Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಜಲ ಜೀವಾಮೃತ. ಜೀವನಾಧಾರ. ಮಾನವನ ಜೀವನದುದ್ದಕ್ಕೂ ಪ್ರತಿಯೊಂದು ಹಂತದಲ್ಲೂ ನೀರು ಬಳಕೆಯಾಗುತ್ತಲೇ ಇರುತ್ತದೆ. ಆದರೆ ಹೀಗೆ ಬಳಕೆಯಾದ ನೀರನ್ನು ನಾವು ಹೇಗೆ ವಿಲೇವಾರಿ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ. ಬಹಳಷ್ಟು ಬರಪೀಡಿತವಾದ ತಾಲ್ಲೂಕುಗಳನ್ನು ಹೊಂದಿರುವ ನಮ್ಮ ನಾಡಿನಲ್ಲಿ ಅಂತರ್ಜಲ ಕುಸಿತವಾಗಿರುವುದು ಎಚ್ಚರಿಕೆಯ ಸೂಚನೆ. ಅಭಿವೃದ‍್ಧಿ ಚಟುವಟಿಕೆಗಳು ನೆಲವನ್ನು ಬರಡಾಗಿಸುವ ಮಟ್ಟಿಗೆ ಬೆಳೆಯುತ್ತಿರುವ  ಈ ಸಂದರ್ಭದಲ್ಲಿ ಜಲ ಸಂರಕ್ಷಣೆಯ ಜೊತೆಗೆ ಅಂತರ್ಜಲ ಮಟ್ಟವನ್ನೂ ಹೆಚ್ಚಿಸಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ.

ಸುಸ್ಥಿರ ನೈರ್ಮಲ್ಯ ಸಾಧಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿ ತ್ಯಾಜ್ಯ ನಿರ್ವಹಣೆ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದೆ. ನಾಡಿನಾದ್ಯಂತ ಘನ ತ್ಯಾಜ್ಯ ನಿರ್ವಹಣೆ ಚಟುವಟಿಕೆಗಳು ಹಂತ ಹಂತವಾಗಿ ನಡೆಯುತ್ತಿವೆ. ಇದರ ಜೊತೆ ಜೊತೆಗೆ ಕೈಗೊಳ್ಳಲಾದ ಕಾರ್ಯಕ್ರಮವೆಂದರೆ ದ್ರವ ತ್ಯಾಜ್ಯ ನಿರ್ವಹಣೆ.

ಮಾನವನ ಬಳಕೆಯಿಂದ ಕಲುಷಿತವಾದ ಮತ್ತು ಬಳಕೆಗೆ ಯೋಗ್ಯವಲ್ಲದ ಯಾವುದೇ ನೀರನ್ನು ದ್ರವ ತ್ಯಾಜ್ಯವೆಂದು ಕರೆಯುತ್ತೇವೆ. ದ್ರವತ್ಯಾಜ್ಯದ ಮಾಲಿನ್ಯಕಾರಕಗಳು ಹಲವು; ಜಿಡ್ಡು, ತೈಲಗಳು, ಸೂಕ್ಷ್ಮಾಣು ಜೀವಿಗಳು, ಲೋಹಗಳು, ಜೈವಿಕ ವಸ್ತುಗಳು, ರಾಸಾಯನಿಕಗಳಾದ ರಂಜಕ, ಸಾರಜನಕ, ಹೈಡ್ರೋಕಾರ್ಬನ್ ಮುಂತಾದ ಹತ್ತು ಹಲವಾರು ವಸ್ತುಗಳು ನೀರು ಕಲುಷಿತವಾಗಲು ಕಾರಣವಾಗಿವೆ.

ದ್ರವ ತ್ಯಾಜ್ಯವನ್ನು ಮನೆ ಹಂತದಲ್ಲಿ ಎರಡು ವಿಧಗಳಾಗಿ ವಿಂಗಡಿಸಬಹುದು:

1. ಬೂದು ನೀರು: ಬೂದು ನೀರು ಮನೆಯ ಕೆಲಸಗಳಿಗೆ ಬಳಕೆಯಾದ, ಶೌಚಾಲಯದ ಸಂಪರ್ಕಕ್ಕೆ ಬರದ ನೀರು.
ಉದಾಹರಣೆಗೆ: ಕೈತೊಳೆಯಲು, ಸ್ನಾನಕ್ಕೆ, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಅಡುಗೆಗೆ, ಸ್ವಚ್ಛತೆಗೆ ಬಳಸಿದ ನೀರನ್ನು ಬೂದು ನೀರು ಎಂದು ಕರೆಯಲಾಗುತ್ತದೆ. ಗೃಹಬಳಕೆಯ ನೀರಿನಲ್ಲಿ ಅಂದಾಜು 65-70% ಬೂದು ನೀರು ಉತ್ಪಾದನೆಯಾಗುತ್ತದೆ.

