Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಮುತ್ತಿರುವುದಿಂದು ಭೂಮಿಯಲೊಂದು ದುರ್ದೈವ ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ ಸುತ್ತಿಹುದುತಲೆಯ ಅನುದಿನದ ಲೋಕದ ವಾರ್ತೆ ಎತ್ತಲಿದಕೆಲ್ಲ ಕಡೆ ಮಂಕುತಿಮ್ಮ..
-ಡಿವಿಜಿ.

ಶಕಗಳ ಹಿಂದೆಯೇ ಡಿವಿಜಿಯವರು ವ್ಯಕ್ತಪಡಿಸಿದ ಆತಂಕ ಇಂದಿಗೂ ಪ್ರಸ್ತುತವಾಗಿದೆ. ನಮ್ಮ ಸುತ್ತಲೂ ಇಂದು ನೂರಾರು ಅನಾರೋಗ್ಯಗಳು, ಮರಣದ ಸುದ್ದಿಯೇ ಕೇಳಿಬರುತ್ತಿದೆ. ಎಂದೂ ಇಲ್ಲದ ರೀತಿಯಲ್ಲಿ ಸಂಪೂರ್ಣ ದೇಶವೇ ಮನೆಯೊಳಗಿರಬೇಕಾದ ಸ್ಥಿತಿ ಬಂದೆರಗಿದೆ. COVID 19 ಸೋಂಕು ಇಂದು ಇಡೀ ದೇಶವನ್ನೇ ಆವರಿಸುತ್ತಿದೆ. ಎಚ್ಚರಿಕೆಯ ಗಂಟೆ ಮೊಳಗುತ್ತಲೇ ಇದೆ.

ಇದು ನಾವೆಲ್ಲರೂ ಎಚ್ಚೆತ್ತುಕೊಳ್ಳುವ ಸಮಯ. ಇದರ ಪರಿಹಾರವೂ ನಮ್ಮ ಕೈಯಲ್ಲಿಯೇ ಇದೆ. ವೈಯಕ್ತಿಕ ಸ್ವಚ್ಛತೆ, ನಮ್ಮ ಕೈಗಳ ಸ್ವಚ್ಛತೆ, ಸಾಮಾಜಿಕ ಅಂತರ ಮುಂತಾದುವುಗಳಿಂದ ನಾವು ಈ ವೈರಾಣುವಿನ ಹರಡುವಿಕೆಯನ್ನು ತಡೆಯಬಹುದು. ನಾವು ಜವಾಬ್ದಾರಿಯುತವಾಗಿ ನಡೆದುಕೊಂಡಲ್ಲಿ ಮಾತ್ರ ನಮ್ಮ ಸುರಕ್ಷತೆ ಸಾಧ್ಯ.

ನಾವೇನು ಮಾಡಬಹುದು?

  • ಸಾಧ್ಯವಾದಷ್ಟೂ ಮನೆಯಲ್ಲಿಯೇ ಇರುವುದು
  • ಅವಶ್ಯಕ ಕೆಲಸಗಳು, ವೈದ್ಯಕೀಯ ಸಮಸ್ಯೆಗಳು ಮುಂತಾದುವುಗಳನ್ನು ಹೊರತುಪಡಿಸಿ ಹೊರಗೆ ಓಡಾಡದಿರುವುದು
  • ಇತರರೊಂದಿಗೆ ವ್ಯವಹರಿಸುವಾಗ 1 ಮೀ. ಅಂತರ ಕಾಯ್ದುಕೊಳ್ಳುವುದು
  • ಕೆಮ್ಮುವಾಗ, ಸೀನುವಾಗ ಬಾಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು
  • 60 ವರ್ಷದ ಮೇಲ್ಪಟ್ಟ ಹಾಗೂ 10 ವರ್ಷದ ಕೆಳಗಿನ ಮಕ್ಕಳ ಕುರಿತಾಗಿ ವಿಶೇಷವಾಗಿ ಗಮನ ವಹಿಸುವುದು.

ಮನೆಯ, ವಸತಿ ಪ್ರದೇಶಗಳ ಸ್ವಚ್ಛತೆ ಕಾಪಾಡುವುದು ಹಾಗೂ ಕೈಗಳ ಸ್ವಚ್ಛತೆ ಕಾಪಾಡುವುದು ಈ ಸೋಂಕು ಹರಡುವಿಕೆಯನ್ನು ತಪ್ಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಮಲಿನವಾದ ಕೈಗಳಿಂದ ನಮ್ಮ ಮೂಗು ಬಾಯನ್ನು ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?

