Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಸುಸ್ಥಿರ ಬೂದು ನೀರು ನಿರ್ವಹಣೆಗೆ ಮೊದಲ ಹೆಜ್ಜೆ

ನಿರ್ಮಲ ಹಾವೇರಿ” ಜಿಲ್ಲೆಯ ವಿನೂತನ ಕಾರ್ಯಕ್ರಮವಾಗಿದ್ದು, ನದಿಗಳಿಗೆ ಸಾಂಪ್ರದಾಯಿಕ ಜಲಮೂಲಗಳಿಗೆ ಸೇರುವ ಬೂದು ನೀರನ್ನು ಸಂಸ್ಕರಿಸುವುದರಿಂದ ಬೂದು ನೀರಿನ ಗುಣಮಟ್ಟವನ್ನು ಹೆಚ್ಚಿಸುವುದರಿಂದ, ಜಲ ಮೂಲಗಳ ಆರೋಗ್ಯವನ್ನು ಮತ್ತು ಪರಿಸರ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸುವುದು. ಬೂದು ನೀರು ಸಂಸ್ಕರಿಸುವ ವೈಜ್ಞಾನಿಕ ಮತ್ತು ತಾಂತ್ರಿಕ ಸಂಯೋಜನೆಗೆ ಮಹತ್ವ ನೀಡುತ್ತದೆ. ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ “ನಿರ್ಮಲ ಹಾವೇರಿ”. ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ನಾಲ್ಕು ಹಂತಗಳಲ್ಲಿ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮೊದಲನೇ ಹಂತದಲ್ಲಿ ಸುಮಾರು 55 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಗ್ರಾಮೀಣ ಭಾಗದ ಜನರ ಶುಚಿತ್ವ ಹಾಗೂ ಜೀವನ ಮಟ್ಟದ ಸುಧಾರಣೆಗಾಗಿ ಸುತ್ತಮುತ್ತಲಿನ ಪರಿಸರ ಮತ್ತು ಬೂದು ನೀರಿನ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಮಹಾತ್ಮಗಾಂಧಿ ನರೇಗಾ ಯೋಜನೆ ಮತ್ತು ಸ್ವಚ್ಛ ಭಾರತ ಯೋಜನೆಯ ಸಹಭಾಗಿತ್ವದಡಿ ಯೋಜನೆಗಳನ್ನು ರೂಪಿಸುವುದು ಅವಶ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಜನರು ಬಚ್ಚಲು ನೀರು, ಬಟ್ಟೆಗಳನ್ನು ತೊಳೆದ ನೀರು ಹಾಗೂ ಪಾತ್ರೆಗಳನ್ನು ತೊಳೆದ ನೀರನ್ನು ಚರಂಡಿಗಳಿಗೆ ಬಿಡುತ್ತಿದ್ದು, ಚರಂಡಿಗಳು ರೋಗಗಳ ತಾಣವಾಗುತ್ತಿದ್ದು, ಈ ಮೂಲಕ ಬೂದು ನೀರು ನದಿ ಸೇರುತ್ತಿರುವುದು ನದಿಯ ಮಲಿನಕ್ಕೆ ಕಾರಣವಾಗುತ್ತಿದೆ.

