Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

https://swachhamevajayate.org/wp-content/uploads/2019/09/blog-img-150x80.png
//swachhamevajayate.org/wp-content/uploads/2020/02/blog-1.jpg

ನೈರ್ಮಲ್ಯವೆನ್ನುವುದು ಈಗ ಕೇವಲ ನಾಲ್ಕುಗೋಡೆಯ ಮನೆಗೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ. ಜಗತ್ತಿಗೆ ಜಗತ್ತೇ 'ನೈರ್ಮಲ್ಯದೆಡೆಗೆ ನಮ್ಮ ನಡಿಗೆ' ಎಂಬ ಘೋಷವಾಕ್ಯವನ್ನು ಗುನುಗುನಿಸುತ್ತಿದೆ. ಆದರೆ ಇದು ಮಾತಿಗೂ ಮೀರಿ ಕಾರ್ಯರೂಪಕ್ಕೆ ಬಂದರಷ್ಟೇ ನಿರೀಕ್ಷಿತ ಯಶಸ್ಸು ಸಾಧ್ಯ. ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ದೇಶವು ಪ್ರತಿ ವರ್ಷ ತನ್ನ ಹಣಕಾಸಿನ ಬಜೆಟ್‍ನಲ್ಲಿ ವಿಧಿಸುವ ಸುಂಕ ಮತ್ತು ತೆರಿಗೆಯಲ್ಲಿ ಶೇ. 20ರಷ್ಟು ಸ್ವಚ್ಛತೆಗೆ ವ್ಯಯ ಮಾಡುತ್ತಿದೆ ಎಂದರೆ ನಿಮಗೆಲ್ಲಾ ಆಶ್ಚರ್ಯವಾಗಬಹುದು. ಆದರೆ ಇದಕ್ಕೆ ಆಶ್ಚರ್ಯ ಪಟ್ಟರೂ, ಬಾಯಿ ಮೇಲೆ ಬೆರಳನ್ನಿಟ್ಟರೂ ಇದೇ ಸತ್ಯ. ಇಂದು ಮನುಷ್ಯನ ದೈಹಿಕ ಬಾಧೆ, ಮತ್ತು ಆತ ಬಳಸುವ ವಸ್ತುಗಳ ವಿಲೇವಾರಿ ಎರಡೂ ಸಮರ್ಪಕವಾಗಿ ನಡೆದುಹೋದರೆ ದೇಶ ಆರ್ಥಿಕವಾಗಿ ಸಬಲಗೊಂಡಂತೆಯೇ ಸರಿ. ಆದರೆ ಅದಾಗುತ್ತಿಲ್ಲ ಎನ್ನುವುದೇ ಸದ್ಯದ ವಿಪರ್ಯಾಸ.