  • ಪದೇ ಪದೇ ಕೈಗಳನ್ನು ತೊಳೆದುಕೊಳ್ಳಬೇಕು
  • ಕೈಗಳು ಮಲಿನವಾಗಿಲ್ಲದಿದ್ದಾಗ ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ಬಳಸಿ 30 ಸೆಕೆಂಡುಗಳ ಕಾಲ ಕೈಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು
  • ಕೈಗಳು ಮಲಿನವಾಗಿದ್ದಾಗ 1 ನಿಮಿಷದ ಕಾಲ ಸೋಪು ಹಾಗೂ ನೀರಿನಿಂದ ಕೈತೊಳೆಯಬೇಕು
  • ಮಲಿನವಾದ ಕೈಗಳಿಂದ ಇತರರನ್ನು, ಮೂಗು, ಬಾಯಿ, ಮುಖ ಮುಂತಾದುವನ್ನು ಮುಟ್ಟಬಾರದು.

ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ನಮ್ಮ ಸುರಕ್ಷತೆಗಿರುವ ಏಕೈಕ ದಾರಿ.
ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸೋಣ. ನಮ್ಮನ್ನು ಹಾಗೂ ನಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿರಿಸೋಣ.

ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?ಸಾಮಾಜಿಕ ಮಾಧ್ಯಮಗಳ ಪರಿಣಾಮಕಾರಿ ಬಳಕೆ

  • ಮನೆಯಲ್ಲೇ ಇದ್ದು ಸುರಕ್ಷತೆ ಕಾಪಾಡಿಕೊಳ್ಳುವ ಸಮಯದಲ್ಲಿ ನಾವು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು
  • ಇತರರಿಗೆ ಮಾಹಿತಿ ನೀಡಲು, ಮಾಹಿತಿ ಪಡೆಯಲು ಬಳಸಬಹುದು
  • ಸುಳ್ಳು ಸುದ್ದಿಗಳನ್ನು, ಆತಂಕಗಳನ್ನು ಹರಡದಿರಿ
  • ಮನೆಯಲ್ಲಿ ಇರಲು, ಸುರಕ್ಷತೆ ಕಾಪಾಡಿಕೊಳ್ಳಲು ಪ್ರೇರೇಪಿಸಿ
  • ನಿಮ್ಮ ಪ್ರೀತಿಪಾತ್ರರಿಗೆ ಮುಂಜಾಗ್ರತಾ ಕ್ರಮಗಳನ್ನು, ಸರ್ಕಾರೀ ಆದೇಶಗಳನ್ನು ಪಾಲಿಸಲು ತಿಳಿಸಿ
  • ಸಹಾಯವಾಣಿಯ ಸಂಖ್ಯೆಗಳನ್ನು ನಿಮ್ಮ ಬಂಧುಮಿತ್ರರಿಗೆ ತಿಳಿಸಿ
  • ನಿಮ್ಮ ನೆರೆಹೊರೆಯವರಿಗೆ ನೀವು ದೂರದಿಂದಲೇ ಏನಾದರೂ ಸಹಾಯ ಮಾಡಬಹುದಾದಲ್ಲಿ ತಿಳಿಸಿ
  • ಯಾವುದೇ ಸಮಯದಲ್ಲಿ ನಿಮ್ಮ ಆರೋಗ್ಯದಲ್ಲಿ ಏರು ಪೇರಾದಲ್ಲಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ/ ಸಲಹೆ/ ಸಹಾಯ ಪಡೆಯಿರಿ.

ಪ್ರತಿ ಜಿಲ್ಲೆಯಲ್ಲಿಯೂ ಪ್ರತಿ ಗ್ರಾಮದಲ್ಲಿಯೂ ವಿಶೇಷ ಕಾರ್ಯಪಡೆಗಳನ್ನು ರಚಿಸಲಾಗಿದ್ದು ಅವರೆಲ್ಲರೂ ನಿಮ್ಮ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರ ಶ್ರಮಕ್ಕೆ ಬೆಲೆ ನೀಡಿ. ನಿಮ್ಮನ್ನು ಹಾಗೂ ನಿಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿರಿಸಿ. ಜವಾಬ್ದಾರಿಯುತ ನಾಗರಿಕರಾಗಿ. COVID 19 ಸೋಂಕು ಹರಡುವುದನ್ನು ತಪ್ಪಿಸಿ.

 7,598 total views,  3 views today

WhatsApp chat