Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಮಲೆನಾಡಿನ ಮಧ್ಯಭಾಗಕ್ಕೆ ಹೊಂದಿಕೊಂಡಂತಿರುವ ದಾವಣಗೆರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನ್ಯಾಮತಿ ತಾಲೂಕು ಪಂಚಾಯಿತಿಗೆ ಸೇರುವ ಚೀಲೂರು ಗ್ರಾಮ ಪಂಚಾಯಿತಿಯು ತನ್ನ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ “ದಾವಣಗೆರೆ ಜಿಲ್ಲೆಯಲ್ಲಿಯೇ ಮಾದರಿ ಸ್ವಚ್ಛ ಸಂಕೀರ್ಣ ಘಟಕವನ್ನು ನಿರ್ಮಿಸಿದೆ.ಯಾವುದೇ ಸಮಸ್ಯೆಗಳಿಲ್ಲದೇ ಪ್ರತಿನಿತ್ಯವು ಗ್ರಾಮಗಳ ಕುಟುಂಬಗಳಿಂದ ಮತ್ತು ಅಂಗಡಿಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿದ್ದೆ. ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಸಂಜೀವಿನಿ ಒಕ್ಕೂಟವು ಯಶಸ್ವಿಯಾಗಿ ಇದನ್ನು ನಿರ್ವಹಣೆ ಮಾಡುತ್ತಾ ಒಂದು ವರ್ಷ ಪೂರೈಸಿದೆ.

ಗ್ರಾಮ ಪಂಚಾಯಿತಿಯ ಸ್ವಚ್ಛ ಸಂಕೀರ್ಣ ಘಟಕದಲ್ಲಿನ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಸಂಜೀವಿನಿ ಒಕ್ಕೂಟದ ತರಬೇತಿ ಪಡೆದ ಸದಸ್ಯರು ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಸಂಜೀವಿನಿ ಒಕ್ಕೂಟದ ಮಹಿಳಾ ಸಿಬ್ಬಂದಿ ನಿರ್ವಹಿಸುತ್ತಿದ್ದು, ಪ್ರತಿದಿನ ಗ್ರಾಮಗಳ ಮನೆಗಳಿಂದ ಸ್ವಚ್ಛವಾಹಿನಿಯ ಮೂಲಕ ತ್ಯಾಜ್ಯವನ್ನು ಸಂಗ್ರಹಿಸಿಕೊಂಡು ತಂದು ನಂತರ ಸ್ವಚ್ಛ ಸಂಕೀರ್ಣ ಘಟಕದಲ್ಲಿ ತ್ಯಾಜ್ಯವನ್ನು ಹಸಿ ಕಸ, ಒಣ ಕಸವನ್ನಾಗಿ ವಿಂಗಡಿಸಿ, ನಂತರ ಒಣ ಕಸದಲ್ಲಿರುವ ಹಾಲಿನ ಕವರ್ ,ಅಡುಗೆ ಎಣ್ಣೆ ಕವರ್, ಗ್ಯಾರೇಜ್ ವೇಸ್ಟ್ ಕ್ಲಾತ್ ಇವುಗಳನ್ನೆಲ್ಲಾ ಸೂಕ್ತವಾಗಿ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತದೆ.