//swachhamevajayate.org/wp-content/uploads/2020/02/blog-5.png

ನೈರ್ಮಲ್ಯ ಹಾಗೂ ಶೌಚಾಲಯಗಳು ಇಂದು ಸಣ್ಣ ವಿಷಯಗಳಾಗಿ ಉಳಿದಿಲ್ಲ. ಇದರಿಂದಾಗಿಯೇ ಜಾಗತಿಕ ಮಟ್ಟದಲ್ಲಿ ಇವುಗಳಿಗೆ ಹೆಚ್ಚಿನ ಮನ್ನಣೆ ಹಾಗೂ ಮಹತ್ವ ನೀಡಲಾಗುತ್ತಿದೆ. ನೈರ್ಮಲ್ಯಕ್ಕೂ, ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಉತ್ತಮ ನೈರ್ಮಲ್ಯ ವ್ಯವಸ್ಥೆ ಇದ್ದಲ್ಲಿ ಉತ್ತಮ ಆರೋಗ್ಯವೂ ಇರುತ್ತದೆ. ಆರೋಗ್ಯದ ಮೇಲೆ ಮಾಡುವ ವೆಚ್ಚ ತಂತಾನೆ ಕಡಿಮೆಯಾಗುತ್ತದೆ. ಆದ್ದರಿಂದಲೇ ಶೌಚಾಲಯ ಹಾಗೂ ಸ್ವಚ್ಛ ಪರಿಸರಗಳು ಜನರ ಜೀವನ ಗುಣಮಟ್ಟದ ಮಾಪಕವೂ ಹೌದು. ರಾಷ್ಟ್ರವೊಂದರ ಅಭಿವೃದ್ಧಿಯ ದ್ಯೋತಕವೂ ಹೌದು.
ವಿಶ್ವದಲ್ಲಿ ಇಂದಿಗೂ ಕೂಡ 350 ಕೋಟಿ ಜನರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಭಾರತ ದೇಶವೂ ಸಹ ಇದಕ್ಕೆ ಹೊರತಾಗಿಲ್ಲ.
ನೈರ್ಮಲ್ಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಭಾರತ ದೇಶದಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿದ್ದರೂ ನಗರಗಳ ಕೊಳಚೆ ಪ್ರದೇಶಗಳು ಹಾಗೂ ಗ್ರಾಮೀಣ ಭಾರತದ ಬಹುಪಾಲು ಜನರು ಬಯಲು ಶೌಚ ಪದ್ಧತಿಯನ್ನು ಇಂದಿಗೂ ಅನುಸರಿಸುತ್ತಿದ್ದಾರೆ. ಬಡತನ, ಅನಕ್ಷರತೆ, ಆರ್ಥಿಕ ಸಂಕಷ್ಟ, ಅರಿವಿನ ಕೊರತೆ, ರೂಢಿಗತ ಅಭ್ಯಾಸಗಳು, ಬದಲಾವಣೆಗೆ ಹೊಂದಿಕೊಳ್ಳದ ಮನೋಸ್ಥಿತಿಗಳು, ನೀರಿನ ತೊಂದರೆ... ಹೀಗೆ ಹತ್ತು ಹಲವು ಕಾರಣಗಳು ಇವೆಯಾದರೂ, ಅವುಗಳೆಲ್ಲವನ್ನು ಮೀರಿ ಜನಸಮುದಾಯವು ಸ್ವಚ್ಛತೆಯ ವಿಷಯದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ.

ಶೌಚಾಲಯ, ನೈರ್ಮಲ್ಯ ಆದ್ಯತೆಯಾಗಬೇಕಿದೆ:

ಆಧುನಿಕತೆ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಮೊಬೈಲ್‌ ಕ್ರಾಂತಿ ದೇಶದ ಹಳ್ಳಿಗಳೂ ಸೇರಿದಂತೆ ಮೂಲೆ ಮೂಲೆಯನ್ನು ತಲುಪಿರುವುದು ನಿಜ. ಆದರೆ ಶೌಚಾಲಯಗಳ ಬಳಕೆ ಮತ್ತು ಸ್ವಚ್ಛತೆಯ ಅಭ್ಯಾಸಗಳಲ್ಲಿ ಮಾತ್ರ ನಿರೀಕ್ಷಿತ ಬದಲಾವಣೆ ಹಾಗೂ ಸುಧಾರಣೆ ಕಂಡುಬರುತ್ತಿಲ್ಲ. ಹಣವಿಲ್ಲದ್ದಕ್ಕೆ ಅವರಿಗೆ ಶೌಚಾಲಯವಿಲ್ಲವೋ ಅಥವಾ ಶೌಚಾಲಯ ಅವರಿಗೆ ಬೇಕು ಅಂತ ಅನ್ನಿಸಿದೆಯೋ ಇಲ್ಲವೋ? ಎಂಬ ಪ್ರಶ್ನೆಗಳು ಏಳುವುದು ಸಹಜ. ಅವರಿಗೆ ಮೊಬೈಲ್‌ ಬೇಕು. ಟಿವಿ-ರೇಡಿಯೋಗಳು ಬೇಕು. ಹಾಗಾಗಿ ಅವುಗಳನ್ನು ಅವರು ಕೊಂಡುಕೊಂಡಿದ್ದಾರೆ. ಆದರೆ ಅವರಿಗೆ ಶೌಚಾಲಯಗಳಿಲ್ಲ. ಅಂದರೆ, ಅವರಿಗೆ ಬೇಕು ಅನ್ನಿಸಿಲ್ಲದಿರಬಹುದು ಅಥವಾ ಶೌಚಾಲಯ ಎಂಬುದು ಅವರ ಆದ್ಯತೆಯಾಗಿಲ್ಲದಿರಬಹುದು. ಅಥವಾ ಅವರಿಗೆ ಶೌಚಾಲಯದ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರಬಹುದು. ಒಟ್ಟಾರೆ ಜನರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಜರೂರಿದೆ.

