Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ನಮಗೆಲ್ಲಾ ತಿಳಿದಿರುವಂತೆ ಸ್ವಚ್ಛತೆ, ನೈರ್ಮಲ್ಯ ಹಾಗೂ ಆರೋಗ್ಯ ಇವುಗಳ ನಡುವೆ ಪರಸ್ಪರ ಆಳವಾದ ಸಂಬಂಧವಿದೆ.ಸಾಮಾನ್ಯವಾಗಿ ಕೆಲವೊಂದು ಸಾಂಕ್ರಾಮಿಕ ರೋಗಗಳು ಸ್ವಚ್ಛತೆ ಇಲ್ಲದ ಕಾರಣದಿಂದ ಹರಡುತ್ತದೆ. "ಸ್ವಚ್ಛತೆ ಸ್ವಾತಂತ್ರ್ಯಕ್ಕಿಂತಲೂ ಶ್ರೇಷ್ಠ ಮತ್ತು ಬಹುಮುಖ್ಯ" ಇದು ಶುಚಿತ್ವದ ಕುರಿತು ಮಹಾತ್ಮ ಗಾಂಧೀಜಿಯವರ ಧ್ಯೇಯ ವಾಕ್ಯವಾಗಿತ್ತು. ಅವರ ಆಶಯದಂತೆ ನಮ್ಮ ಗ್ರಾಮೀಣ ಜನರು ಆರೋಗ್ಯವಂತರಾಗಿ ಸದೃಢರಾಗಿ ಸಶಕ್ತರಾಗಿ ಸ್ವಾಭಿಮಾನದಿಂದ ಬದುಕಬೇಕೆಂದರೆ ಸ್ವಚ್ಛತೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.

ಸ್ವಚ್ಛ ಭಾರತ ಅಭಿಯಾನದಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಉತ್ತೇಜಿಸುವ ಮತ್ತು ಬಾಪೂ ಅವರ ಸ್ವಚ್ಛ ಭಾರತದ ಕನಸನ್ನು ನನಸು ಮಾಡುವ ಸಲುವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಚ್ಛತೆಯೇ ಸೇವೆ ಆಂದೋಲನ ಆರಂಭಿಸಿದರು. ಸ್ವಚ್ಛತೆಯೇ ಸೇವೆ ಆಂದೋಲನವು ಸ್ವಚ್ಛತೆಯೆಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಸ್ವಚ್ಛ ಭಾರತ ಯೋಜನೆ ಮತ್ತು ಮಹಾತ್ಮಾ ಗಾಂಧಿ ಅವರ 150ನೇ ಜಯಂತೋತ್ಸವ ಆರಂಭದ ಅಂಗವಾಗಿ ಸ್ವಚ್ಛತೆಯೇ ಸೇವೆ ಅಭಿಯಾನವನ್ನು ಆರಂಭಿಸಲಾಯಿತು ಅಕ್ಟೋಬರ್ 2, 2022 ರಂದು ಈ ಯೋಜನೆ ಜಾರಿಯಾಗಿ ಎಂಟು ವರ್ಷ ಸಂಪೂರ್ಣವಾಯಿತು.

ಕರ್ನಾಟಕ ರಾಜ್ಯದಾದ್ಯಂತ ಸ್ವಚ್ಛತೆಯೇ ಸೇವೆ ಅಭಿಯಾನ ಈ ಬಾರಿ ಯಶಸ್ವಿಯಾಗಿ ನಡೆಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಅಧಿಕಾರಿಗಳು, ಪಿ.ಡಿ.ಓ ಗಳು, ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಸ್ವಚ್ಛ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ವಚ್ಛಾಗ್ರಹಿಗಳು, ಗ್ರಾಮಸ್ಥರು, ಶಾಲಾ ಮಕ್ಕಳು ವಿವಿಧ ಸಂಘಟನೆಗಳು ಅತ್ಯಂತ ಉತ್ಸಾಹಭರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಈ ನಿಟ್ಟಿನಲ್ಲಿ ನಡೆದ ಅಭಿಯಾನದಲ್ಲಿ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ವರ್ಷಗಳ ಕಲ್ಯಾಣಿಗಳು ಅಭಿಯಾನದಲ್ಲಿ ಪುನರ್ಜನ್ಮ ಪಡೆದಿರುವುದು ಮತ್ತು ಕೋಲಾರದಲ್ಲಿ ವೀರಗಲ್ಲುಗಳು, ಶಾಸನಗಳು ಸ್ವಚ್ಛತಾ ಶ್ರಮದಾನದ ವೇಳೆ ಬೆಳಕಿಗೆ ಬಂದಿರುವುದು ಅಭಿಯಾನ ಐತಿಹಾಸಿಕ ರೂಪು ಪಡೆದಿರುವುದಕ್ಕೆ ಸಾಕ್ಷಿಯಾಗಿದೆ.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಲು ಹೆಚ್ಚಿನ ಪ್ರಯತ್ನ ಹಾಗೂ ಒತ್ತು ನೀಡುವಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಮುಂಚೂಣಿಯಲ್ಲಿದೆ. ಸ್ವಚ್ಛತೆಯ ಸೇವೆ ಅಭಿಯಾನದ ಜನರ ಭಾಗವಹಿಸುವಿಕೆಯಲ್ಲಿ ಕರ್ನಾಟಕ ರಾಜ್ಯವು ಭಾರತದಲ್ಲಿ ಮೊದಲ ಸ್ಥಾನ ಗಳಿಸಿತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2, 2022 ರಂದು ಗಾಂಧಿ ಜಯಂತಿ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಿದ್ದ "ಸ್ವಚ್ಛತಾ ದಿವಸ್" ಕಾರ್ಯಕ್ರಮದಲ್ಲಿ ಈ ಸಾಧನೆಯನ್ನು ಗುರುತಿಸಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲ ಶಕ್ತಿ ಮಂತ್ರಾಲಯದ ಸಚಿವರು ಪುರಸ್ಕಾರವನ್ನು ನೀಡಿ ಗೌರವಿಸಿದರು. ಈ ಸಾಧನೆಗೆ

ಶ್ರೀ ಎಲ್‌.ಕೆ ಅತೀಕ್ ಭಾ..ಸೇ, ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ನಿರಂತರ ಮಾರ್ಗದರ್ಶನ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕರಾದ ಶ್ರೀ ಗಂಗಾಧರ ಸ್ವಾಮಿ ಅವರು ನೀಡಿದ ಸಲಹೆ, ಮಾರ್ಗದರ್ಶನದನ್ವಯ ಜಿಲ್ಲೆಗಳು ಕಾರ್ಯತಂತ್ರ ರೂಪಿಸಿ ಅನುಷ್ಠಾನ ಮಾಡಿದ ಪರಿಣಾಮ ರಾಜ್ಯವು ಈ ಪುರಸ್ಕಾರ ಪಡೆಯಲು ಸಾಧ್ಯವಾಯಿತು.

ಕರ್ನಾಟಕ ರಾಜ್ಯವು ಸ್ವಚ್ಛ ಭಾರತ ನಿರ್ಮಾಣದಲ್ಲಿ ಕೈ ಜೋಡಿಸಿ ಸುಸ್ಥಿರ ಅಭಿವೃದ್ಧಿಯತ್ತ ಸಾಗುತ್ತಾ ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸೋಣ.

 1,943 total views,  1 views today

WhatsApp chat