Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಭಾರತದ ಯಾವೊಬ್ಬ ವ್ಯಕ್ತಿಯೂ ಶುದ್ಧ, ಸುರಕ್ಷಿತ ನೀರು ಸಿಗದೇ ಪರದಾಡಬಾರದು. ಪ್ರತಿದಿನ ಪ್ರತಿಯೊಬ್ಬ ವ್ಯಕ್ತಿಗೂ 55 ಎಲ್.ಪಿ.ಸಿ.ಡಿ ನೀರು ಸಿಗಬೇಕು ಎಂಬ ಉದ್ದೇಶದಿಂದ ಆರಂಭವಾದ ಯೋಜನೆಯೇ ಜಲ ಜೀವನ್ ಮಿಷನ್ ಯೋಜನೆ. ಕೊಡಗು ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಂತೆ ಮೊದಲ ವರ್ಷದಲ್ಲಿ ಆಯ್ಕೆಯಾದ ಜಿಲ್ಲೆಯ 191 ಜನವಸತಿ ಪ್ರದೇಶಗಳಲ್ಲಿ ಸೋಮವಾರಪೇಟೆಯ ತಾಲೂಕಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಿಬ್ಬೆಟ್ಟ ಗ್ರಾಮ ಕೂಡ ಒಂದು.

239 ಕುಟುಂಬಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಮನೆ ಮನೆಗೆ ಗಂಗೆ ಯೋಜನೆ ಅನುಷ್ಠಾನಕ್ಕೆ ಬರುವ ಮೊದಲು ಪರಿಸ್ಥಿತಿ ತುಂಬಾನೇ ಭಿನ್ನವಾಗಿತ್ತು. ಅನೇಕ ಕುಟುಂಬಗಳಿಗೆ ಪ್ರತಿದಿನ ಮನೆಯ ದಿನನಿತ್ಯದ ಬಳಕೆಗೆ ನೀರು ಶೇಖರಿಸುವುದು ಬಹುದೊಡ್ಡ ಸವಾಲಾಗಿತ್ತು. ಆ ಎಲ್ಲಾ ಕುಟಂಬಗಳು ಗ್ರಾಮದಲ್ಲಿದ್ದ ಸಿಸ್ಟನ್ ಟ್ಯಾಂಕ್ ನ್ನೇ ಅವಲಂಬಿಸಬೇಕಾಗಿತ್ತು. ಮನೆಯಿಂದ ದೂರವಿದ್ದ ಕಾರಣ ಅಲ್ಲಿಗೆ ಹೋಗಿ ನೀರು ತರುವುದಕ್ಕೆ ತುಂಬಾ ಸಮಯ ಬೇಕಾಗಿದ್ದರಿಂದ ಅದರಲ್ಲೇ ಹೆಚ್ಚಿನ ಸಮಯ ಕಳೆಯ ಕಳೆದು ಹೋಗುತ್ತಿತ್ತು.

ಹೀಗೆ ನೀರಿಗಾಗಿ ಕಿಬ್ಬೆಟ್ಟ ಗ್ರಾಮದ ಜನ ಪರದಾಡುತ್ತಿರುವಾಗ ಅವರಿಗೊಂದು ಶುಭಸುದ್ದಿ ಸಿಕ್ಕಿತು. 2020-21ನೇ ಸಾಲಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಚೌಡ್ಲು ಗ್ರಾಮ ಪಂಚಾಯಿತಿಯನ್ನು ಸೇರಿಸಲಾಯಿತು. ಅದರಂತೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ, ಅನುಷ್ಠಾನ ಬೆಂಬಲ ಸಂಸ್ಥೆಯ ನೆರವು ಪಡೆದು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮ ಕ್ರಿಯಾಯೋಜನೆಯನ್ನು ತಯಾರಿಸಿ, ಗ್ರಾಮಸಭೆಯಲ್ಲಿ ಅನುವೋದನೆಯನ್ನು ಪಡೆಯಲಾಯಿತು.

