
ಇಚ್ಛಾಶಕ್ತಿ ಮತ್ತು ಒಂದಷ್ಟು ಪ್ರೇರಣಾ ಅಂಶಗಳಿದ್ದರೆ ಅಂದುಕೊಂಡ ಗುರಿ ತಲುಪಲು ಸಾಧ್ಯವಿದೆ. ದೇಶದಾದ್ಯಂತ ಸ್ವಚ್ಛತೆಯ ಕೂಗು ಕೇಳುತ್ತಿದ್ದಂತೆ ತನ್ನ ಕರ್ತವ್ಯ ಪ್ರಜ್ಞೆಯನ್ನು ಅರಿತು ಸ್ವ-ಇಚ್ಛೆಯಿಂದಲೇ ಸ್ವಚ್ಛತಾ ಕಾರ್ಯಕ್ಕಿಳಿದು, ೨೦೧೯ರ ವಿಶ್ವ ಪರಿಸರ ದಿನದಂದು ‘ಜಿಲ್ಲಾ ಪರಿಸರ ಪ್ರಶಸ್ತಿ ‘ ತನ್ನ ಮುಡಿಗೇರಿಸಿಕೊಂಡಿರುವ ಪಂಚಾಯತ್ ಎಂದೇ ಕರೆಯಲ್ಪಡುವ ಅರಂತೋಡು ಗ್ರಾಮ ಪಂಚಾಯತ್ ಇಂದು ನೈರ್ಮಲ್ಯ ಸಾಧನೆಯಲ್ಲಿ ಯಶಸ್ಸಿನ ಹಾದಿಯಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆದೇಶದನ್ವಯ ಕಸ ಸಂಗ್ರಹಣೆಗಾಗಿ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದು, ಇದಕ್ಕೆ ಇನ್ನಿಷ್ಟು ಪ್ರೇರಣೆಯಾಗಿ ಸಿಕ್ಕಿದ್ದು ಉಡುಪಿಯ ವಂಡ್ಸೆ ಗ್ರಾಮ ಪಂಚಾಯತ್. ಹೌದು, ವಂಡ್ಸೆಯ ಘನ ತ್ಯಾಜ್ಯ ಸಂಗ್ರಹಣೆ ಹಾಗೂ ನಿರ್ವಹಣೆಯ ಮಾದರಿಯನ್ನೇ ಸವಾಲಾಗಿಸಿಕೊಂಡು ಅರಂತೋಡಿನಲ್ಲಿ ಇನ್ನಿಷ್ಟು ಮಾದರಿಯುತವಾದ ಘಟಕವನ್ನು ನಿರ್ಮಿಸುವ ಕುರಿತು ಕನಸು ಕಂಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅದನ್ನು ನಿಜಕ್ಕೂ ನನಸು ಮಾಡಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ನೈರ್ಮಲ್ಯ ಸುಸ್ಥಿರತೆಯನ್ನು ಸಾಧಿಸುವ ಉದ್ದೇಶವನ್ನರಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿಯ ಜನಪ್ರತಿನಿಧಿಗಳು ತಮ್ಮ ಗ್ರಾಮದಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೂ ಮೊದಲೇ, ಆಸಕ್ತಿಯಿಂದ ಬಾಡಿಗೆ ವಾಹನ ಖರೀದಿಸಿ, ಹಳೆ ಕಟ್ಟಡದಲ್ಲಿ ಒಣ ಕಸವನ್ನು ಸಂಗ್ರಹಿಸಲು ಶುರು ಮಾಡಿದರು. ಜತೆಗೆ ೧,೩೭೦ ಕುಟುಂಬಗಳಿರುವ ಗ್ರಾಮ ಪಂಚಾಯತ್‌ನಲ್ಲಿ ಪ್ರತಿ ಮನೆ ಹಂತದಲ್ಲಿ ಒಣ ಕಸ ಸಂಗ್ರಹಿಸಲು ಮಾಹಿತಿ ಸಂದೇಶವಿರುವ ಪರಿಸರ ಸ್ನೇಹಿ ಚೀಲಗಳನ್ನು ವಿತರಿಸುತ್ತಾ ಬಂದಿದ್ದಾರೆ. ಅಲ್ಲದೆ, ವಾಣಿಜ್ಯ ಮಳಿಗೆಗಳಿಗೆ ಚೀಲ ತೂಗು ಹಾಕಲು ಸ್ಯಾಂಡ್ ಸಮೇತ ಸ್ನೇಹಿ ಚೀಲಗಳನ್ನು ವಿತರಿಸಲಾಗುತ್ತಿದೆ. ವಾಣಿಜ್ಯ ಮಳಿಗೆಗಳಿಂದ ಪ್ರತಿ ಶನಿವಾರ ಹಾಗೂ ಮನೆಗಳಿಂದ ತಿಂಗಳಿಗೊಮ್ಮೆ ಒಣ ಕಸವನ್ನು ಸಂಗ್ರಹಿಸಿಲ್ಪಡುವ ಕೇಂದ್ರಗಳಿಂದ ಸಂಗ್ರಹಿಸಲಾಗುತ್ತಿದೆ.
ಗ್ರಾಮ ಪಂಚಾಯತ್ ನೀಡುವ ಚೀಲದಲ್ಲಿ ಪ್ಲಾಸ್ಟಿಕ್ ಕೈ ಚೀಲ ಮತ್ತಿತರ ಸಾಮಗ್ರಿಗಳು , ಪೇಪರ್ ವಸ್ತುಗಳು, ಲೋಹದ ಸಾಮಗ್ರಿಗಳು, ಗಾಜು ಮತ್ತು ಬ್ಯಾಟರಿ ತ್ಯಾಜ್ಯಗಳು, ಎಲೆಕ್ಟಾçನಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿಡುವAತೆ ಜನರಿಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿಸಿ ರವಾನಿಸಲಾಗುತ್ತಿದೆ. ಆದರೆ, ಹಸಿ ಮತ್ತು ನೀರಿನಂಶವಿರುವ ಯಾವುದೇ ತ್ಯಾಜ್ಯವನ್ನು ಈ ಚೀಲಕ್ಕೆ ಹಾಕಬಾರದು. ಇವುಗಳನ್ನು ತಾವೇ ಸ್ವತ: ನಿರ್ವಹಣೆ ಮಾಡಬೇಕು. ಸ್ಯಾನಿಟರಿ ನ್ಯಾಪ್ಕಿನ್ ಸಹಿತ ದೈಹಿಕ ಬಳಕೆಯ ವಸ್ತುಗಳನ್ನು ಈ ಚೀಲಕ್ಕೆ ಹಾಕಬಾರದು.
ಯಾವುದೇ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವುದನ್ನು ನಿಷೇಧಿಸಲಾಗಿದೆ.ಎಲ್ಲೇಂದರಲ್ಲಿ ಕಸ ಎಸೆಯುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂಬುವುದನ್ನು ಕಡ್ಡಾಯವಾಗಿ ಅಲ್ಲಿನ ಗ್ರಾಮಸ್ಥರಿಗೆ ಮನವರಿಕೆ ಮಾಡುವಲ್ಲಿ ಯಶಸ್ಸಿನ ಹಾದಿಯಲ್ಲಿದ್ದಾರೆ.