ಮುಂದುವರೆದು, ಗ್ರಾಮೀಣ ಭಾಗದಲ್ಲಿ ಹಲವಾರು ಯೋಜನೆಯಡಿ ಸಾಕಷ್ಟು ಚರಂಡಿ ನಿರ್ಮಾಣಗೊಂಡಿದ್ದು, ಕೆಲವೊಂದು ಓಣಿಗಳಲ್ಲಿ ಚರಂಡಿ ನಿರ್ಮಾಣ ಅಪೂರ್ಣಗೊಂಡಿರುತ್ತವೆ. ಅಲ್ಲದೆ ಕೆಲವು ಭಾಗಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲದೆ ಇರುವುದು ಕಂಡುಬಂದಿದ್ದು, ನರೇಗಾ ಯೋಜನೆಯಡಿ ಚರಂಡಿಗಳನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಇದಕ್ಕಾಗಿ ಪ್ರತಿ ಗ್ರಾಮದಲ್ಲಿ ಸಮೀಕ್ಷೆಯನ್ನು ಕೈಗೊಂಡು ಅವಶ್ಯಕತೆ ಇದ್ದಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡುವುದು. ತಗ್ಗು ಪ್ರದೇಶಗಳಿಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಭೌಗೋಳಿಕವಾಗಿ ಚರಂಡಿ ನಿರ್ಮಾಣ ಮಾಡುವುದರಿಂದ ಗ್ರಾಮಗಳಿಗೆ ಕಲುಷಿತ ನೀರು ಹರಿದು ಹೋಗುವುದು ತಪ್ಪುತ್ತದೆ. ಅಲ್ಲದೇ ಗ್ರಾಮದಲ್ಲಿ  ಸ್ವಚ್ಛತೆಯನ್ನು ಕಾಣಬಹುದು. ಇಂತಹ ಅಂಶಗಳನ್ನು ಒಳಗೊಂಡ ವಿನೂತನ ಕಾರ್ಯಕ್ರಮವೇ “ನಿರ್ಮಲ ಹಾವೇರಿ”. ಸದರಿ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಂತ ಹಂತವಾಗಿ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಮೊದಲ ಹಂತವಾಗಿ ಕೋಡಿಯಾಲ ಗ್ರಾಮ ಪಂಚಾಯತಿಯ ಕೋಡಿಯಾಲ ಗ್ರಾಮದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಯೋಜನೆಯ ಮುಖ್ಯ ಉದ್ದೇಶಗಳು:
  • ಗ್ರಾಮೀಣ ಪ್ರದೇಶದ ನೈರ್ಮಲ್ಯವನ್ನು ವೃದ್ಧಿಸುವುದು.
  • ವೈಯಕ್ತಿಕ ಬಚ್ಚಲು ಗುಂಡಿಗಳ ನಿರ್ಮಾಣ ಮಾಡಿ ಗ್ರಾಮಗಳನ್ನು ಸಂಪೂರ್ಣವಾಗಿ ಕೊಳಚೆ ನೀರು ಮುಕ್ತ ಮಾಡುವುದು ಮತ್ತು ಸಮುದಾಯ ಬಚ್ಚಲು ಗುಂಡಿಯನ್ನು ನಿರ್ಮಾಣ ಮಾಡುವುದು.
  • ಬೂದು ನೀರು ನಿರ್ವಹಣೆಗಾಗಿ ಚರಂಡಿಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದು.
  • ಸಾಂಪ್ರದಾಯಿಕ ಜಲಮೂಲಗಳ ಸಂರಕ್ಷಣೆ ಮತ್ತು ನೀರಿನ ಗುಣಮಟ್ಟವನ್ನು ಸುಧಾರಿಸುವುದು.
  • ಘನ ತ್ಯಾಜ್ಯ ನಿರ್ವಹಣೆ ಮಾಡುವುದು.
ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಕೆಳಕಂಡ ಹಂತಗಳಲ್ಲಿ ರೂಪುರೇಷೆ ತಯಾರಿಸಲಾಗಿದೆ.
  • ಗ್ರಾಮಗಳ ಸಮೀಕ್ಷೆ
  • ಸಮೀಕ್ಷೆಯ ಫಲಿತಾಂಶ
  • ಆರ್ಥಿಕ ಒಗ್ಗೂಡಿಸುವಿಕೆ
  • ವಿಸ್ತೃತ ಯೋಜನಾ ವರದಿ ತಯಾರಿಕೆ (DPR)
  • ಯೋಜನೆಯ ಅನುಷ್ಠಾನ
  • ಫಲಿತಾಂಶ ಮೌಲ್ಯಮಾಪನ