//swachhamevajayate.org/wp-content/uploads/2020/02/Blog-3.jpeg

ಮನೆಗಳಲ್ಲಿ ಶೌಚಾಲಯಗಳಿಲ್ಲದ ಜನರಿಗೆ ಊರ ಹೊರಗಿನ ಪೊದೆಗಳೇ ನಿತ್ಯ ಬಳಕೆಯ ಬಯಲು ಶೌಚಾಲಯಗಳು. ಮಲ-ಮೂತ್ರ ವಿಸರ್ಜನೆಗಳಿಗೆ ನೂರಾರು ವರ್ಷಗಳಿಂದ ಬಳಸಿದ ಜಾಗವನ್ನೇ ಬಳಸುತ್ತಿರುವ ಆ ಜನರಿಗೂ ಹಾಗೂ ಮತ್ತೆ ಮತ್ತೆ ಬರುವ ರೋಗಗಳಿಗೂ ಅಂಟಿದ ನಂಟು ಕಡಿಮೆಯಾಗಿಲ್ಲ. ಈಗೀಗ ಊರುಗಳು ಬೆಳೆಯುತ್ತಿವೆ. ಊರು ಬೆಳೆದಂತೆ ಊರ ಸುತ್ತಲ ಪೊದೆಗಳೂ ಮರೆಯಾಗಿವೆ. ಹಗಲು ಹೊತ್ತಿನಲ್ಲಿ ಮಲ-ಮೂತ್ರಗಳ ವಿಸರ್ಜನೆಗೆ ಹೋಗಬೇಕೆಂದರೆ ಅಲ್ಲಿನ ಹೆಣ್ಣುಮಕ್ಕಳ ಪಾಡು ಹೇಳತೀರದು. ಅವರಿಗೆ ಮರೆ ಬೇಕು. ಗೌಪ್ಯತೆ ಬೇಕು. ಅದಕ್ಕಾಗಿ ಅವರು ಕತ್ತಲಿಗಾಗಿ ಕಾಯಲೇಬೇಕು. ಆದ್ದರಿಂದಲೇ ಬೆಳಕು ಹರಿಯುವ ಮುನ್ನ, ಸಂಜೆಯಾದ ನಂತರ ಹಳ್ಳಿಗಳ ರಸ್ತೆ ಬದಿಗಳಲ್ಲಿ ಮಲ ವಿಸರ್ಜನೆಗೆ ಕುಳಿತ ಮಹಿಳೆಯರ ಸಾಲು ಸಾಲು ದೃಶ್ಯಗಳು ಗ್ರಾಮೀಣ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ. ಪೋಲಿ-ಪೋಕರಿಗಳ ಕಾಟ, ಕಳ್ಳ-ಕಾಕರ ಕಾಟ, ಕತ್ತಲಿನ ಭಯ, ಹುಳ-ಹುಪ್ಪಟಗಳ ಭಯ ಅವರಿಗೆ ತಪ್ಪಿದ್ದಲ್ಲ. ಇಷ್ಟಾದರೂ ಅವರು ಶೌಚಾಲಯ ನಿರ್ಮಿಸಿಕೊಂಡು ಬಳಕೆ ಮಾಡುವ ಬಗ್ಗೆ ಮನಸ್ಸು ಮಾಡುತ್ತಿಲ್ಲ.
ಸಾಮಾನ್ಯವಾಗಿ ನಮ್ಮ ಜನರನ್ನು ಕಾಡುತ್ತಿರುವ ಬಹುಪಾಲು ಕಾಯಿಲೆಗಳಿಗೆ ಅಶುದ್ಧ ನೀರು, ಕಲುಷಿತ ಪರಿಸರ ಮತ್ತು ಬಯಲು ಮಲ ವಿಸರ್ಜನೆಯಂತ ಕೆಟ್ಟ ಅಭ್ಯಾಸಗಳೇ ಪ್ರಮುಖ ಕಾರಣಗಳಾಗಿವೆ. ಬಯಲಲ್ಲಿ ಬಿದ್ದ ಮನುಷ್ಯನ ಮಲ ಅತ್ಯಂತ ಅಪಾಯಕಾರಿ ಎಂಬ ಅರಿವು ಹೆಚ್ಚಿನ ಜನರಿಗೆ ಇರುವುದಿಲ್ಲ. ಹೆಚ್ಚಿನ ಪ್ರಮಾಣದ ಶಿಶು ಮರಣಗಳು ಅನೈರ್ಮಲ್ಯ ವ್ಯವಸ್ಥೆಯಿಂದಾಗಿ ಸಂಭವಿಸುತ್ತವೆ. ಬಯಲಿನಲ್ಲಿ ಶೌಚ ಮಾಡುವುದರಿಂದ ಮನುಷ್ಯನ ಮಲ ನೀರು, ನೊಣ, ಬರಿಗಾಲು ಮತ್ತು ಆಹಾರದ ಮೂಲಕ ಮನುಷ್ಯನ ದೇಹವನ್ನು ಸೇರುತ್ತದೆ ಹಾಗೂ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ.

