅಂದಾಜಿಸಲಾಗಿದೆ. ಮನೆಗಳಿಂದ ಹೊರ ಸೂಸುವ ತ್ಯಾಜ್ಯ ಹರಿದು ಚರಂಡಿ ಮೂಲಕ ಹರಿದು ನೀರಿನ ನೈಸರ್ಗಿಕ ಸಂಪನ್ಮೂಲಗಳಾದ ಕೆರೆ, ಕಟ್ಟೆ ಕಾಲುವೆಗಳನ್ನು ಸೇರಿ ಅವುಗಳನ್ನು ಮಲಿನಗೊಳಿಸುತ್ತಿದೆ. ಅಡಿಗೆ ಮನೆ, ಬಚ್ಚಲು ಮೂಲಕ ಹೊರಬರುವ ದ್ರವತ್ಯಾಜ್ಯವನ್ನು ಬೂದು ನೀರು ಮತ್ತು ಶೌಚಾಲಯದಿಂದ ಹೊರಹೊಮ್ಮುವ ದ್ರವ ತ್ಯಾಜವನ್ನು ಕಪ್ಪು ನೀರು ಎಂದು ಕರೆಯಲಾಗುತ್ತದೆ.

ಮದಕರಿಪುರ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಪಿಳ್ಳೇಕೆರನಹಳ್ಳಿ ಗ್ರಾಮದಲ್ಲಿ ದ್ರವತ್ಯಾಜ್ಯ ವಿಲೇವಾರಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಸ್ತೆಗಳಲ್ಲಿ, ಚರಂಡಿಗಳಲ್ಲಿ ಹರಿದು ಗ್ರಾಮದ ಮಲಿನತೆಗೆ ಕಾರಣವಾಗಿದ್ದ  ಸ್ಥಳಗಳಾದ ಮಾರಮ್ಮನ ದೇವಸ್ಥಾನದ ಆವರಣ ಮತ್ತು ಎಸ್.ಆರ್.ಎಸ್.ಕಾಲೇಜು ಹಿಂಭಾಗ ಮತ್ತು ಮುತ್ಯಾಲಪ್ಪನ ಮನೆಯ ಆವರಣದ ಬಳಿ ಚರಂಡಿಗೆ ಪೈಪ್ ಲೈನ್‌ ಕಾಮಗಾರಿಯನ್ನು ಗ್ರಾಮ ಪಂಚಾಯಿತಿಯಿಂದ ನಿರ್ಮಾಣ ಮಾಡಲಾಗಿದೆ. ಇದರಿಂದ ಗ್ರಾಮದ ರಸ್ತೆಗಳು ಈಗ ವೆಚ್ಛವಾಗಿವೆ. ಅದೇ ರೀತಿ ಮದಕರಿಪುರ ಗ್ರಾಮದಲ್ಲಿ ಸಮರ್ಪಕ ದ್ರವತ್ಯಾಜ್ಯ ವೈಜ್ಞಾನಿಕ ವಿಲೇವಾರಿಗಾಗಿ 4 ರಸ್ತೆಗಳಲ್ಲಿ ಚರಂಡಿಯ ಬದಲಾಗಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಗ್ರಾಮದಲ್ಲಿ ಸ್ವಚ್ಛತೆ ಮನೆಮಾಡಿದೆ.

ಮದಕರಿಪುರ ಗ್ರಾಮ ಪಂಚಾಯತಿಯಲ್ಲಿ  ಅಳವಡಿಸಲಾದ ದ್ರವತ್ಯಾಜ್ಯದ  ವೈಜ್ಞಾನಿಕ ವಿಲೇವಾರಿಯ ಸುಲಭ ವಿಧಾನಗಳು:

ವಿಕೇಂದ್ರಿತ ವ್ಯವಸ್ಥೆ:

ಮದಕರಿಪುರದಲ್ಲಿ ನೀರಿನ ಇಂಗು ಗುಂಡಿಗಳು, ಲೀಚ್‌ಪಿಟ್ (ತೊಟ್ಟಿ)ಗಳನ್ನು ಮನೆಯ ಅಂಗಳ, ಕೈ ತೋಟಗಳಲ್ಲಿ ನಿರ್ಮಿಸಿಕೊಳ್ಳಲಾಗಿದೆ. ಇದಕ್ಕೆ ತಗಲುವ ವೆಚ್ಚವು ಕಡಿಮೆ, ನಿರ್ವಹಣೆಯೂ ಸುಲಭ. ಹೆಚ್ಚಿನ  ಸ್ಥಳದ ಅಗತ್ಯವಿರುವುದಿಲ್ಲ.

ಕೇಂದ್ರಿಕೃತ ವ್ಯವಸ್ಥೆ:

ಚರಂಡಿಗಳ ನಿರ್ಮಾಣ, ಕಲುಷಿತ ಜಲ ಸ್ಥಿರೀಕರಣ ಕೊಳಗಳ ನಿರ್ಮಾಣ ಇದಕ್ಕೆ ತಗಲುವ ವೆಚ್ಚ ಅಧಿಕವಾಗಿದ್ದು, ನಿರ್ವಹಣೆ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯಿತಿ ನಿರ್ವಹಿಸಬೇಕು. ಹೆಚ್ಚಿನ ಪ್ರಮಾಣದ ದ್ರವತ್ಯಾಜ್ಯ ನಿರ್ವಹಣೆ ಸಾಧ್ಯವಿದೆ. ಈ ವಿಧಾನಕ್ಕೆ ಹೆಚ್ಚಿನ ಸ್ಥಳಾವಕಾಶ ಅಗತ್ಯವಿದೆ.

ಮದಕರಿಪುರಗ್ರಾ.ಪಂ.ನಲ್ಲಿ ಕಪ್ಪು ನೀರು ನಿರ್ವಹಣೆಗೆ ಕೈಗೊಳ್ಳಲಾದ ಕ್ರಮಗಳು:

೧.  ಬಯಲು ಬಹಿರ್ದೆಸೆಯಿಂದ ಕಪ್ಪು ನೀರಿನ ಉತ್ಪಾದನೆಯನ್ನು ಸ್ಥಗಿತಗೊಳಿಸುವುದು.

೨.  ಕಪ್ಪು ನೀರು ತೆರೆದ  ಚರಂಡಿಗಳಿಗೆ ಹರಿಯದಂತೆ ತಡೆಯುವುದು.

೩.  ಕಪ್ಪು ನೀರು, ನೀರಿನ ನೈಸರ್ಗಿಕ ಸಂಪನ್ಮೂಲಗಳೊಂದಿಗೆ  ಸೇರ್ಪಡೆಯಾಗದಂತೆ ತಡೆಯುವುದು.

೪.  ವೈಯಕ್ತಿಕ  ಲೀಚ್‌ಪಿಟ್‌ಗಳನ್ನು ನಿರ್ಮಿಸಿಕೊಂಡು ಕಪ್ಪು ನೀರಿನ ಪರ್ಯಾಯ  ಬಳಕೆಯಾಗುವಂತೆ ಮಾಡುವುದು.

ಮದಕರಿಪುರ ಗ್ರಾ.ಪಂ. ನಲ್ಲಿ ಬೂದು ನೀರು ನಿರ್ವಹಣೆಗೆ ಕೈಗೊಳ್ಳಲಾದ  ಕ್ರಮಗಳು:

೧.  ಕನಿಷ್ಟ ಮಟ್ಟದಲ್ಲಿ ಬೂದು ನೀರಿನ ತ್ಯಾಜ್ಯವನ್ನು ಉತ್ಪಾದನೆ ಮಾಡುವುದು.

೨.  ಶುದ್ಧ ನೀರಿನ ಮಿತವಾದ ಬಳಕೆ.