ಗ್ರಾಮದಲ್ಲಿ ಒಟ್ಟು 239 ಮನೆಗಳಿದ್ದು, ಇದರಲ್ಲಿ 209 ಮನೆಗಳು ಮೊದಲೇ ನಳ ಸಂಪರ್ಕವನ್ನು ಹೊಂದಿದ್ದವು ಉಳಿದ 3೦ ಮನೆಗಳಿಗೆ ಮನೆ ಮನೆಗೆ ಗಂಗೆ ಯೋಜನೆಯಡಿ ನೀರು ಸಂಪರ್ಕ ಒದಗಿಸಲು ಸಾಧ್ಯವಾಯಿತು. ಸದ್ಯ ಆ ಮನೆಗಳಿಗೆ ನೀರನ್ನು ತಲುಪಿಸಲು ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಂಡಿದ್ದು ಇದರಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ ಜಿ.ಎಲ್.ಎಸ್.ಆರ್(Ground Level Storage Reservoir) ನ್ನು ನಿರ್ಮಿಸಲು ಸಾಧ್ಯವಾಗಿದೆ. ಇದರಿಂದಾಗಿ ಪ್ರತಿ ಮನೆಗೂ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ನೀಡಲು ಯಶಸ್ವಿಯಾಗಿದ್ದೇವೆ ಎಂದು ಹೇಳುತ್ತಾರೆ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರಮೇಶ್ ಎನ್.ಪಿ. ಅವರು.

ಮನೆ ಮನೆಗೆ ಗಂಗೆ ಯೋಜನೆಯಡಿ ಕಿಬ್ಬೆಟ್ಟ ಗ್ರಾಮದ ಅಂಗನವಾಡಿ ಕೇಂದ್ರವು ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಕಾರ್ಯಾತ್ಮಕ ನಳ ಸಂಪರ್ಕವನ್ನು ಹೊಂದಿದ್ದು, ಇದರಿಂದಾಗಿ ಅಂಗನವಾಡಿಯ 17 ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ಅನುಕೂಲವಾಗಿದೆ. ಇಷ್ಟು ದಿನ ಅಂಗನವಾಡಿ ಕೇಂದ್ರಕ್ಕೆ ಸರಿಯಾದ ನೀರಿನ ವ್ಯವಸ್ಥೆ ಇರಲಿಲ್ಲ.ಆದರೆ ಈಗ ಮನೆ ಮನೆಗೆ ಗಂಗೆ ಯೋಜನೆಯಡಿ ಕಾರ್ಯಾತ್ಮಕ ಗೃಹ ನಳ ಸಂಪರ್ಕ ಸಿಕ್ಕಿರುವುದರಿಂದ ತುಂಬಾನೇ ಖುಷಿಯಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಖುಷಿ ಹಂಚಿಕೊಂಡಿದ್ದಾರೆ.

ಕಾರ್ಯಾತ್ಮಕ ಗೃಹ ನಳ ಸಂಪರ್ಕ ಪಡೆಯುವ ಮುನ್ನ ನಾವು ನೀರಿಗಾಗಿ ಅಲೆದಾಡಬೇಕಾಗಿತ್ತು. ಅದಕ್ಕೆ ತುಂಬಾ ಸಮಯ ಹಿಡಿಯುತ್ತಿತ್ತು.ಆದರೆ ಈಗ ಮನೆ ಬಾಗಿಲಿಗೇ ನೀರು ಬರುತ್ತಿರುವುದರಿಂದ ಕಷ್ಟದ ದಿನಗಳು ಮಾಯವಾಗಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಸ್ಥಳೀಯ ನಿವಾಸಿ ಮುತ್ತಮ್ಮ ಅವರು.

ಇದು ಕೇವಲ ಕಿಬ್ಬೆಟ್ಟ ಗ್ರಾಮವೊಂದರ ಕಥೆಯಲ್ಲ. ಮನೆ ಮನೆಗೆ ಗಂಗೆ ಯೋಜನೆಯಿಂದಾಗಿ ಕರ್ನಾಟಕದ ಅದೆಷ್ಟೋ ಗ್ರಾಮಗಳಲ್ಲಿ ಖುಷಿ ಹೆಚ್ಚಾಗಿದೆ. ಶುದ್ಧ , ಸುರಕ್ಷಿತ ನೀರು ಸಿಗುತ್ತಿರುವುದರಿಂದ ಅದೆಷ್ಟೋ ಜನ ಬಹುದೊಡ್ಡ ಸಮಸ್ಯೆ ಬಗೆಹರಿಯಿತುಅಂತಾ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

 3,587 total views,  4 views today

WhatsApp chat