ದೇಶದ ಪಾತ್ರ; ಯೋಜನೆಗಳ ಸ್ವರೂಪ

ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೈರ್ಮಲ್ಯ ಸುಧಾರಣೆಗಾಗಿ ಕಳೆದ ಮೂರು ದಶಕಗಳಿಂದ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಾ ಬಂದಿವೆ.

//swachhamevajayate.org/wp-content/uploads/2020/02/Blog-4.jpeg

ಅವುಗಳಲ್ಲಿ ಮುಖ್ಯವಾದವುಗಳೆಂದರೆ;

ಕೇಂದ್ರ ಗ್ರಾಮೀಣ ನೈರ್ಮಲ್ಯ ಯೋಜನೆ, ಕೇಂದ್ರ ಸರಕಾರದ ವಲಯ ಸುಧಾರಣೆ ಯೋಜನೆ,
ಮಕ್ಕಳ ಪರಿಸರ ಅಭಿವೃದ್ಧಿ ಯೊಜನೆ, ಸಮಗ್ರ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಯೋಜನೆ, ನಿರ್ಮಲ ಕರ್ನಾಟಕ ಯೋಜನೆ, ಸ್ವಚ್ಛ ಗ್ರಾಮ ಯೋಜನೆ, ಸಂಪೂರ್ಣ ಸ್ವಚ್ಛತಾ ಆಂದೋಲನ, ನಿರ್ಮಲ ಭಾರತ ಅಭಿಯಾನ ಹಾಗೂ ಸ್ವಚ್ಛ ಭಾರತ ಅಭಿಯಾನ ಯೋಜನೆಯೂ ಸೇರಿದೆ. ಈ ಎಲ್ಲ ಯೋಜನೆಗಳ ಸರಕಾರವೇ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದೂ ಉಂಟು. ಆದರೆ, ಬಹುಪಾಲು ಜನ ಆ ಶೌಚಾಲಯಗಳನ್ನು ಬಳಸುತ್ತಿಲ್ಲ. ಮನೆಯಲ್ಲಿ ಶೌಚಾಲಯವಿದ್ದರೂ ಜನರು ಬಯಲು ಶೌಚಾಲಯದತ್ತಲೇ ಹೋಗುತ್ತಿದ್ದಾರೆ.
ಸಮುದಾಯದ ಸಹಭಾಗಿತ್ವವಿಲ್ಲದೆ ಸ್ವಚ್ಛತೆಯಂತಹ ಯೋಜನೆಗಳು ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಸಮುದಾಯಗಳು, ಸಂಘ ಸಂಸ್ಥೆಗಳು, ಮಹಿಳಾ ಸಂಘಗಳು, ಯುವಜನತೆ, ಧಾರ್ಮಿಕ ಮುಖಂಡರು, ಜನಸೇವಕರು, ಸ್ಥಳೀಯ ಸರ್ಕಾರಗಳು, ಪಂಚಾಯತ್‌ ರಾಜ್‌ ಸಂಸ್ಥೆಗಳು ಹೀಗೆ ಜನಸಮುದಾಯದ ಸಹಭಾಗಿತ್ವದೊಂದಿಗೆ ಮಾತ್ರ ಶೌಚಾಲಯ ನಿರ್ಮಾಣ, ಶೌಚಾಲಯ ಬಳಕೆ ಹಾಗೂ ಸ್ವಚ್ಛತೆಯ ಅಭ್ಯಾಸಗಳಲ್ಲಿ ಉತ್ತಮ ರೀತಿಯ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ.

//swachhamevajayate.org/wp-content/uploads/2020/02/blog-2.jpg

ಆಚರಣೆಯನ್ನೂ ಮಾಡಲಾಗುತ್ತಿದೆ ; ಮಹತ್ವವನ್ನು ಇನ್ನಾದರೂ ಅರಿಯಬೇಕಿದೆ

ಜಗತ್ತಿನಾದ್ಯಂತ ನವೆಂಬರ್‌ 19 ಅನ್ನು 'ವಿಶ್ವ ಶೌಚಾಲಯ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ಈ ಮೂಲಭೂತ ಸೌಕರ್ಯವನ್ನೂ ಒಂದು ದಿನಾಚರಣೆಯನ್ನಾಗಿ ಆಚರಿಸುತ್ತಿರುವ ತಾತ್ಪರ್ಯವಿಷ್ಟೆ.
ವಿಶ್ವದ ಎಲ್ಲೆಡೆ ನೈರ್ಮಲ್ಯದ ಪ್ರಾಮಖ್ಯತೆ ಹಾಗೂ ಅಗತ್ಯವನ್ನು ಮನವರಿಕೆ ಮಾಡುವುದು ಮತ್ತು ಶೌಚಾಲಯ ಬಳಕೆ ಹಾಗೂ ಸ್ವಚ್ಛತೆಯ ಅಭ್ಯಾಸಗಳ ಕುರಿತು ಜಾಗತಿಕ ಮಟ್ಟದಲ್ಲಿ ಉತ್ತೇಜನ ನೀಡುವ ಮಹತ್ವದ ಉದ್ದೇಶದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. 2013ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನ.19 ಅನ್ನು 'ವಿಶ್ವ ಶೌಚಾಲಯ ದಿನ' ಎಂದು ಅಧಿಕೃತವಾಗಿ ಘೋಷಿಸಿತು. ಶೌಚಾಲಯ ನಿರ್ಮಾಣ, ಬಳಕೆ ಹಾಗೂ ಸ್ವಚ್ಛತೆಯ ಅಭ್ಯಾಸಗಳನ್ನು ಉತ್ತೇಜಿಸುವ ಇಂಥ ಕಾರ್ಯಕ್ರಮಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವುದು ಅತ್ಯಂತ ಅವಶ್ಯಕ ಹಾಗೂ ಔಚಿತ್ಯಪೂರ್ಣವೂ ಆಗಿದೆ.

WhatsApp chat