೩.  ತೆರೆದ ಚರಂಡಿಗಳಿಂದ ಹೊರಗೆ ಹರಿಯದಂತೆ ತಡೆಯುವುದು.

೪.  ಬೂದು ನೀರನ್ನು ಸರಿಯಾಗಿ ವೈಯಕ್ತಿಕ ಮನೆಯ ಕೈತೋಟಗಳಲ್ಲಿ ಬಳಸುವುದು (ಸಂಸ್ಕರಿಸುವುದು).

ಮದಕರಿಪುರಗ್ರಾಮ  ಪಂಚಾಯತಿಯಲ್ಲಿ ದ್ರವತ್ಯಾಜ್ಯ ನಿರ್ವಹಣೆ ಕ್ರಮ ಕೈಗೊಂಡ ನಂತರ ಪರಿಸರದಲ್ಲಾದ ಬದಲಾವಣೆ. 

  • ೧.  ತೇವ ರಹಿತ ಸ್ವಚ್ಛ ಪರಿಸರ
  • ೨.  ಸೊಳ್ಳೆ ರಹಿತ ಪರಿಸರ
  • ೩.  ಆರೋಗ್ಯಕರ  ಸ್ವಚ್ಛ ಪರಿಸರ
  • ೪.  ಹಂದಿಗಳು ರಹಿತ ಸ್ವಚ್ಛ ಪರಿಸರ

ಮನೆ ಹಂತದಲ್ಲಿ ದ್ರವತ್ಯಾಜ್ಯ ನಿರ್ವಹಣೆ:

ಮ್ಯಾಜಿಕ್ ಪಿಟ್:

೧.  ಗಾಳಿ ರಹಿತ ಸ್ಥಿತಿ

೨.  ನಿಗದಿತ ಅವಧಿಯಲ್ಲಿ ಸ್ವಚ್ಛತೆ ಅವಶ್ಯಕ

೩.  ಗ್ರಾವೆಲ್  ಬಳಕೆ ಮಾಡುವುದು

ಲೀಚ್ ಪಿಟ್:

೧.  ಚಿಕ್ಕದಾದ ಗುಂಡಿ ತೆಗೆಯುವುದು

೨.  ಸಿಮೆಂಟ್‌ನಲ್ಲಿ ತೊಟ್ಟಿಯ ನಿರ್ಮಾಣ

೩.  ಗ್ರಾವೆಲ್‌ನ್ನು ಬಳಕೆ ಮಾಡಬೇಕಾಗಿಲ್ಲ.

೪.  ನೀರು ನಿಲುಗಡೆಯಾಗುವುದಿಲ್ಲ.

೫.  ನಿರ್ವಹಣೆ ರಹಿತ

ಸಮುದಾಯ ಹಂತದಲ್ಲಿ ದ್ರವತ್ಯಾಜ್ಯ ನಿರ್ವಹಣೆ:

೧.  ಸಮುದಾಯ ಹಂತದಲ್ಲಿ ಲೀಚ್‌ಪಿಟ್‌ಗಳನ್ನು ನಿರ್ಮಿಸಿ ಹಲವಾರು ಮನೆಗಳಿಗೆ ಸೇರಿಸಿ ಒಂದೆಡೆ ನಿರ್ಮಿಸುವುದು. ಸಂಪರ್ಕ ಕಲ್ಪಿಸುವುದು

೨.  ತ್ಯಾಜ್ಯ ಸ್ಥಿರ ಕೊಳಗಳ ನಿರ್ಮಾಣ.

JJM Karnataka

ಮದಕರಿಪುರ ಗ್ರಾಮ ಪಂಚಾಯತಿಯಲ್ಲಿ  ನೀರಿನ ನಿರ್ವಹಣೆಗೆ ಅನುಸರಿಸಿದ ವೈಜ್ಞಾನಿಕ ಮಾದರಿ:

 6,381 total views,  3 views today

WhatsApp chat