ಮನೆ ಮತ್ತು ವಾಣಿಜ್ಯ ಮನೆಗಳಿಂದ ಸಂಗ್ರಹಿಸಿ ತರಲಾಗುವ ಶುದ್ಧ ಒಣ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಕೈಚೀಲಗಳು, ಪ್ಲಾಸ್ಟಿಕ್ ಹಾಲಿನ ಕವರ್‌ಗಳು, ಪ್ಲಾಸ್ಟಿಕ್ ಹಾಲಿನ ಹುಡಿಯ ಕವರ್‌ಗಳು, ಚಾಕೋಬಾರ್‌ನಂತಹ ಐಸ್‌ಕ್ಯಾಂಡಿಯ ಪ್ಯಾಕೇಟ್(ರಟ್ಟಿನ ಪ್ಯಾಕೇಟ್), ಐಸ್‌ಕ್ರೀಮ್ ಕಪ್‌ಗಳು, ಟೆಟ್ರಾ ಲೋಟಗಳು, ಪೇಪರ್ ಲೋಟಗಳು, ಪೆಪ್ಸ್,ಕೋಲಾ ಇತ್ಯಾದಿ ಟಿನ್‌ಗಲು, ಪೇಪರಗಳು, ಪೇಪರ್ ಪ್ಲೇಟ್‌ಗಳು, ಲೇಸ್, ಕುರ್ ಕುರೆ, ಪಾನ್‌ಪರಾಗ್ ನಂತಹ ಸಿಲ್ವರ್ ಪ್ಯಾಕೇಟ್‌ಗಳು, ಅಗರಬತ್ತಿ ಮತ್ತು ಊದುಬತ್ತಿ ಪ್ಯಾಕೇಟ್‌ಗಳೆಂದು ವಿಂಗಡಿಸಲಾಗುತ್ತಿದೆ.
ತ್ಯಾಜ್ಯ ನಿರ್ವಹಣೆಯಲ್ಲಿ ಇಂತಹ ವಿನೂತನ ಪದ್ದತಿಗಳನ್ನು ಅಳವಡಿಸಿಕೊಂಡಿರುವ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಮತ್ತು ಇವರ ಆಸಕ್ತಿ ಮತ್ತು ಕೆಲಸದ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರು, ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಅನುದಾನ ಮಂಜೂರು ನೀಡಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ೩೭ ಘನ ತ್ಯಾಜ್ಯ ಘಟಕಗಳು ಕಾರ್ಯಾಚರಣೆಯಲ್ಲಿದ್ದು, ಅರಂತೋಡು ಗ್ರಾಮ ಪಂಚಾಯತ್ ತನ್ನದೇ ಚಿಂತನೆಗಳನ್ನು ನಡೆಸಿ “ ಮಾಲಿನ್ಯ ಮುಕ್ತ ಗ್ರಾಮ ಪಂಚಾಯತ್ ನಿರ್ಮಾಣಕ್ಕಾಗಿ ಮನೆ-ಮನೆಗಳಿಂದ ತ್ಯಾಜ್ಯ ಸಂಗ್ರಹ ಅಭಿಯಾನ”ವನ್ನು ಹಮ್ಮಿಕೊಂಡಿದೆ. ಅಲ್ಲದೆ, “ಹಸಿರು ಕಾರ್ಯಕ್ರಮ”ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹಸಿರು ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಹೀಗೆ ವಿನೂತನ ಮಾದರಿಯಲ್ಲಿ ಇನ್ನಷ್ಟು ಉತ್ತಮ ಯೋಜನೆಗಳನ್ನು ರೂಪಿಸಿಕೊಂಡಿದ್ದು ಅರಂತೋಡು ಗ್ರಾಮ ಪಂಚಾಯತ್ ರಾಜ್ಯದಲ್ಲಿಯೇ ಉತ್ತಮ ಮಾದರಿ ತ್ಯಾಜ್ಯ ನಿರ್ವಹಣಾ ಘಟಕ ಎಂಬ ಹೆಗ್ಗಳಿಕೆ ಪಡೆಯುವ ಕನಸು ಕಂಡಿದೆ.
ಇದೇ ಮಾದರಿಯಲ್ಲಿ ರಾಜ್ಯದ ಇತರೆ ಗ್ರಾಮ ಪಂಚಾಯಿತಿಗಳು ಸಹ ವಿನೂತನ ಪದ್ದತಿಗಳನ್ನು ಅಳವಡಿಸಿಕೊಂಡು ತಮ್ಮ ಗ್ರಾಮಗಳನ್ನು ತ್ಯಾಜ್ಯ ಮುಕ್ತ ಮಾಡುವಲ್ಲಿ ಯಶಸ್ಸು ಕಾಣಬೇಕಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಆಶಿಸುತ್ತದೆ.
