Englishs
 • Become an activist

  If you gonna make it better

 • Next Meeting

  23/08/2017

 • Yout Support

  May Help Us

https://swachhamevajayate.org/wp-content/uploads/2019/09/blog-img-150x80.png
//swachhamevajayate.org/wp-content/uploads/2019/10/shutterstock_1310446387.jpg

ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಹಲವಾರು ದುಷ್ಪರಿಣಾಮಗಳಿಂದಾಗಿ ದೇಶದಲ್ಲಿ ಕಡೆಗೂ ಪ್ಲಾಸ್ಟಿಕ್ ನಿಷೇಧಗೊಂಡಿದೆ. ಇನ್ನು ಈ ಆಂದೋಲನದಲ್ಲಿ ನಾವೆಲ್ಲಾ ಪಾಲ್ಗೊಂಡು ಅದರ ಯಶಸ್ಸಿನಲ್ಲಿ ಪಾಲುದಾರರಾಗುವುದೊಂದೇ ಬಾಕಿ. ಬಳಕೆಯಲ್ಲಿ ವಿಶ್ವವ್ಯಾಪಿ ತನ್ನ ಕಬಂಧಬಾಹುಗಳನ್ನು ಚಾಚಿ ನಿಂತಿರುವ ಪ್ಲಾಸ್ಟಿಕ್ ವಾತಾವರಣದ ಮೇಲೆ ಈಗಾಗಲೇ ಬೀರಿರುವ ದುಷ್ಟರಿಣಾಮಗಳಲ್ಲಿ ನೇರವಾಗಿ ಪರಿಣಾಮ ಬೀರುತ್ತಿರುವುದು ನಾವು ಕುಡಿಯುತ್ತಿರುವ ನೀರಿನಲ್ಲಿ..!

