Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

JJM Karnataka

ನೀರು ಮತ್ತು ನೈರ್ಮಲ್ಯ ಸಮಸ್ಯೆಗಳಿಗೆ ಪರಿಹಾರದ ಹಾದಿ

  • ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಬನೂರು ಗ್ರಾಮದಲ್ಲಿ ಚರಂಡಿ ಕಟ್ಟಿಕೊಂಡಿದ್ದರಿಂದ ಗ್ರಾಮದ ಜನರಿಗೆ ಹಲವಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದವು. ಈ ಸಮಸ್ಯೆಯನ್ನು ಪರಿಹಾರ ಸಹಾಯವಾಣಿಯ ಮೂಲಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಗಮನಕ್ಕೆ ತರಲಾಯಿತು. ದೂರು ನೋಂದಾಯಿಸಿದ ಒಂದು ದಿನದೊಳಗೆ ಸಮಸ್ಯೆಯನ್ನು ಪರಿಹರಿಸಲಾಯಿತು. ಸ್ವಚ್ಛ ಪರಿಸರದಿಂದಾಗಿ ಈಗ ಗ್ರಾಮಸ್ಥರು ನೆಮ್ಮದಿಯಾಗಿದ್ದಾರೆ.
  • ಸಮೀಪದ ಆರ್ ಒ ಘಟಕ ದುರಸ್ತಿಯಾದುದರಿಂದ ನಮಗೆ ಕುಡಿಯುವ ನೀರು ಸಿಗುತ್ತಿರಲಿಲ್ಲ. ಪರಿಹಾರ ಸಹಾಯವಾಣಿಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದೆವು. ಮೂರು ದಿನದೊಳಗಾಗಿ ತಂತ್ರಜ್ಞರು ಬಂದು ಘಟಕದ ತೊಂದರೆಯನ್ನು ಸರಿಪಡಿಸಿದರು. ಈಗ ಸಮೀಪದಿಂದಲೇ ನೀರುತರುವುದು ಅನುಕೂಲವಾಗಿದೆ. ಪರಿಹಾರ ನಮಗೆ ನೀರು ನೈರ್ಮಲ್ಯದ ತೊಂದರೆಗಳಿಗೆ ಪರಿಹಾರ ಒದಗಿಸಿದೆ ಎನ್ನುತ್ತಾರೆ, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಅಕ್ಕೋಲ ಗ್ರಾಮದಜನರು.
  • ನಮ್ಮ ಗ್ರಾಮದಲ್ಲಿ ಮನೆಗಳಿಂದ ಕಸ ಸಂಗ್ರಹಿಸಲು ಸ್ವಚ್ಛತಾ ಕಾರ್ಮಿಕರು ಬರುತ್ತಿರಲಿಲ್ಲ. ಇದರಿಂದಾಗಿ ನಾವು ಕಸವನ್ನು ಬಯಲಿನಲ್ಲಿ ಎಸೆಯಬೇಕಾಗಿತ್ತು. ಕಸದ ರಾಶಿಯಿಂದಾಗಿ ವಾತಾವರಣ ಕಲುಷಿತವಾಗುತ್ತಿತ್ತು. ಪರಿಹಾರ ಸಹಾಯವಾಣಿಯ ಫೇಸ್‍ಬುಕ್ ಪುಟದಿಂದ ನಾವು ಇದನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಗಮನಕ್ಕೆ ತಂದೆವು. ಕೆಲವೇ ದಿನಗಳಲ್ಲಿ ಇಲಾಖೆಯವರು ಇನ್ನಷ್ಟು ಸಂಪನ್ಮೂಲಗಳನ್ನು ನಿಯೋಜನೆಗೊಳಿಸಿ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕಗೊಳಿಸಿದರು. ಎಂದು ಸಂತೋಷ ಹಂಚಿಕೊಳ್ಳುತ್ತಾರೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ವೀರಾಪುರದ ಗ್ರಾಮಸ್ಥರು.