ಪ್ರಸ್ತುತ 10 ಗ್ರಾಮ ಪಂಚಾಯಿತಗಳಿಗೆ ಡಿ.ಪಿ.ಆರ್ ತಯಾರಿಸಿಕೊಳ್ಳಲಾಗಿದ್ದು, ಅದರಲ್ಲಿ ಮೊದಲ ಹೆಜ್ಜೆಯಾಗಿ ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಗ್ರಾಮ ಪಂಚಾಯಿತಿಯಲ್ಲಿ ತುಂಗಭದ್ರಾ ನದಿಯ ಪಕ್ಕದಲ್ಲಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಗ್ರಾಮದಲ್ಲಿ ಉತ್ಪತ್ತಿಯಾಗುವ ಬೂದು ನೀರನ್ನು ಸಂಪೂರ್ಣವಾಗಿ ಶುದ್ಧೀಕರಿಸಿ, ಸುರಕ್ಷಿತ ವಿಲೇವಾರಿ ಮಾಡುವುದು ಯೋಜನೆಯ ಉದ್ದೇಶವಾಗಿದೆ.

ಗ್ರಾಮವನ್ನು ಸಮೀಕ್ಷೆ ಮಾಡಲಾಗಿ ಗ್ರಾಮವು ತುಂಗಭದ್ರಾ ನದಿಯ ತಟದಲ್ಲಿದ್ದು, ಸುಮಾರು 05 ಸ್ಥಳಗಳಲ್ಲಿ ಗ್ರಾಮದಲ್ಲಿ ಉತ್ಪತ್ತಿಯಾಗುವ ಬೂದು ನೀರು ನದಿಯನ್ನು ಸೇರುತ್ತದೆ. ಈ ಐದು ಸ್ಥಳಗಳ ಪೈಕಿ ಒಂದು ಸ್ಥಳದಲ್ಲಿ (ಪುಣ್ಯಕೋಟಿ ಮಠದ ಹತ್ತಿರ) ಸುಮಾರು 360 ಮನೆಗಳಿಂದ 1,622 ಜನಸಂಖ್ಯೆ ಹೊಂದಿರುವ ಪ್ರದೇಶದಿಂದ 56,770 ಲೀಟರ್ ಬೂದು ನೀರು ಉತ್ಪತ್ತಿಯಾಗುತ್ತಿದ್ದು, ಅದಕ್ಕೆ ಶೇ.50 ರಷ್ಟು ಹೆಚ್ಚಿಗೆ ಅಂದರೆ ಸುಮಾರು 85,000 ಲೀಟರ್ ನಷ್ಟು ಬೂದು ನೀರನ್ನು Sedimentation Pond, Stabilization Pond ಮತ್ತು Constructed Wetland ಮೂಲಕ ಸಂಸ್ಕರಿಸಲು ಉದ್ದೇಶಿಸಲಾಗಿರುತ್ತದೆ. ಈಗಾಗಲೇ ಕಾಮಗಾರಿಯು ಮುಕ್ತಾಯಗೊಳ್ಳುವ ಹಂತಕ್ಕೆ ತಲುಪಿರುತ್ತದೆ.( 18-6-2021 ರವರೆಗೆ)

ಬೂದು ನೀರು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುವುದರಿಂದ ಗ್ರಾಮದ ನೈರ್ಮಲ್ಯತೆಯನ್ನು ಹೆಚ್ಚಿಸುವುದು ಮತ್ತು ಸಾಂಪ್ರದಾಯಿಕ ಜಲಮೂಲಗಳಿಗೆ ಕೊಳಚೆ ನೀರು ಸೇರುವುದನ್ನು ನಿಯಂತ್ರಿಸುವುದರಿಂದ ಜಲಮೂಲಗಳು ಮತ್ತು ಶ್ರೀಸಾಮಾನ್ಯರ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗುತ್ತದೆ.

 5,398 total views,  4 views today

WhatsApp chat