ಇತ್ತೀಚೆಗೆ ಹಲವಾರು ದೇಶಗಳಲ್ಲಿ ಕುಡಿಯುವ ನೀರಿನ ಸ್ಯಾಂಪಲ್ ಮಾದರಿಗಳ ಅಧ್ಯಯನಗಳನ್ನು ನಡೆಸಲಾಗಿದೆ. ಮೈಕ್ರೋ ಪ್ಲಾಸ್ಟಿಕ್‌ನಿಂದ ಕುಡಿಯುವ ನೀರು ಕಲುಷಿತಗೊಂಡಿರುವ ದೇಶಗಳಲ್ಲಿ ಭಾರತವು ಅಮೆರಿಕ ಮತ್ತು ಲೆಬನಾನಿನ ನಂತರ ಮೂರನೇ ಸ್ಥಾನದಲ್ಲಿದೆ. ಪರೀಕ್ಷೆ ಮಾಡಲ್ಪಟ್ಟ ಶೇ.೮೨.೪ರಷ್ಟು ಮಾದರಿ ಸಂಗ್ರಹಗಳು ಪ್ಲಾಸ್ಟಿಕ್‌ಯುಕ್ತವಾಗಿತ್ತು. ನೀರು ಮತ್ತು ಆಹಾರಗಳ ಮೂಲಕ ಪ್ಲಾಸ್ಟಿಕ್‌ನ್ನು ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಇನ್ನೂ ಗಂಭೀರವಾದ ಅಧ್ಯಯನಗಳು ನಡೆಯುತ್ತಿವೆ. ಆದರೆ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ನೀರು ಸರಬರಾಜಿಗೇ ತೊಂದರೆಯಾಗುತ್ತಿದೆ ಎಂಬುದು ಸಾಕಷ್ಟು ಕಳವಳಕಾರಿಯಾದ ಸಂಗತಿಯಾಗಿದೆ.  ಇಂತಹ ಮಲೀನವಾದ ಆಹಾರ ಹಾಗೂ ನೀರಿನ ಸೇವನೆಯಿಂದ ಮಾನವನ ಆರೋಗ್ಯದ ಮೇಲೆ ನೇರ ದುಷ್ಪರಿಣಾಮ ಬೀರುತ್ತದೆಂದು ಸಾಬೀತಾಗಿದೆ. ವಿಜ್ಞಾನಿಗಳ ಪ್ರಕಾರ ಈ ರಸಾಯನಿಕ ವಸ್ತುಗಳಿಂದ ಮಕ್ಕಳ ಮಿದುಳಿನ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯೇ ಹೆಚ್ಚು.
೧೯೫೦ರ ನಂತರದಲ್ಲಿ ವಿಶ್ವದಲ್ಲಿ ೮೩೦ ಕೋಟಿ ಟನ್ನುಗಳಷ್ಟು ಪ್ಲಾಸಿಕ್ ಉತ್ಪಾದಿಸಲಾಗಿದ್ದು ಅದರಲ್ಲಿ ಕೇವಲ ಶೇ.೨೦ರಷ್ಟನ್ನು ಮಾತ್ರ ಮರುಬಳಕೆ ಮಾಡಲಾಗಿದೆ ಅಥವಾ ಸುಟ್ಟುಹಾಕಲಾಗಿದೆ. ಉಳಿದದ್ದು ಸಾಗರದಲ್ಲಿ, ಪರ್ವತ ಶ್ರೇಣಿಗಳಲ್ಲಿ, ನದಿ-ತೊರೆಗಳಲ್ಲಿ, ಬಾವಿಗಳಲ್ಲಿ ಮತ್ತು ಭೂಮಿಯಲ್ಲಿ ನಗರೀಕರಣದ ಕಾಯಿಲೆಯ ಪ್ರತೀಕವಾಗಿ ನಿಂತಿರುವ ಬೆಟ್ಟದಂತಹ ಕಸದ ರಾಶಿಗಳಲ್ಲಿ ಸೇರಿಕೊಂಡಿದೆ. ಇದು ಅಗ್ಗ, ಹಗುರ ಮತ್ತು ಬೇಕೆಂದಂತೆ ಮಾರ್ಪಾಡಾಗಬಲ್ಲ ಬಳಕೆಯ ಸಾಮಗ್ರಿಯಾಗಿದೆ. ಹೀಗಾಗಿ ಅದರ ಬದಲಿಗೆ ಮತ್ತೊಂದರ ಬಳಕೆಯನ್ನು ಪರಿಚಯಿಸುವುದು ಅಷ್ಟು ಸುಲಭವಲ್ಲ. 'ಬಳಸಿ ಬಿಸಾಡು' ಸಂಸ್ಕೃತಿ ಬಿಡುವವರೆಗೂ ನಾವು ಇದರ ಪರಿಣಾಮಗಳನ್ನು ನಿಲ್ಲಿಸುವುದು ಅಸಾಧ್ಯ. ಇಂದು ನಮ್ಮ ಮಹಾ ಸಾಗರಗಳು ಅಂದಾಜು ೧೫ ಕೋಟಿ ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಒಳಗಿರಿಸಿಕೊಂಡಿವೆ ಎಂಬುದು ಸಾಬೀತಾಗಿದೆ; ಇದರ ಪರಿಣಾಮವಾಗಿ ಸಮದ್ರ ಜೀವಿಗಳು, ಪಕ್ಷಿಗಳು ಮತ್ತು ಸಸ್ಯಗಳು ಉಸಿರುಗಟ್ಟಿ ಸಾಯುತ್ತಿವೆ; ದೊಡ್ಡ ಪ್ರಮಾಣದ ಜಮೀನುಗಳ ಮೇಲೆ ನಾಶವಾಗದ ಪ್ಲಾಸ್ಟಿಕ್ ಯುಕ್ತ ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದು ಅವು ಮಣ್ಣಿನೊಳಗೆ ಕರಗಿಹೋಗದೆ ಹಾಗೆಯೇ ವಿಷಯುಕ್ತವಾಗುಳಿಯುತ್ತಿವೆ; ಮತ್ತು ಈ ತ್ಯಾಜ್ಯಗಳಿಂದ ಮೈಕ್ರೋ ಪ್ಲಾಸ್ಟಿಕ್‌ಗಳು ಜಲಸಂಪನ್ಮೂಲದೊಳಗೆ ಮತ್ತು ಆಹಾರ ಚಕ್ರದೊಳಗೆ ಬೆರೆತುಹೋಗುತ್ತಿರುವುದು ಮತ್ತೊಂದು ಗಾಬರಿಗೊಳಿಸುವ ವಿಷಯ. ಆದರೆ ಏನೇ ಆದರೂ ಮನುಷ್ಯ ಕಂಡುಹಿಡಿದಿರುವ ವಸ್ತು ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿದೆ, ಎಂದು ತಿಳಿದ ಮೇಲೆ ಅದನ್ನು ತಪ್ಪಿಸುವುದು ಕೂಡ ನಮ್ಮ ಕೈಯಲ್ಲೇ ಇದೆ ಎನ್ನುವುದು ಆಶಾದಾಯಕ ಎನಿಸಿದೆ. ಇದಕ್ಕೆ ನಮ್ಮ ಮನೋಬಲ ಮತ್ತು  ಗಟ್ಟಿಯಾದ ಸಂಕಲ್ಪವಷ್ಟೇ ಅತ್ಯಂತ ತುರ್ತಾಗಿದೆ.