ತ್ಯಾಜ್ಯ ವಿಂಗಡಣೆಯ ಕೆಲಸ ಕಾರ್ಯಗಳ ಜೊತೆಗೆ ಘಟಕದಲ್ಲಿ ಸುಂದರ ವಾತಾವರಣ ನಿರ್ಮಾಣ ಮಾಡಲು ಉದ್ಯಾನವವನ್ನುನಿರ್ಮಿಸಲಾಗಿದೆ. ಈ ಉದ್ಯಾನವನದ ನಿರ್ವಹಣೆಯನ್ನು ಸಹ ಸಂಜೀವಿನಿ ಮಹಿಳಾ ಒಕ್ಕೂಟದ ಸಿಬ್ಬಂದಿಯೇಮಾಡುತ್ತಿದ್ದಾರೆ. ಸ್ವಚ್ಛ ಸಂಕೀರ್ಣ ಘಟಕದ ತ್ಯಾಜ್ಯ ವಿಂಗಡಣೆಯ ಕೆಲಸದ ಜೊತೆಯಲ್ಲಿಯೇ ಘಟಕದ ಆದಾಯ ಹೆಚ್ಚಿಸುವ ಸಲುವಾಗಿಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಸ್ವಚ್ಛ ಸಂಕೀರ್ಣ ಘಟಕದಲ್ಲಿ ಕೈತೋಟ ನಿರ್ಮಿಸಿಕೊಂಡು ತ್ಯಾಜ್ಯವನ್ನು ಪುನರ್ ಬಳಕೆ ಮಾಡುವ ಸಲುವಾಗಿ ಸ್ವಚ್ಛಸಂಕೀರ್ಣ ಘಟಕದಲ್ಲಿ ಶೇಖರಣೆಯಾಗುವ ಅಡುಗೆ ಎಣ್ಣೆಕವರ್, ಪ್ಲಾಸ್ಟಿಕ್ ಕವರ, ಹಾಲಿನ ಕವರ್‌ಗಳನ್ನು ಬಳಕೆಮಾಡಿಕೊಂಡು ಅಡಿಕೆ ಸಸಿಗಳು, ಹಣ್ಣಿನ ಸಸಿಗಳು, ತರಕಾರಿ, ಸೊಪ್ಪು ಇತ್ಯಾದಿಗಳನ್ನು ಬೆಳೆದು ಘಟಕದ ಆದಾಯವನ್ನು ಹೆಚ್ಚಿಸುವಲ್ಲಿಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗ್ರಾಮಗಳ ಪ್ರತಿ ಮನೆಗಳಿಂದ ಪ್ರತಿ ತಿಂಗಳು ತ್ಯಾಜ್ಯ ನಿರ್ವಹಣೆಯ ಶುಲ್ಕ ಸಂಗ್ರಹಿಸುವುದು, ಅವುಗಳಿಗೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆಯನ್ನು ಕೂಡ ಸಂಜೀವಿನಿ ಮಹಿಳಾ ಒಕ್ಕೂಟದ ಸಿಬ್ಬಂದಿ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.ಸ್ವಚ್ಛಸಂಕೀರ್ಣ ಘಟಕಕ್ಕೆ ವಿವಿಧ ತಾಲೂಕು, ಜಿಲ್ಲೆಗಳಿಂದ ವೀಕ್ಷಕರು ಬರುತ್ತಿದ್ದು ವೀಕ್ಷಕರಿಗೆ ಸೂಕ್ತ ಮಾಹಿತಿಯನ್ನುಸಂಜೀವಿನಿ ಮಹಿಳಾ ಒಕ್ಕೂಟದ ಸಿಬ್ಬಂದಿ ನೀಡುತ್ತಾರೆ. ಇದುವರೆಗೂ ಸುಮಾರು 75ಕ್ಕೂ ಅಧಿಕ ಗ್ರಾಮ ಪಂಚಾಯಿತಿಯವರು ಭೇಟಿ ನೀಡಿದ್ದು ಮಾಹಿತಿ ಪಡೆದುಕೊಂಡಿರುತ್ತಾರೆ.