2. ಕಪ್ಪು ನೀರು: ಶೌಚಾಲಯದಿಂದ ಹೊರಬರುವ ನೀರನ್ನು ಕಪ್ಪು ನೀರು ಎಂದು ಕರೆಯುತ್ತಾರೆ. ಗೃಹೋತ್ಪಾದಿತ ದ್ರವ ತ್ಯಾಜ್ಯ ಸುಮಾರು 15% ಕಪ್ಪು ನೀರನ್ನು ಹೊಂದಿರುತ್ತದೆ.

ದ್ರವ ತ್ಯಾಜ್ಯದ ಸಮರ್ಪಕ ವಿಲೇವಾರಿ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ದ್ರವ ತ್ಯಾಜ್ಯದ ಅಸಮರ್ಪಕ ವಿಲೇವಾರಿ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಬಲ್ಲದು. ಅದರ ಕೆಲವು ಪ್ರಮುಖ ದುಷ್ಪರಿಣಾಮಗಳೆಂದರೆ:

  1. ಮನೆಯ ಸುತ್ತಮುತ್ತ, ಗ್ರಾಮದಲ್ಲಿ ನೈರ್ಮಲ್ಯ ಕಡಿಮೆಯಾಗಿ ಮಾಲಿನ್ಯಕ್ಕೆ ಕಾರಣವಾಗುತ್ತದೆ.
  2. ನಿಂತ ನೀರಿನಲ್ಲಿ ಸೊಳ್ಳೆ, ನೊಣ ಮುಂತಾದ ಕ್ರಿಮಿಗಳು ಉತ್ಪತ್ತಿಯಾಗಿ ರೋಗಗಳು ಹೆಚ್ಚಾಗುತ್ತವೆ.
  3. ಕಪ್ಪು ನೀರು ಸಮರ್ಪಕವಾಗಿ ವಿಲೇವಾರಿಯಾಗದಿದ್ದಲ್ಲಿ ಮಲದ ಸಂಪರ್ಕದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
  4. ಜಲಮೂಲಗಳಲ್ಲಿ ದ್ರವ ತ್ಯಾಜ್ಯ ಮಿಶ್ರಿತವಾದಾಗ ಜಲಮೂಲಗಳು ಕಲುಷಿತವಾಗುತ್ತವೆ ಮತ್ತು ಜಲಚರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.
  5. ದ್ರವ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಮಾಲಿನ್ಯಕಾರಕಗಳು ಮಣ್ಣಿನೊಂದಿಗೆ ಬೆರೆತು ಮಣ್ಣಿನ ಮಾಲಿನ್ಯ ಉಂಟಾಗುತ್ತದೆ.
  6. ಮಾಲಿನ್ಯಕಾರಕಗಳು ಆಹಾರ ಸರಪಳಿಯೊಳಗೆ ಸೇರಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
  7. ಕಪ್ಪು ನೀರನ್ನು ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ ಬಯಲು ಬಹಿರ್ದೆಸೆಯ ಸಾಧ್ಯತೆಗಳು ಹೆಚ್ಚಾಗುವ ಸಂಭವವಿರುತ್ತವೆ.

ಪರಿಸರಕ್ಕಾಗಲೀ, ಆರೋಗ್ಯಕ್ಕಾಗಲೀ ತೊಂದರೆಯಾಗದಿರಲು ದ್ರವತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಅಗತ್ಯ. ಮನೆಹಂತದಲ್ಲಿ ಮತ್ತು ಸಮುದಾಯ ಹಂತದಲ್ಲಿ ಬೂದು ನೀರು ಮತ್ತು ಕಪ್ಪು ನೀರನ್ನು ನಿರ್ವಹಿಸುವುದು ಅವಶ್ಯಕ.

ಮನೆ ಹಂತದಲ್ಲಿ ಬೂದು ನೀರನ್ನು ನಿರ್ವಹಿಸಲು ಇರುವ ವಿಧಾನಗಳೆಂದರೆ:

ಸಮುದಾಯ ಹಂತದಲ್ಲಿ ಬೂದು ನೀರನ್ನು ನಿರ್ವಹಿಸುವ ವಿಧಾನಗಳೆಂದರೆ:

ಕಪ್ಪು ನೀರಿನ ನಿರ್ವಹಣೆಗೆ ಇರುವ ಆಯ್ಕೆಗಳೆಂದರೆ:

ವಿವಿಧ ರೀತಿಯ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗೃಹೋತ್ಪಾದಿತ ದ್ರವ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಬಹುದು. ಇದರಿಂದ ಜಲ ಸಂರಕ್ಷಣೆಯೂ ಆಗುತ್ತದೆ, ಪರಿಸರ ಸಂರಕ್ಷಣೆಯೂ ಆಗುತ್ತದೆ. ನಮ್ಮ ಜವಾಬ್ದಾರಿಗಳನ್ನು ಅರಿತು ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸೋಣ, ಇತರರಲ್ಲೂ ಜಾಗೃತಿ ಮೂಡಿಸೋಣ.

 6,741 total views,  1 views today

WhatsApp chat