ಇದೇ ನಿಮ್ಮ ಮಂತ್ರವಾಗಲಿ:

 • ೧. ಬಳಕೆ ತಗ್ಗಿಸಿ
 • ೨. ಮರುಬಳಸಿ
 • ೩. ರಿಸೈಕ್ಲಿಂಗ್ ಮಾಡಿ
 • ೪. ಸಂಪೂರ್ಣ ತಡೆಗಟ್ಟಿ

ಈ ಏಳು ವಿಧಗಳಲ್ಲಿ, 3  ಹಾಗೂ 7 ಸಂಖ್ಯೆ ಇರುವ ಪ್ಲಾಸ್ಟಿಕ್ ಬಾಟಲ್ ತಯಾರಿಕೆಯಲ್ಲಿ ಬಿಸಫೆನಾಲ್-ಎ ಮತ್ತು ಡೈಥ್ಯಾಲೇಟ ಎಂಬ ರಸಾಯನಿಕ ವಸ್ತುಗಳನ್ನು ಅತಿಯಾಗಿ ಬಳಸುವುದರಿಂದ, ಇಂತಹ ಬಾಟಲ್ಗಳ ಅತಿಯಾದ ಉಪಯೋಗ, ಆರೋಗ್ಯಕ್ಕೆ ನೇರವಾಗಿ ಹಾನಿಕರ. ಕೆನಡಾ ಹಾಗೂ ಯುರೋಪಿಯನ್ ರಾಷ್ಟ್ರಗಳಲ್ಲಿ, ಬಿಸಫೆನಾಲ್-ಎ ಮತ್ತು ಡೈಥ್ಯಾಲೇಟನ ಉಪಯೋಗವನ್ನು ಈಗಾಗಲೇ ನಿಷೇಧಿಸಲಾಗಿದೆ.

ಕಡೆಯದಾಗಿ :

ಯಾವುದೇ ಬದಲಾವಣೆಗಳು ಮನೆಯಿಂದಲೇ ಆರಂಭವಾಗಬೇಕು. ಹಾಗಾದರೆ ಮಾತ್ರವೇ ನಿರೀಕ್ಷಿಸಿದ ಪ್ರತಿಫಲ ಪಡೆಯಲು ಸಾಧ್ಯವಾಗುತ್ತದೆ. ಪ್ಲಾಸ್ಟಿಕ್ ನಿಷೇಧದಿಂದ ಈಗ ಆಗುತ್ತಿರುವ ಕೊಂಚ ಅನಾನುಕೂಲಗಳನ್ನು ಇಂದು ನಾವೆಲ್ಲಾ ಸ್ವಲ್ಪ ತಾಳ್ಮೆಯಿಂದ ಸಹಿಸಿದರೆ, ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರದ ಜೊತೆಗೆ ಉತ್ತಮ ಹವ್ಯಾಸ, ಆರೋಗ್ಯವನ್ನೂ ಭರಪೂರ ಬಳುವಳಿಯಾಗಿ ನೀಡಬಹುದು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ಸಂರಕ್ಷಿಸಿ.  ಪ್ಯಾಸ್ಟಿಕ್ ಮುಕ್ತ ಪರಿಸರ ನಮ್ಮ ಆದ್ಯತೆಯಾಗಲಿ ಬನ್ನಿ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಕೈ ಜೋಡಿಸೋಣ.

WhatsApp chat