ರಾಜ್ಯ ಮಟ್ಟದಲ್ಲಿ ನೀರು ಮತ್ತು ನೈರ್ಮಲ್ಯ ಸಮಸ್ಯೆಗಳನ್ನು ವಿನೂತನ ರೀತಿಯಲ್ಲಿ ಪರಿಹರಿಸುತ್ತಿರುವುದರ ಕೆಲವು ಉದಾಹರಣೆಗಳು ಈ ಮೇಲಿನವುಗಳು. ಗ್ರಾಮೀಣ ಕರ್ನಾಟಕದಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾ) ಮತ್ತು ಜಲಜೀವನ ಮಿಷನ್ ಯೋಜನೆಗಳಡಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಹೆಚ್ಚುತ್ತಿದ್ದಾಗಲೂ, ಸಂಪರ್ಕದ ಒಂದು ಕೊಂಡಿ ಬಿಟ್ಟುಹೋದಂತೆ ಭಾಸವಾಗುತ್ತಿತ್ತು. ಗ್ರಾಮಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳೊಂದಿಗೆ ಅವುಗಳ ನಿರ್ವಹಣೆ ಸಹ ಅಗತ್ಯವಾಗಿತ್ತು. ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ದೂರು ನೋಂದಾಯಿಸುವಿಕೆ ಪ್ರಕ್ರಿಯೆಯು ನಿಧಾನವಾಗಿದ್ದು ಸಮಸ್ಯೆಯ ಪರಿಹಾರಕ್ಕೆ ಬಹಳ ಸಮಯ ಹಿಡಿಯುತ್ತಿತ್ತು. ದೂರಿನ ಸ್ಥಿತಿಗತಿಗಳನ್ನು ತಿಳಿಯಲು ಕೇಂದ್ರೀಕೃತ ವ್ಯವಸ್ಥೆಯ ಕೊರತೆಯಿತ್ತು. ಈ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು “ಪರಿಹಾರ” ಸಹಾಯವಾಣಿಯನ್ನು ಸ್ಥಾಪಿಸಿತು. “ಪರಿಹಾರ” ಸಹಾಯವಾಣಿಯು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ನಾಗರಿಕರು ದೂರುಕೊಡುವ ವಿಧಾನಗಳು:
  • ದೂರವಾಣಿ
  • ವಾಟ್ಸಾಪ್
  • ವೆಬ್‍ಸೈಟ್
  • ಫೇಸ್‍ಬುಕ್
  • ಟ್ವಿಟರ್
  • ಯುಟ್ಯೂಬ್
  • ಇನ್‍ಸ್ಟಾಗ್ರಾಮ್

ಈ ವ್ಯವಸ್ಥೆಯು ದೂರಿನ ಸಂಖ್ಯೆಯನ್ನು ನಿಯೋಜಿಸುತ್ತದೆ, ಇದನ್ನು ದೂರಿನ ಸ್ಥಿತಿಗತಿ ತಿಳಿಯಲು ಮತ್ತು ಮೇಲ್ವಿಚಾರಣೆ ಮಾಡಲು ಬಳಸಬಹುದು. ಜಾಲತಾಣದಲ್ಲಿ ದೂರು ದಾಖಲಾದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸಂದೇಶ ರವಾನಿಸುತ್ತದೆ. ದೂರಿನ ಸಂಖ್ಯೆಯೊಂದಿಗೆ ಗ್ರಾಹಕರಿಗೆ ಸಹ ಸಂದೇಶ ದೊರೆಯುತ್ತದೆ. ದೂರುಗಳನ್ನು ನಿಗದಿತ ಸಮಯದೊಳಗೆ ಸಂಬಂಧಿಸಿದ ಅಧಿಕಾರಿಗಳು ಪರಿಹರಿಸುತ್ತಾರೆ ಇಲ್ಲವಾದಲ್ಲಿ ದೂರನ್ನು ಮೇಲ್ಪಟ್ಟದ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ.

ಪರಿಹಾರ ಸಹಾಯವಾಣಿಯ ಸಂಖ್ಯೆಯನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಸೌಲಭ್ಯ ಒದಗಿಸಲಾಗಿದೆ. ಇದಲ್ಲದೇ ಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಈ ಸಂಖ್ಯೆಯನ್ನು ತಿಳಿಸಲಾಗಿದೆ. ನೀರು ಮತ್ತು ನೈರ್ಮಲ್ಯ ಕುರಿತಾದ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆಯು ಈ ವಿನೂತನ ಪರಿಹಾರವನ್ನು ಸ್ಥಾಪಿಸಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡು ನಮ್ಮ ಪರಿಸರವನ್ನು ಸ್ವಚ್ಛ ಸಮೃದ್ಧವಾಗಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

RDW & SD Karnataka

 7,325 total views,  2 views today

WhatsApp chat