ತ್ಯಾಜ್ಯ ನಿರ್ವಹಣೆಯ ಜೊತೆಗೆ ಕೆಲವು ತ್ಯಾಜ್ಯಗಳನ್ನು ಬಳಸಿಕೊಂಡು ಅಲಂಕಾರಿಕ ವಸ್ತುಗಳ ತಯಾರಿಕೆ ಹಾಗೂ ಹಸಿ ತ್ಯಾಜ್ಯಗಳಿಂದಕೆಲವು ಜೈವಿಕ ಸಾವಯವ ರಾಸಾಯನಿಕಗಳು, ಟೀ ಕಾಂಪೋಸ್ಟ್ ಗೊಬ್ಬರ , ಉಳಿದ ಆಹಾರ ಪದಾರ್ಥಗಳಿಂದ ಕಾಂಪೋಸ್ಟ್ ಗೊಬ್ಬರವನ್ನು ತಾವೇ ಸ್ವತಃ ಘಟಕದಲ್ಲಿ ಸಂಜೀವಿನಿ ಒಕ್ಕೂಟದ ಸಿಬ್ಬಂದಿ ತಯಾರಿಸಿ ಕೈತೋಟ ಉದ್ಯಾನವನಗಳಿಗೆ ಬಳಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.

ಅಲ್ಲದೇ ಕೆಲವು ಸಣ್ಣ ಪುಟ್ಟ ಪ್ಲಾಸ್ಟಿಕ್ ಬಳಸಿ ಇಕೋ ಬ್ರಿಕ್ಸ್ ಎಂಬ ಪ್ಲಾಸ್ಟಿಕ್ ಇಟ್ಟಿಗೆ ತಯಾರಿಕೆ ಇನ್ನೂ ಮುಂತಾದ ಅನೇಕ ತ್ಯಾಜ್ಯಪುನರ್ ಬಳಕೆ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮಗಳು,ತ್ಯಾಜ್ಯವಿಂಗಡಣೆ ಕುರಿತು ಮಾಹಿತಿ ನೀಡುವುದು ಮುಂತಾದ ಕೆಲಸ ಕಾರ್ಯಗಳನ್ನು ಗ್ರಾಮ ಪಂಚಾಯಿತಿಯೊಂದಿಗೆ ಒಗ್ಗೂಡಿ ಸಂಜೀವಿನಿಒಕ್ಕೂಟದ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಒಟ್ಟಾರೆಯಾಗಿ ಗ್ರಾಮ ಪಂಚಾಯಿತಿ ಹಾಗೂ ಸಂಜೀವಿನಿ ಒಕ್ಕೂಟದಘಟಕ ನಿರ್ಮಾಣ ಹಾಗೂ ನಿರ್ವಹಣೆಯಿಂದ ಗ್ರಾಮಪಂಚಾಯಿತಿ ಗ್ರಾಮಗಳಲ್ಲಿ ಸ್ವಚ್ಛತೆಯ ವಾತಾವರಣ ನಿರ್ಮಾಣವಾಗುತ್ತಿದ್ದು, ಪ್ಲಾಸ್ಟಿಕ್ ಭೂಮಿಗೆ ಸೇರುವುದು ತಡೆಯಲಾಗುತ್ತಿದ್ದುಗ್ರಾಮಗಳ ಬೀದಿಗಳು,ಕಾಲುವೆಗಳು ಸ್ವಚ್ಛವಾಗಿವೆ. ಸ್ವಚ್ಛ ಸಂಕೀರ್ಣ ಘಟಕದ ನಿರ್ಮಾಣ ಮತ್ತು ಕೆಲಸಕಾರ್ಯಗಳ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಗ್ರಾಮ ಪಂಚಾಯಿತಿ ಹಾಗೂ ಸಂಜೀವಿನಿ ಒಕ್ಕೂಟದ ಘಟಕದ ಉತ್ತಮನಿರ್ವಹಣೆಯಿಂದ ಚೀಲೂರು ಸ್ವಚ್ಛ ಸಂಕೀರ್ಣ ಘಟಕವು ದಾವಣಗೆರೆ ಜಿಲ್ಲೆಯಲ್ಲಿಯೇ ಒಂದು ಮಾದರಿ ತ್ಯಾಜ್ಯ ನಿರ್ವಹಣಾ ಸ್ವಚ್ಛಸಂಕೀರ್ಣ ಘಟಕವಾಗಿ ಹೊರಹೊಮ್ಮಿದೆ.

 3,513 total views,  3 views today

WhatsApp chat